ಮೊದಲ ಓದು

ಫಾರಿನ್‌ ಟೂರ್‌

ಫಾರಿನ್‌ ಟೂರ್‌ ಲೇ: ರವಿಶಂಕರ್ ಕೆ. ಭಟ್ ಪ್ರ: ನದಿ ಪ್ರಕಾಶನ, ‘ನೆಲೆ’,ನಂ. 31, 1ನೇ ‘ಎ’ ಮುಖ್ಯರಸ್ತೆ, ಸಿಡೇದಹಳ್ಳಿ, ಸಿದ್ಧೇಶ್ವರ ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು–560073

ಪು: 122 ಬೆ: ₹ 130
ಫಾರಿನ್‌ ಟೂರ್‌
ಲೇ: ರವಿಶಂಕರ್ ಕೆ. ಭಟ್
ಪ್ರ: ನದಿ ಪ್ರಕಾಶನ, ‘ನೆಲೆ’, ನಂ. 31, 1ನೇ ‘ಎ’ ಮುಖ್ಯರಸ್ತೆ, ಸಿಡೇದಹಳ್ಳಿ, ಸಿದ್ಧೇಶ್ವರ ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು–560073
 
**
ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಕೈಗೊಳ್ಳುವುದು ಬಹುತೇಕರ ಜೀವನದ ಕನಸುಗಳಲ್ಲೊಂದಾಗಿರುತ್ತದೆ. ದುಬಾರಿ ಎನ್ನುವ ಕಾರಣಕ್ಕೆ ಈ ಕನಸನ್ನು ಹತ್ತಿಕ್ಕಿಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಆದರೆ, ಸೂಕ್ತ ಸಿದ್ಧತೆ ನಡೆಸಿದಲ್ಲಿ ವಿದೇಶ ಪ್ರಯಾಣ ದುಬಾರಿಯೇನೂ ಅಲ್ಲ; ಅದು ಮಧ್ಯಮ ವರ್ಗಕ್ಕೆ ಎಟುಕದ ನಕ್ಷತ್ರವೂ ಅಲ್ಲ ಎನ್ನುವುದು ‘ಫಾರಿನ್‌ ಟೂರ್‌’ ಕೃತಿಯ ಸಾರ.
 
ಲೇಖಕರು ತಮ್ಮ ಕುಟುಂಬದೊಂದಿಗೆ ಮಲೇಷ್ಯಾ ಪ್ರವಾಸಕ್ಕೆ ಹೋಗಿಬಂದ ಅನುಭವ ಕಥನದ ಕೃತಿ ಇದು. ಹಾಗಾಗಿ, ಇಲ್ಲಿನ ಬರವಣಿಗೆಗೆ ಅಧಿಕೃತತೆಯ ಹೊಳಪಿದೆ. ಅಪ್ಪ–ಅಮ್ಮನಿಗೆ ವಿದೇಶ ಪ್ರವಾಸ ಮಾಡಿಸಬೇಕು ಎನ್ನುವ ತಮ್ಮ ಕನಸನ್ನು ಲೇಖಕರು ಯೋಜನಾಬದ್ಧವಾಗಿ ಈಡೇರಿಸಿಕೊಂಡ ಕಥನ ಸ್ವಾರಸ್ಯಕರವಾಗಿದೆ. ಪಾಸ್‌ಪೋರ್ಟ್‌ ಮಾಡಿಸುವುದರಿಂದ ಹಿಡಿದು, ವಿದೇಶದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವವರೆಗೆ ಅನೇಕ ಸಂಗತಿಗಳು ಪುಸ್ತಕದಲ್ಲಿವೆ.
 
ಮಾಹಿತಿ ಸಂಗ್ರಹದ ಸಂಕಲನವಾಗಿ ಉಳಿಯದೆ, ಅನುಭವ ಕಥನವಾಗಿ ಓದಿಸಿಕೊಳ್ಳುವುದು ಈ ಕೃತಿಯ ವಿಶೇಷ. ಇದು ಓದುಗರಲ್ಲಿನ ವಿದೇಶಯಾನದ ಕನಸಿಗೆ ನೀರೆರೆಯುವ ಬರವಣಿಗೆಯೂ ಹೌದು.

 

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017