ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಕೈಗಾರಿಕಾ ಪ್ರಗತಿ ಕುಸಿತ

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನಿರೀಕ್ಷೆಯಂತೆ  ಕೈಗಾರಿಕಾ ಪ್ರಗತಿ ಮೇಲೆ ನೋಟು ರದ್ದತಿ ಪರಿಣಾಮ ಬೀರಿದ್ದು, ಡಿಸೆಂಬರ್‌ನಲ್ಲಿ ಕೈಗಾರಿಕಾ ತಯಾರಿಕಾ ಸೂಚ್ಯಂಕ  (ಐಐಪಿ) ಶೇ 0.4ರಷ್ಟು ಕುಸಿದಿದೆ.

ಇದು ನಾಲ್ಕು ತಿಂಗಳ ಕನಿಷ್ಠ ಮಟ್ಟವಾಗಿದ್ದು, ಆಗಸ್ಟ್‌ನಲ್ಲಿ ಶೇ 0.7ರಷ್ಟಿತ್ತು. 2015ರ ಡಿಸೆಂಬರ್‌ನಲ್ಲಿ ಕೈಗಾರಿಕಾ ಪ್ರಗತಿ ಶೇ 0.9ರಷ್ಟು ಕುಸಿದಿತ್ತು.
ಗ್ರಾಹಕರ ಉತ್ಪನ್ನಗಳ ತಯಾರಿಕಾ ಪ್ರಮಾಣ ಕೂಡ ಶೇ 10ಕ್ಕಿಂತ ಕುಸಿಯುವ ಮೂಲಕ ಒಟ್ಟಾರೆ ತಯಾರಿಕಾ ವಲಯದ ನಕಾರಾತ್ಮಕ ಬೆಳವಣಿಗೆಗೆ ಕಾರಣವಾಗಿದೆ.

ನವೆಂಬರ್‌ನಲ್ಲಿ ನೋಟು ರದ್ದಾದರೂ ಆ ತಿಂಗಳ ಕೈಗಾರಿಕಾ ಉತ್ಪಾದನಾ ಪ್ರಗತಿ ಮೇಲೆ ಯಾವುದೇ ಪರಿಣಾಮವಾಗಿರಲಿಲ್ಲ.  ಆ ತಿಂಗಳು ಕೈಗಾರಿಕಾ ಪ್ರಗತಿ ಶೇ 5.7ರಷ್ಟಿತ್ತು.

ಟಿ.ವಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ಸೇರಿದಂತೆ ಗ್ರಾಹಕರ ಬಳಕೆ ಉತ್ಪನ್ನಗಳ ತಯಾರಿಕೆ ಶೇ 10.3ರಷ್ಟು ಇಳಿದಿದೆ. ತಯಾರಿಕಾ ವಲಯದಲ್ಲಿರುವ ಒಟ್ಟಾರೆ 22 ಕೈಗಾರಿಕೆಗಳಲ್ಲಿ 17 ಕೈಗಾರಿಕೆಗಳ ಪ್ರಗತಿ ಋಣಾತ್ಮಕ ಮಟ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT