ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಪಾಠ ಕಲಿಸಿ!

ವಾಚಕರ ವಾಣಿ
Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ 1,237 ಮತಗಳು ತಿರಸ್ಕೃತಗೊಂಡಿವೆ (ಪ್ರ.ವಾ., ಫೆ. 8). ಅಂದರೆ ಶಿಕ್ಷಕರಿಗೂ ಮತದಾನದ ಹಕ್ಕು ಚಲಾಯಿಸುವ ಪ್ರಕ್ರಿಯೆ ಬಗ್ಗೆ ಅರಿವಿಲ್ಲ ಎಂದಾಯಿತು!
 
ಶಿಕ್ಷಕರೇ ಹೀಗೆ ಮತ ಹಾಕುವ ವಿಷಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ತಪ್ಪು ಮಾಡಿದಾಗ ಇನ್ನು ಜನಸಾಮಾನ್ಯರಿಂದ ತಪ್ಪಾಗುವುದು ಸಹಜ. ಅನಕ್ಷರಸ್ಥರು ಕೂಡ ಮತದಾನ ಮಾಡುವಾಗ ಎಚ್ಚರಿಕೆ ವಹಿಸುತ್ತಾರೆ. ಇನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ವರ್ಗವೇ ತಪ್ಪು ಮಾಡಿದರೆ ಹೇಗೆ? ಇದು ಶಿಕ್ಷಕರ ಅಸಡ್ಡೆಯೋ ಬೇಜವಾಬ್ದಾರಿಯೋ ಎಂಬ ಅನುಮಾನ ಕಾಡದೇ ಇರದು.
 
ಮತದಾನದ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ಮಹಾಹಬ್ಬ ಎಂದೇ ಬಣ್ಣಿಸಲಾಗುತ್ತದೆ. ಹೀಗಾಗಿ ಸರ್ಕಾರ ಶಿಕ್ಷಕರಿಗೆ ಸೂಕ್ತ ರೀತಿಯಲ್ಲಿ ಮತದಾನ ಮಾಡುವ ಪಾಠ ಹೇಳಿಕೊಡಬೇಕು.
ದೇವೇಶ ಸೂರಗುಪ್ಪ, ಸಾಗರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT