ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ವೆಂಕಟರಮಣಸ್ವಾಮಿ ಉತ್ಸವ

ಗೋವಿಂದ, ಗೋವಿಂದ ಎಂಬ ನಾಮಸ್ಮರಣೆ
Last Updated 11 ಫೆಬ್ರುವರಿ 2017, 10:05 IST
ಅಕ್ಷರ ಗಾತ್ರ

ಕೆಜಿಎಫ್‌: ಗುಟ್ಟಹಳ್ಳಿ ( ಬಂಗಾರುತಿರುಪತಿ) ಯ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಶುಕ್ರವಾರ ವೈಭವಯುತವಾಗಿ ನಡೆಯಿತು.

ಮಧ್ಯಾಹ್ನ 1.40 ರ ಸಮಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಾಳೆ ಹಣ್ಣು ಮತ್ತು ದವನವನ್ನು ರಥದ ಕಳಸಕ್ಕೆ ಭಕ್ತರು ಎಸೆಯುತ್ತಿದ್ದಂತೆಯೇ ಗೋವಿಂದ ಗೋವಿಂದ ಎಂದು  ಭಕ್ತರು ರಥವನ್ನು ಎಳೆದರು.

ಗುರುವಾರದಿಂದಲೇ ಸುತ್ತಮುತ್ತಲಿನ ಪ್ರದೇಶದಿಂದ ಎತ್ತಿನ ಬಂಡಿ ಮತ್ತಿತರ ವಾಹನಗಳಲ್ಲಿ ಬಂದಿದ್ದ ಸಾವಿರಾರು ಕುಟುಂಬಗಳು ಗುಟ್ಟಹಳ್ಳಿ ದೇವಾಲಯದ ಸುತ್ತಮುತ್ತಲಿನ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಬಂಧು ಬಳಗದ ಜತೆಯಲ್ಲಿ ಪೂಜೆ ಸಲ್ಲಿಸಿ, ನಂತರ ಸಾಮೂಹಿಕ ಭೋಜನ ನಡೆಸಿದರು.

ದೇವಾಲಯದಲ್ಲಿ ಕೃಷ್ಣಯ್ಯ ಶೆಟ್ಟಿ ಕುಟುಂಬ ಮತ್ತು ಜಿಲ್ಲಾ ಪಂಚಾಯತಿ ಸದಸ್ಯೆ ನಿರ್ಮಲಾ ಅಂಬರೀಶ್‌ ಕುಟುಂಬದವರಿಂದ  ಭಕ್ತರಿಗೆ ಊಟ,ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಶಾಸಕಿ ವೈ.ರಾಮಕ್ಕ, ಅರುಣ್‌ಪ್ರಸಾದ್‌, ಅಶೋಕ್‌ ಕೃಷ್ಣಪ್ಪ, ಹುಲ್ಕೂರು ಹರಿಕುಮಾರ್‌, ತಹಶೀಲ್ದಾರ್ ಸತ್ಯಪ್ರಕಾಶ್‌, ಪೇಷ್ಕಾರ್ ಮರಿರಾಜು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT