ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹಾಳಾಗದಿರಲಿ

ವಾಚಕರ ವಾಣಿ
Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಈಗ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತುತ್ತಿರುವುದು, ಗ್ರಾಮೀಣ ಪ್ರದೇಶದಲ್ಲಿಯೂ ಶುದ್ಧ ನೀರಿನ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿ. ಈ ಘಟಕಗಳಿಂದ ಶುದ್ಧ ನೀರು ಒಂದೆಡೆ ಸಂಗ್ರಹಗೊಳ್ಳುತ್ತಿದ್ದರೆ, ದೊಡ್ಡ ಪ್ರಮಾಣದ ಅನುಪಯುಕ್ತ ನೀರು ಚರಂಡಿಯ ಪಾಲಾಗುತ್ತಿದೆ.

ಈ ನೀರನ್ನು ಇಂಗುಗುಂಡಿಯ ಮೂಲಕ ಹರಿಸಿದರೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಹೀಗಾಗಿ ಪ್ರತೀ ಘಟಕದ ಹತ್ತಿರ ಇಂಗುಗುಂಡಿ ತೋಡಿಸಲು ಸರ್ಕಾರ ಸೂಚಿಸಬೇಕು. ಈ ಘಟಕಗಳನ್ನು ನಿರ್ಮಿಸಿರುವವರು ಸ್ವಪ್ರೇರಣೆಯಿಂದ ಇಂಗುಗುಂಡಿಗಳನ್ನು ತೋಡಿಸಿ, ಅನುಪಯುಕ್ತ ನೀರು ಮತ್ತು ಮಳೆ ನೀರನ್ನು ಇದರಲ್ಲಿ ಹರಿಸುವ ವ್ಯವಸ್ಥೆ ಮಾಡಬೇಕು. ತತ್ಫಲವಾಗಿ ಕೊಳವೆಬಾವಿಯೂ ನೀರಿನಿಂದ ಸಮೃದ್ಧವಾಗುತ್ತದೆ.
- ರಾಜೂ ಎಸ್. ಪೇಟಕರ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT