ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ನೀರಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ

ಸಾವಿನಂಚಿನಲ್ಲಿ ಜಾಡಿಂಸ್ ಪೀಡಿತ ಪತಿ
Last Updated 12 ಫೆಬ್ರುವರಿ 2017, 6:44 IST
ಅಕ್ಷರ ಗಾತ್ರ

ರಾಮನಗರ: ನೀರಿನ ತೊಟ್ಟಿಗೆ ಮಕ್ಕಳನ್ನು ತಳ್ಳಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ರೇಖಾ (31), ನೂತನ (7) ಹಾಗೂ ಮಾನ್ಯ ಶ್ರೀ (6) ಮೃತ ದುರ್ದೈವಿಗಳು. ರೇಖಾ ಪತಿ ನವೀನ್ ಜಾಡಿಂಸ್ ಪೀಡಿತನಾಗಿದ್ದು, ವೈದ್ಯರು ಜಾಂಡೀಸ್ ಮೀರಿ ಹೊಗಿದ್ದು,ಈತ ಬದುಕುಳಿಯುವುದು ಕಷ್ಟ ಎಂದು ಎಂದಿದ್ದಾರೆ.

ಇದರಿಂದ ಮನನೊಂದು ತನ್ನ ಮಕ್ಕಳನ್ನು ಮನೆ ಬಳಿ ಇರುವ ನೀರಿನ ಸಂಪ್‌ಗೆ ತಳ್ಳಿ ರೇಖಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರೇಖಾ ಮತ್ತು ನವೀನ್ ಮೂಲತಃ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದವರಾಗಿದ್ದು, ಅಪ್ಪಗೆರೆಯಲ್ಲಿ ನೆಲೆಸಿ, ಚನ್ನಪಟ್ಟಣದಲ್ಲಿ ರಸ್ತೆಬದಿಯಲ್ಲಿ ಹೊಟೇಲ್ ಇಟ್ಟು ವ್ಯಾಪಾರ ಮಾಡಿ, ಬದುಕು ನಡೆಸುತ್ತಿದ್ದರು.

ಪತಿ ನವೀನ್ ಕಾಮಾಲೆ ರೋಗದಿಂದ ಬಳಲುತ್ತಿದ್ದು, ರೋಗ ಉಲ್ಭಣಗೊಂಡು ಪತಿಯೇ ಬದುಕದಿದ್ದ ಮೇಲೆ ನಾವು ಇದ್ದು ಪ್ರಯೋಜವೇನು ಎಂದು ಬೇಸತ್ತು ನೀರಿನ ತೊಟ್ಟಿಗೆ ಮಕ್ಕಳನ್ನು ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳದಲ್ಲಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪ್ಪಗೆರೆ ಗ್ರಾಮದಲ್ಲಿ ನೀರವ ಮೌನ ಅವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT