ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಪರಿಸರ ಸಂರಕ್ಷಣೆಗೆ ಶ್ಲಾಘನೆ, ಪ್ರಶಸ್ತಿ

ಹಟ್ಟಿ ಚಿನ್ನದ ಗಣಿಯ ವಿಭಿನ್ನ, ವಿಶಿಷ್ಟ ಸಾಧನೆ; ಗಿಡ ಮರಗಳನ್ನು ಬೆಳೆಸಲು ವಿಶೇಷ ಆಸಕ್ತಿ
Last Updated 12 ಫೆಬ್ರುವರಿ 2017, 11:28 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ದೇಶದಲ್ಲೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ಗಣಿ ಎಂದು ಹೆಸರು ಪಡೆದ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಪರಿಸರ ಸಂರಕ್ಷಣೆ ಸೇರಿದಂತೆ ಜೈವಿಕ ಇಂಧನ ಉತ್ಪಾದನೆ ಹಾಗೂ ಪವನ ವಿದ್ಯುತ್‌ ಉತ್ಪಾದನೆಯಲ್ಲೂ ಸಾಧನೆ ಮಾಡಿದೆ. 

2010ರಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ‘ಮುಖ್ಯಮಂತ್ರಿ ರತ್ನ’  ಪ್ರಶಸ್ತಿ ಸಿಕ್ಕಿದೆ.ಕೇಂದ್ರ ಸರ್ಕಾರದ ಗಣಿ ಸಚಿವಾಲಯದಿಂದ ‘ನ್ಯಾಷನಲ್‌ ಜಿಯೋಸೈನ್ಸ್‌’ ಪ್ರಶಸ್ತಿ ಗಳಿಸಿದೆ.

ಪರಿಸರದ ಕುರಿತು ದಾಖಲೀ ಕರಣದ ವಿಶೇಷ ಪರಿಶ್ರಮಕ್ಕಾಗಿಯೂ ಮೊದಲನೇ ಬಹುಮಾನ ಲಭಿಸಿದೆ. ಸಮುದಾಯ ಅಭಿವೃದ್ಧಿ ಹಾಗೂ ಸಾಮಾಜಿಕ ಆರ್ಥಿಕ ವಿಷಯದ ಕುರಿತು ಮಾಡಿದ ಅಧ್ಯಯನಕ್ಕೆ ಪ್ರಶಸ್ತಿ ಲಭಿಸಿದೆ.

2016ರಲ್ಲಿ ಬೆಂಗಳೂರಿನಲ್ಲಿ ನಡೆದ ಗಣಿ ಪರಿಸರ ಹಾಗೂ ಖನಿಜ ಸಂಪನ್ಮೂಲ ಸಂರಕ್ಷಣಾ ಸಪ್ತಾಹ ಸ್ಪರ್ಧೆಯಲ್ಲಿ  ಸಸಿಗಳು ಬೆಳಸುವುದರಲ್ಲಿ, ಪರಿಸರ ನಿರ್ವಹಣೆ, ಇಂಧನ ಸಂರಕ್ಷಣೆ, ಸಮುದಾಯ ಅಭಿವೃದ್ಧಿ ಹಾಗೂ ಮಳೆ ನೀರು ಕುಯಿಲು ಮಾಡುವ ಕಾರ್ಯ ಗಳಿಗಾಗಿ ಪ್ರಥಮ ಬಹುಮಾನ ಬಂದಿದೆ. 2010 ರಿಂದ 2016ರವರೆಗೆ 28 ಪ್ರಥಮ ಬಹುಮಾನ ಬಂದಿದೆ.

ಚಿನ್ನ ಸಂಸ್ಕರಣೆಯ ನಂತರ ಉಳಿಯುವ ತ್ಯಾಜ್ಯ ಅದಿರಿನ ಪುಡಿ ಹಾರದಂತೆ ತಡೆಯಲು 5 ಎಕರೆ ನಾರಿನ ಚಾಪೆ ಹೊದಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಗಣಿ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಅರಣ್ಯೀಕರಣ ಕೈಗೊಳ್ಳಲಾಗಿದೆ.

48.38 ಹೆಕ್ಟರ್‌ ಪ್ರದೇಶದಲ್ಲಿ ಸುಮಾರು 28 ತಳಿಯ 83,700ಕ್ಕೂ ಸಸಿಗಳನ್ನು ಪೋಷಿಸಲಾಗುತ್ತಿದೆ. 4.25 ಎಕರೆಯಲ್ಲಿ ಸಸಿಗಳ ತೋಟ (ನರ್ಸರಿ) ಸ್ಥಾಪಸಲಾಗಿದೆ. 61.62 ಹೆಕ್ಟರ್‌ ಪ್ರದೇಶ ದಲ್ಲಿ ಸಮೂಹ ಸಸ್ಯ ಬೆಳಸಲಾಗಿದೆ. ಹಟ್ಟಿ ಚಿನ್ನದ ಗಣಿ ಪ್ರದೇಶ ಪ್ರವೇಶವಾ ಗುತ್ತಿದ್ದಂತೆ ಗಿಡಮರಹೆಚ್ಚು ಕಾಣುತ್ತವೆ. 

ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿತಗೊಳಿಸುವ ಉದ್ದೇಶದಿಂದ ಗಣಿ ಆಡಳಿತ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮತ್ತು ಕಲಬುರ್ಗಿ ಮಂಡಲದ ಸಾಮಾಜಿಕ ಅರಣ್ಯ ಯೋಜನೆ ಸಹಯೋಗದೊಂದಿಗೆ ಜೈವಿಕ ಡೀಸೆಲ್‌ ಉತ್ಪಾದಿಸಲು ಘಟಕ  ಸ್ಥಾಪಿಸಲಾಗಿದೆ. ಗಣಿ ಪ್ರದೇಶದಲ್ಲಿ  ಬೇವು, ಹೊಂಗೆ ಮತ್ತು ಸಿಮರೂಬ ಗಿಡಗಳು ಬೆಳಸಿದೆ.

ಗಣಿಯ ಉಪಹಾರಗೃಹ ಹಾಗೂ ಕಾರ್ಮಿಕ ಕಾಲೊನಿಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯದಿಂದ ದಿನಕ್ಕೆ 2 ಸಿಲಿಂಡರ್‌ ಅಡುಗೆ ಅನಿಲ ಉತ್ಪಾದಿಸಲಾಗುತ್ತಿದೆ. ಚಿತ್ರದುರ್ಗದ ಪವನ ವಿದ್ಯುತ್‌ ಉತ್ಪಾದನಾ ಘಟಕದಿಂದ 11.4 ಮೆಗಾವ್ಯಾಟ್‌ ವಿದ್ಯುತ್‌ ಸಿಗುತ್ತಿದೆ.

ಕಳೆದ ಆರ್ಥಿಕ ಸಾಲಿನಲ್ಲಿ ಪವನ ಯಂತ್ರಗಳು ಸಂಸ್ಥೆಗೆ ಸುಮಾರು ₹4ಕೋಟಿ ಲಾಭ ಗಳಿಸಿಕೊಟ್ಟಿವೆ.  ಪವನ ವಿದ್ಯುತ್‌ ಸಾಮರ್ಥ್ಯ 19 ಮೆಗಾವ್ಯಾಟ್‌ಗೆ ಹೆಚ್ಚಿಸಲು ಗಣಿ ಆಡಳಿತ ಯೋಜನೆ ಹಾಕಿಕೊಂಡಿದೆ.

ಗಣಿಯ ಒಳ ಮತ್ತು ಹೊರ ವಲಯದಲ್ಲಿ ವಾಯು ಮಾಲಿನ್ಯದ ಬಗ್ಗೆ ಸೂಕ್ಷಮವಾಗಿ ನಿಗಾ ಇಡಲು  2 ಅತ್ಯಾಧುನಿಕ ಯಂತ್ರಗಳು (ಆ್ಯಂಬಿಯನ್ಟ್‌ ಏರ್‌ ಕ್ವಾಲಟಿ ಮಾನಿಟರಿಂಗ್‌ ಸ್ಟೇಷನ್‌) ಅಳವಡಿಸಲಾಗಿದೆ. 

ಗಣಿ ಪ್ರದೇಶದಲ್ಲಿ ಗಾಳಿಯಲ್ಲಿ ಇರುವ ವಿವಿಧ ಅನಿಲಗಳ  ಪ್ರಮಾಣವನ್ನು ಈ ಯಂತ್ರಗಳು ಪ್ರತಿಕ್ಷಣ ದಾಖಲಿಸಿಕೊಂಡು ಕಂಪೆನಿಯ ಮುಖ್ಯದ್ವಾರದ ಮೇಲೆ ಅಳವಡಿಸಿದ ಎಲೆಕ್ಟ್ರಾನಿಕ್‌ ಫಲಕದಲ್ಲಿ ಅಂಕಿ ಅಂಶಗಳು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗುತ್ತಿದೆ. ವಾಯು ಮಾಲಿನ್ಯ ತಡೆಯಲು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಪರಿಸರ ಎಂಜಿನಿಯರ್‌ ಶ್ರೀರಾಘವ್‌ ಹೇಳುತ್ತಾರೆ.
ಎಂ. ಖಾಸಿಂ ಅಲಿ ಹಟ್ಟಿ

 * ಸಂಸ್ಥೆಗೆ ಗಣಿಗಾರಿಕೆ ಜೊತೆ ಪರಿಸರ ಸಂರಕ್ಷಣೆ ಮುಖ್ಯ.  ವಾಯು ಮಾಲಿನ್ಯ ದಾಖಲಿಸಿಕೊಳ್ಳಲು ಆಧುನಿಕ ಯಂತ್ರಗಳು ಅಳವಡಿಸಲಾಗಿದೆ.

ಡಾ. ಪ್ರಭಾಕರ ಸಂಗೂರು ಮಠ‌, ಪ್ರಧಾನ ವ್ಯವಸ್ಥಾಪಕರು(ಸಮನ್ವಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT