ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆವ್ವಗಳ ವೈಭವೀಕರಣ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಹಿರಿತೆರೆ ಕಿರುತೆರೆಯೆನ್ನದೆ ಇತ್ತೀಚೆಗೆ ಎಲ್ಲರೂ ದೇವರು, ದೆವ್ವಗಳ ಹಿಂದೆ ಬಿದ್ದಿದ್ದಾರೆ. ಇವುಗಳ ಅತಿಯಾದ ವೈಭವೀಕರಣದಿಂದ ವೀಕ್ಷಕರಲ್ಲಿ ಮೂಢ ನಂಬಿಕೆಯನ್ನು ಬಿತ್ತುತ್ತಿದ್ದಾರೆ. ಕಿರುತೆರೆಯಲ್ಲಿ ದೆವ್ವದ ಕುರಿತು ಬರುತ್ತಿರುವ ಧಾರಾವಾಹಿಗಳಲ್ಲಿ ಚಿಕ್ಕ ಮಕ್ಕಳನ್ನೂ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಇಂತಹ ಧಾರಾವಾಹಿಗಳನ್ನು  ನೋಡುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ.

ಇವುಗಳನ್ನು ತೆಗೆಯುವ ನಿರ್ದೇಶಕರು, ನಿರ್ಮಾಪಕರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ಇನ್ನಾದರೂ ಅವರು ತಮ್ಮ ಅಭಿರುಚಿಯನ್ನು ಬದಲಾಯಿಸಿಕೊಂಡು, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹವುಗಳನ್ನು ಚಿತ್ರಿಸಲಿ.
-ಗಣೇಶ ಆರ್., ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT