ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ನಟಿಗೆ ಗೋವಾದಲ್ಲಿ ಕಿರುಕುಳ

Last Updated 12 ಫೆಬ್ರುವರಿ 2017, 17:25 IST
ಅಕ್ಷರ ಗಾತ್ರ
ಗೋವಾ: ಕನ್ನಡ ನಟಿ ನಿವೇದಿತಾ ಕೆಲ ದಿನಗಳ ಹಿಂದೆ ಗೋವಾಕ್ಕೆ ತೆರೆಳಿದ್ದ ವೇಳೆ ಕಿಡಿಗೇಡಿಗಳ ಗುಂಪೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡಿತ್ತು ಎಂದು ಹೇಳಿಕೊಂಡಿದ್ದಾರೆ.

'ಅವ್ವ', 'ಡಿಸೆಂಬರ್ 1', 'ಕಿಲಾಡಿ ಕಿಟ್ಟಿ', ‘ಸಿಕ್ಸರ್‌’ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಬಿಡುಗಡೆಗೆ ಸಿದ್ದವಿರುವ ತಮ್ಮ ಮುಂದಿನ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾತನಾಡಿ, ‘ತಾವು ಇತ್ತೀಚೆಗೆ ಬಿಡುವಿಲ್ಲದ ಚಿತ್ರೀಕರಣದ ನಡುವೆ ವಿಶ್ರಾಂತಿಗಾಗಿ ಗೋವಾಕ್ಕೆ ತೆರಳಿದ್ದ ವೇಳೆ ಈ ಕೆಟ್ಟ ಅನುಭವ ಎದುರಾಗಿತ್ತು’ ಎಂದು ಹೇಳಿಕೊಂಡಿದ್ದರು.

ಘಟನೆ ವಿವರ: ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ತಮ್ಮ ಪ್ರಿಯತಮನ ಜೊತೆ  ಕೆಲ ಸಮಯ ವಿಶ್ರಾಂತಿ ಪಡೆಯಲು ನಟಿ ನಿವೇದಿತಾ ಬಯಸಿದ್ದರು. ಅದರಂತೆ ಕೆಲ ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದ ಅವರು ಒಂದೆರಡು ದಿನ ಒಂಟಿಯಾಗಿರಲು ಬಯಸಿ, ತಮ್ಮ ಪ್ರಿಯತಮನಿಗೆ ಎರಡು ದಿನ ತಡವಾಗಿ ಬರಲು ತಿಳಿಸಿ ಹೊಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು.
 
ರಾತ್ರಿ 9 ರ ಸುಮಾರಿಗೆ ಸಮುದ್ರತೀರದಲ್ಲಿ ವಿರಮಿಸುತ್ತಿರುವ ವೇಳೆ ಪುಂಡರ ಗುಂಪೊಂದು ಎದುರಾಗಿ ಅವಾಚ್ಯ ಪದ ಬಳಸಿ ನಿಂದಿಸಿದ್ದರು. ಅಲ್ಲಿಂದ ವಾಪಸ್ಸಾದ ನಟಿ ಹೊಟೆಲ್‌ಗೆ ತೆರಳಿದ್ದರು. ಮತ್ತೆ ಅವರ ಪಕ್ಕದ ಟೇಬಲ್‌ಗೆ ಬಂದು ಕುಳಿತ ಯುವಕರು, ಅವರೊಂದಿಗೆ ಕುಳಿತುಕೊಳ್ಳುವಂತೆ ಪ್ರಚೋದಿಸಿದರು. ಭಯಗೊಂಡ ನಟಿ ಹೊಟೆಲ್‌ ಸಿಬ್ಬಂದಿಯನ್ನು ಕರೆದು ತಮ್ಮ ಕೊಠಡಿಗೆ ತೆರಳಿದ್ದರು.
 
ಈ ಬಗ್ಗೆ ಹೇಳಿಕೊಂಡಿರುವ ಅವರು, ಮಹಿಳೆಯೊಬ್ಬಳು ಒಂಟಿಯಾಗಿದ್ದರೆ ಏನೆಲ್ಲ ನಡೆಯಬಹುದು ಎಂಬುದಕ್ಕೆ ಈ ಘಟನೆ ಸೂಕ್ತ ನಿದರ್ಶನವಾಗಿದೆ. ಘಟನೆ ನಂತರ ಪುರುಷನೊಂದಿಗೆ ಇದ್ದರೆ ಮಾತ್ರ ಮಹಿಳೆ ಸುರಕ್ಷಿತ ಎನಿಸಲು ಶುರುವಾಗಿದೆ ಎಂದಿದ್ದರು.
 
ಘಟನೆ ಕುರಿತು ಇತ್ತೀಚೆಗೆ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ನಿವೇದಿತಾ ಅವರಿಗೆ ‘ಅವ್ವ’ ಚಿತ್ರದ ಪಾತ್ರಕ್ಕೆ ಉತ್ತಮ ಪೋಷಕ ನಟಿ ‘ರಾಜ್ಯ ಪ್ರಶಸ್ತಿ’ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT