ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದು ಮಾಡಿದೆ ‘ಶುದ್ಧಿ’ ಟ್ರೇಲರ್‌

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ವಿರುದ್ಧ ಪತ್ರಕರ್ತರು, ಪೊಲೀಸ್‌ ಅಧಿಕಾರಿಗಳು ನಡೆಸುವ ಕಾರ್ಯತಂತ್ರದ ಎಳೆಯಿರುವ  ಕನ್ನಡ ಚಲನಚಿತ್ರ ‘ಶುದ್ಧಿ’ಯ ಟ್ರೇಲರ್‌ ಬಿಡುಗಡೆಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸಬರ  ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ ‘ಶುದ್ಧಿ’ ಸಹ ಸೇರುವ ಮುನ್ಸೂಚನೆಯನ್ನು ಟ್ರೇಲರ್‌ ನೀಡಿದೆ.

ಭಾರತೀಯ ಸಂಸ್ಕೃತಿ, ಇಲ್ಲಿನ ಪುರಾಣದ ಕಥೆಗಳ ಬಗ್ಗೆ   ತಿಳಿದುಕೊಳ್ಳುವ ಬಯಕೆಯಿಂದ  ಅಮೆರಿಕದಿಂದ ಮಹಿಳೆಯೊಬ್ಬರು ಬೆಂಗಳೂರಿಗೆ ಬರುತ್ತಾರೆ. ಹೆಣ್ಣನ್ನು ದೇವತೆಯ ರೂಪ ಎಂದು ಪರಿಗಣಿಸಿರುವ ಈ ಸಮಾಜದಲ್ಲಿ ಅದೇ ಹೆಣ್ಣಿನ ಮೇಲೆ ನಡೆಯುತ್ತಿರುವ  ದೌರ್ಜನ್ಯವನ್ನು ಕಂಡು ಅವರು ಹೌಹಾರುತ್ತಾರೆ. ಸಮಸ್ಯೆಯ ವಿರುದ್ಧ ಆಕೆ ನಡೆಸುವ ಹೋರಾಟದ ಕತೆ ಚಿತ್ರದಲ್ಲಿದೆ.

bit.ly/2k100hq

ಹಾಲಿವುಡ್‌ ಸಿನಿಮಾದ  ದೃಶ್ಯಗಳ ರೀತಿಯಲ್ಲಿಯೇ ಟ್ರೇಲರ್‌  ಸಿದ್ಧಪಡಿಸಲಾಗಿದೆ. ವಿದೇಶಿ ನಟಿಯರೂ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಾರಣ ಕುತೂಹಲ ಹೆಚ್ಚಿಸಿದೆ. ಫೆ.3ರಂದು ಬಿಡುಗಡೆಯಾಗಿರುವ ಶುದ್ಧಿ ಚಿತ್ರದ ಟ್ರೇಲರ್‌ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

‘ಅವ್ವ’ ಸಿನಿಮಾದ ಮೂಲಕ ಗಮನಸೆಳೆದಿದ್ದ ನಟಿ ನಿವೇದಿತಾ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದು,  ಲಾರೆನ್‌ ಸ್ಪಾರ್ಟೆನೋ ಹಾಗೂ ಅಮೃತಾ ಕರಗದ ಪ್ರಮುಖ ಪಾತ್ರದಲ್ಲಿದ್ದಾರೆ. ಜೆಸ್ಸಿ ಕ್ಲಿಂಟನ್‌ ಸಂಗೀತ, ಆ್ಯಂಡ್ರೂ ಇಲೋ ಛಾಯಾಗ್ರಹಣ ಹಾಗೂ ಆದರ್ಶ್‌ ಎಚ್‌.ಈಶ್ವರಪ್ಪ ಅವರ ನಿರ್ದೇಶನವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT