ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಮೀ. ಓಟ: ಬಂದೇನವಾಜ್‌ ಪ್ರಥಮ

ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಆರನೇ ಅಂತರ್ ಅಥ್ಲೆಟಿಕ್ಸ್‌ ಕ್ರೀಡಾಕೂಟ
Last Updated 12 ಫೆಬ್ರುವರಿ 2017, 11:36 IST
ಅಕ್ಷರ ಗಾತ್ರ

ಶಕ್ತಿನಗರ: ಇಲ್ಲಿನ ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ) ಕನ್ನಡ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಆರನೇ ಅಂತರ್ ಅಥ್ಲೆಟಿಕ್ಸ್‌ ವಿವಿಧ ಕ್ರೀಡೆಗಳಲ್ಲಿ  ಪುರುಷರ ವಿಭಾಗದಲ್ಲಿ ಪೈಪೋಟಿ ಮಧ್ಯೆ ರೋಚಕ ಗೆಲುವಿನ ಪಂದ್ಯಾವಳಿಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದವು. 

ಫೆ.10 ರಂದು ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟ ಪುರುಷರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ  ಕಾಳಿ 1ನೇ ತಂಡದ ಬಂದೇನವಾಜ್ ಪ್ರಥಮ, ವರಾಹಿ ತಂಡದ ಶ್ರೇಯಾಸ್‌ಶೆಟ್ಟಿ ದ್ವಿತೀಯ , ಶರಾವತಿ 1ನೇ ತಂಡದ ಪ್ರವೀಣ ತೃತೀಯ ಸ್ಥಾನ. 

200 ಮೀಟರ್ ಓಟದ ಸ್ಪರ್ಧೆಯಲ್ಲಿ ಕಾಳಿ 1ನೇ ತಂಡದ ಬಂದೇನವಾಜ್ ಪ್ರಥಮ,  ಆನಂದ ಭಗವಾನ್‌ಸಿಂಗ್ ದ್ವಿತೀಯ, ವರಾಹಿ ತಂಡದ ಶ್ರೇಯಾಸ್‌ಶೆಟ್ಟಿ ತೃತೀಯ ಸ್ಥಾನ.

400 ಮೀಟರ್ ಓಟದ ಸ್ಪರ್ಧೆಯಲ್ಲಿ  ಕಾಳಿ 1ನೇ ತಂಡದ ಶಶಿಕಾಂತ ಪ್ರಥಮ, ಶಕ್ತಿನಗರ ತುಂಗಾ ತಂಡದ ಸಿ.ಅಮೃತಾ ದ್ವಿತೀಯ , ಶರಾವತಿ 2ನೇ ತಂಡ ಸುಂದರಪೂಜಾರಿ ತೃತೀಯ ಸ್ಥಾನ ಪಡೆದಿದ್ದಾರೆ.

ಚಕ್ರ ಎಸೆತ ಸ್ಪರ್ಧೆಯಲ್ಲಿ ಕಾಳಿ 1ನೇ ತಂಡದ ಗುರುಪಾದಶೆಟ್ ಪ್ರಥಮ, ಶರಾವತಿ 1ನೇ ತಂಡದ ಸಂತೋಷಶೆಟ್ಟಿ ದ್ವಿತೀಯ, ಶರಾವತಿ 2ನೇ ತಂಡದ ಕೆ.ವೀರೇಂದ್ರ ತೃತೀಯ ಸ್ಥಾನ.

ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಕಾಳಿ 1ನೇ ತಂಡದ ಆನಂದ ಪ್ರಥಮ, ಶರಾವತಿ2ನೇ ತಂಡದ ಶಿವಾನಂದ ಯಾಜಿ ದ್ವಿತೀಯ ಮತ್ತು ಬೆಂಗಳೂರು ತಂಡದ ಯಂಗಯ್ಯನಾಯ್ಡು ತೃತೀಯ ಸ್ಥಾನ.ಎತ್ತರ ಜಿಗಿತ ಸ್ಪರ್ಧೆಯಲ್ಲಿ ಶರಾವತಿ 2ನೇ ತಂಡದ ಶಿವಾನಂದಯಾಜಿ ಪ್ರಥಮ, ಶಕ್ತಿನಗರ ತುಂಗಾ ತಂಡದ ಶ್ರೀನಾಥ ದ್ವಿತೀಯಾ, ಕೃಷ್ಣಾ ತಂಡದ ಎಚ್.ಎಂ.ಶ್ರೀನಿವಾಸ ತೃತೀಯ ಸ್ಥಾನ.

ಗುಂಡು ಎಸೆತ ಸ್ಪರ್ಧೆಯಲ್ಲಿ ಬಳ್ಳಾರಿಯ ಮಿತೇಶ್ ಪ್ರಥಮ, ವಿ.ಪರಶುರಾಮ ದ್ವಿತೀಯ,  ಶರಾವತಿ 1ನೇ ತಂಡದ ಎಂ.ನವೀನಕುಮಾರ ತೃತೀಯ ಸ್ಥಾನ. ಉದ್ದ ಜಿಗಿತ ಸ್ಪರ್ಧೆಯಲ್ಲಿ ಬಳ್ಳಾರಿಯ ಮಿತೇಶ್ ಪ್ರಥಮ, ಶರಾವತಿ 2ನೇ ತಂಡದ ಶಿವಾನಂದಯಾಜಿ ದ್ವಿತೀಯ, ಕಾಳಿ 1ನೇ ತಂಡದ ಶರಣಬಸವ ತೃತೀಯ ಸ್ಥಾನ.

4X100 ರಿಲೇ ಓಟದ  ಸ್ಪರ್ಧೆಯಲ್ಲಿ ಕಾಳಿ 1ನೇ ತಂಡ ಪ್ರಥಮ, ಶಕ್ತಿನಗರದ ಕೃಷ್ಣಾ ತಂಡ ದ್ವಿತೀಯ ಮತ್ತು ಶರಾವತಿ 1ನೇ ತಂಡ ತೃತೀಯ ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.  ಫೆ.12ರಂದು ಹೆಲಿಪ್ಯಾಡ್ ಕ್ರೀಡಾಂಗ ಣದಲ್ಲಿ ಶಕ್ತಿನಗರದ ತುಂಗಾ ಮತ್ತು ಕೃಷ್ಣಾ ತಂಡಗಳ ಮಧ್ಯೆ ಫೈನಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಮಹಿಳಾ ವಿಭಾಗದಲ್ಲಿ ಶಕ್ತಿನಗರ ಮೇಲುಗೈ

ಶಕ್ತಿನಗರ: ವಿವಿಧ ಕ್ರೀಡೆಗಳಲ್ಲಿ ಶಕ್ತಿನಗರ ಮಹಿಳಾ ವಿಭಾಗದ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.  ಫೆ.10 ರಂದು ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟ ಮಹಿಳಾ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ  ಶಕ್ತಿನಗರ ಕೃಷ್ಣಾ ತಂಡದ ಜಯಶ್ರೀ ಪ್ರಥಮ, ಮಧುಶ್ರೀ ದ್ವಿತೀಯ , ಬಳ್ಳಾರಿಯ ಕೆ.ಬಿ.ಸೌಮ್ಯ ತೃತೀಯ ಸ್ಥಾನ. 

200 ಮೀಟರ್ ಓಟದ ಸ್ಪರ್ಧೆಯಲ್ಲಿ ಶಕ್ತಿನಗರ ಕೃಷ್ಣಾ ತಂಡದ ಮಧುಶ್ರೀ ಪ್ರಥಮ, ಬಳ್ಳಾರಿಯ ಎಸ್.ಮಹಾಲಕ್ಷ್ಮೀ ದ್ವಿತೀಯ, ಶಕ್ತಿನಗರ ಕೃಷ್ಣಾ ತಂಡದ ಸೂಗಮ್ಮ ತೃತೀಯ ಸ್ಥಾನ. 4X100 ರಿಲೇ ಸ್ಪರ್ಧೆಯಲ್ಲಿ  ಶಕ್ತಿನಗರ ಕೃಷ್ಣಾ ತಂಡ ಪ್ರಥಮ, ಬಳ್ಳಾರಿ ತಂಡ ದ್ವಿತೀಯ , ಶರಾವತಿ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.ಚಕ್ರ ಎಸೆತ ಸ್ಪರ್ಧೆಯಲ್ಲಿ ಶಕ್ತಿನಗರ ಕೃಷ್ಣಾ ತಂಡದ ಪ್ರತೀಮಾ ನಾಗರಾಜ ಪ್ರಥಮ, ಶಕ್ತಿನಗರ ತುಂಗಾ ತಂಡದ ಅಂಬಿಕಾ ದ್ವಿತೀಯ, ಕಾಳಿ 1ನೇ ತಂಡದ ಅನುರಾಧ ತೃತೀಯ ಸ್ಥಾನ.

ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಶರಾವತಿ 2ನೇ ತಂಡದ ಕೀರ್ತಿರಾಘವೇಂದ್ರನಾಯಕ ಪ್ರಥಮ, ಶರಾವತಿ1ನೇ ತಂಡದ ಸವಿತಾಗೋಪಾಲ ಮತ್ತು ಶರಾವತಿ 2 ನೇ ತಂಡದ ನಾಗವೇಣಿ ಹನು ಮಂತಪ್ಪ ತೃತೀಯ ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT