ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಗಲ್ ರಾಜಕಾರಣಕ್ಕೆ ಸಾಟಿ ಇಲ್ಲ’

‘ಆಧುನಿಕ ಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ’ ಕೃತಿ ಬಿಡುಗಡೆ ಕಾರ್ಯಕ್ರಮ
Last Updated 11 ಫೆಬ್ರುವರಿ 2017, 8:53 IST
ಅಕ್ಷರ ಗಾತ್ರ

ಮೈಸೂರು: ಕೆಂಗಲ್ ಹನುಮಂತಯ್ಯ ಅವರ ರಾಜಕಾರಣವನ್ನು ಇಂದಿನ ರಾಜಕಾರಣಕ್ಕೆ ಯಾವುದೇ ಬಗೆಯಲ್ಲೂ ಹೋಲಿಸಲಾಗದು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕಸಾಪ ಸಭಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಎಚ್.ಎಂ.ನಾಗರಾಜು ಅವರ ‘ಆಧುನಿಕ ಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ನಾಗರಾಜು ಅವರ ಕೃತಿಯು ಒಪ್ಪವಾಗಿ, ಚೊಕ್ಕವಾಗಿ ರಚಿತವಾಗಿದೆ. ಹನುಮಂತಯ್ಯ ಅವರ ಗ್ರಾಮೀಣ ಬದುಕಿನ ಸಂಗತಿಗಳನ್ನು ಲೇಖಕರು ಸುಂದರವಾಗಿ ರಚಿಸಿದ್ದಾರೆ ಎಂದು ಶ್ಲಾಘಿಸಿದರು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತ ನಾಡಿ, ಪ್ರಸ್ತುತ ಕುಲಗೆಟ್ಟು ಹೋಗಿರುವ ರಾಜಕಾರಣಕ್ಕೆ ಇಂತಹದ್ದೊಂದು ಕೃತಿಯ ಅನಿವಾರ್ಯತೆ ನಿರ್ಮಾಣ ವಾಗಿತ್ತು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಹಾಗೂ ಶಂಕರೇಗೌಡ ಅವರ ಆದರ್ಶಗಳು ಇಂದಿನವರಿಗೆ ಮಾತ್ರವಲ್ಲ ಮುಂದಿನ ಪೀಳಿಗೆಯ ವರಿಗೂ ಅಗತ್ಯ ಇದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ. ರಾಜಣ್ಣ, ಲೇಖಕ ಸಿ.ನಾಗಣ್ಣ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಲೇಖಕ ಎಚ್.ಎಂ.ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT