ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಕ ಭಾಷೆ...

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಡಾ. ಮನಮೋಹನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ‘ರೇನ್ ಕೋಟ್ ಧರಿಸಿ ಸ್ನಾನ ಮಾಡುವುದನ್ನು ಡಾಕ್ಟರ್‌ ಸಾಹೇಬರಿಂದ ಕಲಿಯಬೇಕು’ ಎಂದು ನರೇಂದ್ರ ಮೋದಿ ಅವರು ಟೀಕಿಸಿರುವುದು ಆರೋಗ್ಯಕರ ರಾಜಕೀಯ ಟೀಕೆಯಾಗಿದೆ. ಅದನ್ನು ಅರ್ಥ ಮಾಡಿಕೊಳ್ಳಲಾಗದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ, ರಾಜ್ಯಸಭೆಯ ಕಲಾಪ ಹಾಳುಮಾಡಿರುವುದು ನಾಚಿಕೆಗೇಡು.

ಮೋದಿಯವರ ಹೇಳಿಕೆಯಿಂದ ಹಗರಣಮುಕ್ತ, ಎಚ್ಚರಿಕೆಯ ನಡೆಯುಳ್ಳ, ಯಾವ ಏಟಿಗೂ ಸಿಕ್ಕದ ರಕ್ಷಣಾತ್ಮಕ ರಾಜಕಾರಣಿ ಎಂಬ ಅರ್ಥಗಳನ್ನು ಪಡೆಯಬಹುದಾಗಿದೆ. ಇಂಥ ನವಿರು ಟೀಕೆಗೆ ನೂರಕ್ಕೆ ನೂರು ಅಂಕಗಳು ಸಿಗಬೇಕು. ‘ನಾಲಗೆ ಕತ್ತರಿಸು’ ಎನ್ನುವ ರಾಜಕಾರಣಿಗಳು ಮೋದಿ ಅವರಿಂದ ಪಾಠ ಕಲಿಯಬೇಕು. ಸ್ವತಃ ಮನಮೋಹನ್ ಸಿಂಗ್ ಅವರೇ ಹೆಮ್ಮೆಪಡಬಹುದಾದ ಟೀಕೆ ಇದು.

ಮೇಲ್ಮನೆಗೆ ಆಯ್ಕೆ ಆಗುವ ಸದಸ್ಯರು ಶಿಕ್ಷಣ, ಕಲೆ, ಸಾಹಿತ್ಯ ಮೊದಲಾದ ಕ್ಷೇತ್ರಗಳ ದಿಗ್ಗಜರಾಗಿರುತ್ತಾರೆ. ಅವರಿಗೆ  ರೇನ್ ಕೋಟ್ ಮತ್ತು ಸ್ನಾನದ ರೂಪಕ ಭಾಷೆಯ ಅರ್ಥ ತಿಳಿಯಬೇಕಿತ್ತು. ಕಾಂಗ್ರೆಸ್ ಸದಸ್ಯರಲ್ಲಿ ಒಬ್ಬರಾದರೂ ರೂಪಕ ಭಾಷೆ ಅರ್ಥಮಾಡಿಕೊಳ್ಳುವ ಕವಿ–ಸಾಹಿತಿಗಳಿಲ್ಲವೇ?

ಹಾಗಾದರೆ  ಆ ರಾಜ್ಯಸಭಾ ಸದಸ್ಯರೆಲ್ಲ ಎಲ್ಲಿಂದ ಬಂದವರು?  ರಾಹುಲ್ ಗಾಂಧಿ ಅವರು ಇಂಥ ಭಟ್ಟಂಗಿಗಳನ್ನು ಪಕ್ಕ ಇಟ್ಟುಕೊಂಡಿರುವುದು ಬಿಜೆಪಿಗೆ ದುಪ್ಪಟ್ಟು ಲಾಭ. ಮೋದಿ ಅವರ ರೂಪಕ ಭಾಷೆಯು ಆದರ್ಶ ರಾಜಕಾರಣದ ಮುನ್ನುಡಿಯಂತಿದೆ.
–ಬೆಳ್ಳೂರು ಸಿ. ವೆಂಕಟಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT