ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿ

ಪೆರ್ಡೂರಿನಲ್ಲಿ ‘ಅನಂತ ಮಕ್ಕಳ ನಾಟಕೋತ್ಸವ’ ಉದ್ಘಾಟಿಸಿ ಸಾಹಿತಿ ವೈದೇಹಿ
Last Updated 11 ಫೆಬ್ರುವರಿ 2017, 12:26 IST
ಅಕ್ಷರ ಗಾತ್ರ

ಹಿರಿಯಡಕ: ‘ಮಕ್ಕಳ ಮನಸ್ಸನ್ನು ನಾಟ ಕದ ಮೂಲಕ ಅರಳಿಸಬೇಕು. ಹಾಗಾಗಿ ಪ್ರತೀ ಶಾಲೆಯಲ್ಲಿ ರಂಗಭೂಮಿ ಪ್ರಾರಂಭಿಸಿ ಮಕ್ಕಳಿಗೆ ನಾಟಕ , ರಂಗ ಭೂಮಿಯ ಮೂಲಕ ಶಿಕ್ಷಣ ನೀಡುವ ವಿನೂತನ ಪ್ರಯೋಗ ಪ್ರಾರಂಭ ವಾಗಬೇಕು’ ಎಂದು ಸಾಹಿತಿ ವೈದೇಹಿ ಹೇಳಿದರು.

ಅವರು ಶುಕ್ರವಾರ ಪೆರ್ಡೂರು ಪ್ರೌಢಶಾಲಾ ಬಯಲು ರಂಗಮಂದಿರ ದಲ್ಲಿ 3 ದಿನಗಳ ‘ಅನಂತ ಮಕ್ಕಳ ನಾಟಕೋತ್ಸವ–2017’ ಉದ್ಘಾಟಿಸಿ ಮಾತನಾಡಿದರು.

‘ಪೆರ್ಡೂರು ಎಂದಿಗೂ ನಾಟಕ ದೊಂದಿಗೆ ತನ್ನನ್ನು ತಾನು ಬೆಸೆದು ಕೊಂಡಿರುವ ಊರು. ರಂಗಭೂಮಿಗೆ ಪ್ರೋತ್ಸಾಹ ನೀಡುತ್ತಿರುವ ಇಂತಹ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಅಭಿ ರುಚಿ, ಭಾವನೆಗಳ ಬಗ್ಗೆ ಚಿಂತಿಸಿ ನಾಟಕೋತ್ಸವ ಆಯೋಜಿಸಿರುವುದು ಪ್ರಶಂಸನಾರ್ಹ.

ಮಕ್ಕಳನ್ನು ವಿದ್ಯಾರ್ಥಿಯಾಗಿರುವಾಗಲೇ ನಾಟಕ ರಂಗದಲ್ಲಿ ಬೆಳೆಯಲು ಪ್ರೋತ್ಸಾಹ  ನೀಡಬೇಕು. ಅದರೊಂದಿಗೆ ಮಕ್ಕಳನ್ನು ಕೇವಲ ಓದು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ಆಟೋಟದಂತಹ ಪಠ್ಯೇತರ ಚಟು ವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡುವುದು ಅವಶ್ಯಕ ಎಂದರು.

ನಾಟಕೋತ್ಸವದ ಆಯೋಜಕ ಶಿಕ್ಷಕ ಪ್ರಭಾಕರ ತುಮುರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರುವ ಮುಗ್ಧತೆ, ಅನಂತತೆ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಹಾಗಾಗಿ ರಂಗಭೂಮಿಯ ಗಾಂಭೀರ್ಯ, ಶಿಕ್ಷಣ, ಶಿಸ್ತು, ಭಾಷೆಯ ಬಗ್ಗೆ ಮಕ್ಕಳಿಗೆ ತಿಳಿಸುವ ಸಲುವಾಗಿ ಮಕ್ಕಳ ನಾಟಕೋತ್ಸವವನ್ನು ಆಯೋ ಜಿಸಲಾಗಿದೆ ಎಂದರು.

ಪೆರ್ಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂಭವಿ ಕುಲಾಲ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಶಿವರಾಮ್ ಶೆಟ್ಟಿ, ಹಿರಿಯಡಕ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಶಶಿಕುಮಾರ್ ಶೆಟ್ಟಿ, ರಂಗಕರ್ಮಿ ಪೆರ್ಡೂರು ಪ್ರಭಾಕರ ಕಲ್ಯಾಣಿ, ಉದ್ಯಮಿ ಶಾಂತರಾಮ ಸೂಡ, ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾಕರ ತುಮುರಿ ಸ್ವಾಗತಿಸಿದರು. ಸಂದೀಪ್ ಕುಮಾರ್ ವಂದಿಸಿದರು. ಶಿಕ್ಷಕ ಸ್ಟಾನ್‌ಲಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬ್ರಹ್ಮಾವರ ಹಂಗಾರಕಟ್ಟೆಯ ಬ.ಡಿ ಶೆಟ್ಟಿ ಬಿ.ಬಿ.ಎಂ ಕಾಲೇಜಿನ ವಿದ್ಯಾರ್ಥಿಗಳಿಂದ ‘ಮದುವೆ ಹೆಣ್ಣು’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT