ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ದರೋಡೆಕೋರರ ಬಂಧನ

ಕಾರು, ಬಂಗಾರದ ಚೈನ್‌, 3 ಮೊಬೈಲ್‌, ₹ 5 ಸಾವಿರ ನಗದು, ವಾಚ್‌ ಪೊಲೀಸ್‌ ವಶ
Last Updated 11 ಫೆಬ್ರುವರಿ 2017, 11:19 IST
ಅಕ್ಷರ ಗಾತ್ರ

ಚಿಂತಾಮಣಿ: ಗ್ರಾಮಾಂತರ ಠಾಣೆಯ ಪೊಲೀಸರು 3 ಜನ ದರೋಡೆಕೋರರನ್ನು ಬಂಧಿಸಿ 3 ಸುಲಿಗೆ ಪ್ರಕರಣಗಳನ್ನು ಬೇಧಿಸಿದ್ದಾರೆ.

ಸುಮಾರು ₹ 60 ಸಾವಿರ ಬೆಲೆ ಬಾಳುವ ಬಂಗಾರದ ಚೈನ್‌, 3 ಮೊಬೈಲ್‌, ₹ 5 ಸಾವಿರ ನಗದು, ಒಂದು ವಾಚ್‌ ಹಾಗೂ ₹ 4 ಲಕ್ಷ ಬೆಲೆಬಾಳುವ ಕಾರನ್ನು ವಶಪಡಿಸಿಕೊಂಡಿರುವುದಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆನಂದಕುಮಾರ್‌ ತಿಳಿಸಿದ್ದಾರೆ.

ಆರೋಪಿಗಳಾದ  ಎಸ್‌.ಕೆ.ಸುರೇಶ್‌ ಕೆ.ಎನ್‌.ಅಶೋಕ್‌, ಬೈರಾರೆಡ್ಡಿಯನ್ನು ಬಂಧಿಸಲಾಗಿದೆ.

ಫೆಬ್ರುವರಿ 8ರಂದು ಮದನಪಲ್ಲಿ ನಿವಾಸಿ ಫಯಾಜ್‌ ರಹಮತ್‌ ಉಲ್ಲಾ ಹಾಗೂ ರೆಡ್ಡಿಶೇಖರ್‌ ಎಂಬುವವರನ್ನು ಮದನಪಲ್ಲಿಗೆ ಡ್ರಾಪ್‌ ಕೊಡುವುದಾಗಿ ಕಾರಿಗೆ ಹತ್ತಿಸಿಕೊಂಡ ಆರೋಪಿಗಳು,  ನಂತರ ರಾತ್ರಿ 1 ಗಂಟೆ ಸಮಯದಲ್ಲಿ ಚಾಕು ತೋರಿಸಿ ಬೆದರಿಸಿ, ತಾಲ್ಲೂಕಿನ ಹಿರೇಪಾಳ್ಯದ ಬಳಿಯ ನೀಲಗಿರಿ ತೋಪಿಗೆ ಕರೆದೊಯ್ದಿದ್ದಾರೆ. 2 ಮೊಬೈಲ್‌ಗಳು, ನಗದು ಹಣ, ಪರ್ಸ್‌ ಕಿತ್ತುಕೊಂಡು ಪರಾರಿಯಾದರು ಎಂದು ಅವರು ದೂರು ನೀಡಿದ್ದರು.

ಪ್ರಕರಣವನ್ನು ಬೇಧಿಸಲು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಜೆ.ಎನ್‌.ಆನಂದಕುಮಾರ್‌ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಆರೋಪಿಗಳು ಬಳಸಿದ್ದ ಕಾರಿನ ಸಂಖ್ಯೆಯನ್ನು ಆಧರಿಸಿ, ಗುಪ್ತವಾಗಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಕಾರಿನ ಚಾಲಕ ಬೆಂಗಳೂರಿನ ಸಿಂಗನಾಯಕನಹಳ್ಳಿಯಲ್ಲಿ ಎಸ್‌.ಕೆ.ಸುರೇಶ್‌ ಎಂಬುವವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ಕುರಿತು ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಮೂವರು ಆರೋಪಿಗಳು ಶ್ರೀನಿವಾಸಪುರದ ಕಾನಗಮಾಕನಹಳ್ಳಿ ಗ್ರಾಮದವರು. ಆರೋಪಿಗಳನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಇತರ 2 ಪ್ರಕರಣಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಆನಂದಕುಮಾರ್‌ ತಿಳಿಸಿದ್ದಾರೆ.

ಫೆ. 8ರಂದು ಶ್ರೀನಿವಾಸಪುರದ ಗೌನಪಲ್ಲಿ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಲಿಫ್ಟ್‌ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಮ್ಯಾಕಲಗಡ್ಡದ ಬಳಿ ಆತನ ಮೇಲೆ ಹಲ್ಲೆ ನಡೆಸಿ, ಮೊಬೈಲ್‌ ಮತ್ತು ಹಣವನ್ನು ದೋಚಿದ್ದಾರೆ. ಇದೇ ಗುಂಪು ಒಂದು ವಾರದ ಹಿಂದೆ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರಿನಲ್ಲಿ ಕಾರಿಗೆ ಹತ್ತಿಸಿಕೊಂಡು ಬಂದು ನಗರದ ಹೊರವಲಯದ ಕುರುಟಹಳ್ಳಿ ಬಳಿ ಕ್ರಾಸ್‌ ಬಳಿ ಚಾಕು, ಚೂರಿ ತೋರಿಸಿ ಬೆದರಿಸಿ, ಅವರಿಂದ ಬಂಗಾರದ ಚೈನ್‌, ₹ 7 ಸಾವಿರ ಹಣ, ಮೊಬೈಲ್‌ಗಳನ್ನು ಕಸಿದುಕೊಂಡಿದ್ದರು ಎಂದು ತಿಳಿಸಿದ್ದಾರೆ.

ಸುಲಿಗೆ ಪ್ರಕರಣ ದಾಖಲಾದ 24 ಗಂಟೆ ಒಳಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್‌ಐ ಲಿಯಾಕತ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಹರೀಶ್‌, ಆಂಜಪ್ಪ, ವಿಶ್ವನಾಥ್‌, ಸಂದೀಪ್‌ ವೀರಭದ್ರಸ್ವಾಮಿ, ಕಾನ್‌ಸ್ಟೆಬಲ್‌ ಸರ್ವೇಶ್‌, ಚೆನ್ನಕೇಶವ, ವೇಣುಗೋಪಾಲ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT