ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೊಗಡಿನ ‘ಕಲರವ’

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಒಂದು ಹಳ್ಳಿಯಲ್ಲಿ ನಡೆಯುವ ಕಲರವವೇ ನಮ್ಮ ಚಿತ್ರದ ಕಥೆ. ಆ ಕಲರವ ಯಾವ ಬಗೆಯದು ಎಂಬುದನ್ನು ಚಿತ್ರಮಂದಿರದಲ್ಲಿ ತೋರಿಸುತ್ತೇವೆ’ ಎಂದರು ನಿರ್ದೇಶಕ ಸಂದೀಪ್ ದಕ್ಷ್‌. ‘ಈ ಕಲರವ’ ಚಿತ್ರದ ಹಾಡುಗಳ ಸೀಡಿ ಬಿಡುಗಡೆಯ ಸಂದರ್ಭದಲ್ಲಿ ಅವರು ಸುದ್ದಿಗಾರರದೊಂದಿಗೆ ಮಾತನಾಡಿದರು.

‘ಗ್ರಾಮೀಣ ಸೊಗಡನ್ನು ಹೇರಳವಾಗಿ ತುಂಬಿಕೊಂಡಿರುವ ಈ ಕಥೆಯಲ್ಲಿ ಮಧುರ ಪ್ರೇಮ ಕಾವ್ಯವೂ ಇದೆ. ಪ್ರತಿ ಸನ್ನಿವೇಶದಲ್ಲೂ ಹೊಸತನ ನೀಡಲು ಪ್ರಯತ್ನಿಸಿದ್ದು, ಅದೇ ಪ್ರಯೋಗವನ್ನು ಸಂಭಾಷಣೆಯಲ್ಲೂ ಕಾಣಬಹುದು’ ಎಂದರು ಸಂದೀಪ್. ಮೊದಲ ಬಾರಿ ನಿರ್ದೇಶನದ ಹೊಣೆ ಹೊತ್ತ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಜವಾಬ್ದಾರಿಯುತ ಹುಡುಗನೊಬ್ಬ ಹಳ್ಳಿಯನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾನೆ ಎಂದು ತೋರಿಸುವದರ ಜೊತೆಗೆ ಒಂದೊಳ್ಳೆಯ ಸಂದೇಶ ಸಾರುವ ಕೆಲಸವನ್ನೂ ಅವರು ಮಾಡಿದ್ದಾರಂತೆ.

‘ಗ್ರಾಮೀಣ ಪ್ರದೇಶದ ಕಥೆಯಲ್ಲಿ ರಾಜಕೀಯ, ಪ್ರೇಮ ಎರಡನ್ನೂ ಹದವಾಗಿ ಮಿಶ್ರಣ ಮಾಡಿ ಚಿತ್ರಕಥೆ ಮಾಡಲಾಗಿದೆ’ ಎಂದರು ನಾಯಕ ನವೀನ್‌ಕೃಷ್ಣ. ‘ನಾಯಕಿ ಎನ್ನುವುದಕ್ಕಿಂತಲೂ ಪ್ರಮುಖ ಪಾತ್ರ ನಿರ್ವಹಿಸಿದ್ದೇನೆ’ ಎಂದರು ನಾಯಕಿ ರೋಹಿಣಿ ಭಾರದ್ವಾಜ್. ಶಿಕ್ಷಕಿಯಾಗಿ ಕಾಣಿಸಿಕೊಂಡ ರಶ್ಮಿ ಮತ್ತೊಬ್ಬ ನಾಯಕಿ.

ಕೆ.ಆರ್.ನಗರ ತಾಲ್ಲೂಕಿನ ಟಿ.ತಿಪ್ಪೂರು ಗ್ರಾಮದಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಗಾರೆ ಕೆಲಸ ಮಾಡಿ ಹಣ ಕೂಡಿಟ್ಟ ಎಂ. ಮಹದೇವ ‘ಈ ಕಲರವ’ಕ್ಕೆ ಬಂಡವಾಳ ಹೂಡಿದ್ದಾರೆ. ಪೀಟರ್ ಎಂ. ಜೋಸೆಫ್, ಪ್ರಕಾಶ್ ಬಾಬು ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಾ.ರಾ. ಮಹೇಶ್ ಹಾಡುಗಳ ಸೀಡಿ ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹಾಡುಗಳು ಮತ್ತು ಟ್ರೈಲರ್ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT