ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಸಂತರಿಂದ ಉಪವಾಸ ಸತ್ಯಾಗ್ರಹ

ಎತ್ತಿನಹೊಳೆ ಯೋಜನೆಗೆ ವಿರೋಧ– ಒಡಿಯೂರಿನ ಸ್ವಾಮೀಜಿ ಎಚ್ಚರಿಕೆ
Last Updated 11 ಫೆಬ್ರುವರಿ 2017, 12:34 IST
ಅಕ್ಷರ ಗಾತ್ರ

ಮಂಗಳೂರು:  ಎತ್ತಿನಹೊಳೆ ಯೋಜನೆ ಯನ್ನು ಸರ್ಕಾರ ನಿಲ್ಲಿಸದಿದ್ದರೆ ಕರಾವ ಳಿಯ ಸಂತರೆಲ್ಲರೂ ಒಟ್ಟುಗೂಡಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಎಚ್ಚರಿಸಿದರು.

ಎತ್ತಿನಹೊಳೆ ಯೋಜನೆ ಕೈಬಿಡು ವಂತೆ ಆಗ್ರಹಿಸಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಯೋಜನೆಯ ಸಾಧಕ–ಬಾಧಕಗಳನ್ನು ಪುನರ್‌ ವಿಮರ್ಶೆ ಮಾಡಬೇಕು. ಪ್ರಕೃತಿಗೆ ವಿರುದ್ಧವಾಗಿರುವ ಈ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಜೈನಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನೇತ್ರಾವತಿಯ ನೀರನ್ನು ಬಯಲು ಸೀಮೆ ಪ್ರದೇಶಕ್ಕೆ ಕೊಂಡೊಯ್ಯಲು ನಮ್ಮ ವಿರೋಧವಿಲ್ಲ. ಕರಾವಳಿಗರ ಮನಸು ಕಡಲಿನಂತೆ ವಿಶಾಲವಾಗಿದೆ. ಆದರೆ, ಕಡಲನ್ನು ಬರಿದು ಮಾಡಿ, ನೀರು ಕೊಂಡೊಯ್ಯುವುದು ಎಷ್ಟು ಸರಿ? ಈ  ಯೋಜನೆಯಿಂದ ಕರಾವಳಿಯ ಜೀವಸಂಪತ್ತಿಗೆ ಆಪತ್ತು ಬಂದೊದಗಿದೆ. ಹೀಗಾಗಿ, ಯೋಜನೆಯನ್ನು ಕೈಬಿಡ ದಿದ್ದರೆ ಈ ಹೋರಾಟವನ್ನು ದೆಹಲಿಗೆ ಕೊಂಡೊಯ್ಯಲಾಗುವುದು ಎಂದು ಎಚ್ಚರಿಸಿದರು.

ವಜ್ರದೇಹಿ ಮಠದ ರಾಜಶೇಖ ರಾನಂದ ಸ್ವಾಮೀಜಿ, ಎತ್ತಿನಹೊಳೆ ಯೋಜನೆಗೆ ಕೋಟ್ಯಂತರ ಹಣ ಸುರಿಯುವುದು ವ್ಯರ್ಥ ಪ್ರಯತ್ನ. ಈ ತನಕ ಖರ್ಚು ಮಾಡಲಾದ ಹಣ ಪೋಲಾದರೂ ಪರವಾಗಿಲ್ಲ, ಇಲ್ಲಿನ ಜನರ ಆಶಯದಂತೆ ಯೋಜನೆಯನ್ನು ಕೈಬಿಡಬೇಕು. ನಮ್ಮ ಹೋರಾಟಕ್ಕೆ ಸರ್ಕಾರ ಕಿವಿಗೊಡದಿದ್ದರೆ ಮುಂದೆ ಅದರ ಪರಿಣಾಮ ಅನುಭವಿಸಬೇಕಾ ದೀತು ಎಂದು ಹೇಳಿದರು.

‘ಕರಾವಳಿಯ ಬಹುತೇಕ ಸ್ಥಳೀಯ ಸಂಸ್ಥೆಗಳು ಎತ್ತಿನಹೊಳೆ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈ ಗೊಂಡರೂ ಸರ್ಕಾರ ಮಾತ್ರ ಸಂವಿಧಾ ನಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಇದಕ್ಕೆ ಕಾನೂನು ಚೌಕಟ್ಟಿನಲ್ಲಿಯೇ ಉತ್ತರಿಸಲಾ ಗುವುದು’ ಎಂದು ಸಮಿತಿಯ ಸಲಹೆ ಗಾರ ಗಣೇಶ್ ಎಸ್. ರಾವ್ ಸವಾಲು ಹಾಕಿದರು.

ಸಮಿತಿ ಉಪಾಧ್ಯಕ್ಷ ಪುರು ಷೋತ್ತಮ ಚಿತ್ರಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆ ತಡೆಹಿಡಿ ಯುವಂತೆ ಸಂಸದರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಈ ನಡುವೆ ಕಾನೂನು ಹೋರಾಟವನ್ನು ಮುಂದುವರಿಸಲಾಗುತ್ತಿದೆ. ಸುಪ್ರೀಂಕೋ ರ್ಟ್‌ನ ಹಸಿರುಪೀಠದಲ್ಲಿ ಮಾರ್ಚ್‌ 21ರಂದು ಅಂತಿಮ ವಿಚಾರಣೆ ನಡೆಯಲಿದ್ದು, ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಅಶೋಕನಗರ ಚರ್ಚ್‌ನ ಎಗ್ವಿನ್‌ ನೊರೋನ್ಹಾ, ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಮಹಮ್ಮದ್‌ ಮಸೂದ್‌, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್‌, ಮಾಜಿ ಶಾಸಕರಾದ ಯೋಗೀಶ್‌ ಭಟ್‌, ಪ್ರಭಾಕರ ಬಂಗೇರ, ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜೀವ ಮಠಂ ದೂರು, ಕೆಥೋಲಿಕ್‌ ಸಭಾದ ಅನಿಲ್‌ ಲೋಬೊ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಇದ್ದರು.

ಸಮಿತಿ ಸಂಚಾಲಕ ಎಂ.ಜಿ.ಹೆಗಡೆ, ಪದಾಧಿಕಾರಿಗಳಾದ ಸತ್ಯಜಿತ್ ಸುರತ್ಕಲ್, ದಿನಕರ ಶೆಟ್ಟಿ, ರಘುವೀರ್ ಸೂಟರಪೇಟೆ, ಶಶಿರಾಜ್ ಶೆಟ್ಟಿ ಕೊಳಂಬೆ, ಹನೀಫ್ ಖಾನ್ ಕೊಡಾಜೆ, ಹರೀಶ್ ಪೂಂಜ, ರಂಜನ್‌ ಗೌಡ, ನಾರಾಯಣ ಬಂಗೇರ, ಸಿರಾಜ್ ಅಡ್ಕರೆ, ಹನೀಫ್ ಖಾನ್ ಕೊಡಾಜೆ, ಕಿರಣ್ ರೈ ಬಜಾಲ್, ಡಾ.ಭರತ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಕೆ. ಮೋ ನಪ್ಪ, ವಸಂತ ಪೂಜಾರಿ, ಯೋಗೀಶ್‌ ಶೆಟ್ಟಿ, ಅಣ್ಣಯ್ಯ ಕುಲಾಲ್‌, ಉಮಾನಾಥ ಕೋಟ್ಯಾನ್‌, ಕೊರಗಪ್ಪ ನಾಯ್ಕ್‌ ಇದ್ದರು.

ಇದಕ್ಕೂ ಮೊದಲು ನಗರದ ಪುರಭ ವನದ ಎದುರಿನ ಗಾಂಧಿ ಪಾರ್ಕ್‌ನ ಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪ್ರತಿಭಟನಾಕಾರರು ಹಾರಾರ್ಪಣೆ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು.

* ಎತ್ತಿನಹೊಳೆ ಯೋಜನೆ ಕೈಬಿಟ್ಟು, ಬಯಲುಸೀಮೆ ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ಯೋಜನೆಗೆ ಪ್ರೋತ್ಸಾಹ ನೀಡಬೇಕು. ಅದಕ್ಕೆ ನಾವು ಕೈಜೋಡಿಸುತ್ತೇವೆ.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆ, ಜೈನಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT