ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಜನಪ್ರತಿನಿಧಿಗಳೇ?

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿಧಾನಸಭಾ ಕಲಾಪದಲ್ಲಿ ಶಾಸಕರು ಅತಿ ಕಡಿಮೆ ಸಂಖ್ಯೆಯಲ್ಲಿ ಹಾಜರಾಗಿದ್ದರಿಂದ, ಕೋರಂ ಇಲ್ಲದೆ ಕಲಾಪವನ್ನು ಆರಂಭಿಸಲು ತಡವಾಗಿದ್ದು ವರದಿಯಾಗಿದೆ (ಪ್ರ.ವಾ., ಫೆ. 9).

ರಾಜ್ಯದಲ್ಲಿ ತಲೆದೋರಿರುವ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಕೂಲಿ ಕಾರ್ಮಿಕರು ಊರಿಂದ ಊರಿಗೆ ಗುಳೆ ಹೊರಟಿದ್ದಾರೆ. ಇಂತಹ ಸಂಕಷ್ಟ ಎದುರಾಗಿರುವಾಗ, ಜನಪ್ರತಿನಿಧಿಗಳು ಕಲಾಪದಲ್ಲಿ ಭಾಗವಹಿಸಿ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಹೋಗಿದ್ದಾದರೂ ಎಲ್ಲಿಗೆ? ಮತದಾರರ ಕಷ್ಟಗಳಿಗೆ ಓಗೊಡದ ಇವರನ್ನು ಜನಪ್ರತಿನಿಧಿಗಳೆಂದು ಕರೆಯುವು ದಾದರೂ ಹೇಗೆ?
-ಪ್ರೊ. ಟಿ.ನಾರಾಯಣಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT