ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಸಂಗ್ರಹದಲ್ಲಿ ಏರಿಕೆ

Last Updated 12 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರ್ಥಿಕ ವರ್ಷದ (2016–17) ಏಪ್ರಿಲ್‌ –ಜನವರಿ ಅವಧಿಯಲ್ಲಿ  ಸರ್ಕಾರದ ಕೇಂದ್ರ ವರಮಾನ ಸಂಗ್ರಹ ವೃದ್ಧಿಯಾಗಿದೆ.
ನೇರ ಮತ್ತು ಪರೋಕ್ಷ ತೆರಿಗೆಯಿಂದ  ₹16.99 ಲಕ್ಷ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಇದರಲ್ಲಿ ಜನವರಿ ಅಂತ್ಯಕ್ಕೆ  ₹12.85 ಲಕ್ಷ ಕೋಟಿ ಅಂದರೆ ಶೇ 70ರಷ್ಟು  ಸಂಗ್ರಹವಾಗಿದೆ.

ನೋಟು ರದ್ದತಿಯಿಂದ ತೆರಿಗೆ ಸಂಗ್ರಹದಲ್ಲಿ ಇಳಿಕೆಯ ಆತಂಕವಿತ್ತು. ಆದರೂ ಪರೋಕ್ಷ ತೆರಿಗೆ ಸಂಗ್ರಹ ಶೇ 16.9ರಷ್ಟು ಉತ್ತಮ ಪ್ರಗತಿ ಕಂಡಿದೆ. ಕಾರ್ಪೊರೇಟ್‌ ಆದಾಯಕ ತೆರಿಗೆ ಶೇ 11.7 ರಷ್ಟು ವೃದ್ಧಿಸಿದ್ದು, ವೈಯಕ್ತಿಕ ಆದಾಯ ತೆರಿಗೆ ಶೇ 21 ರಷ್ಟು ಏರಿಕೆ ಕಂಡಿದೆ.
ತಯಾರಿಕಾ ವಲಯದ ಉತ್ತಮ ಪ್ರಗತಿಯಿಂದ ಅಬಕಾರಿ ಸುಂಕ ಸಂಗ್ರಹ ಶೇ 40.5 ರಷ್ಟು ಹೆಚ್ಚಳ ಕಂಡಿದ್ದು, ಒಟ್ಟು ₹3.13 ಲಕ್ಷ ಕೋಟಿಗೆ ಏರಿಕೆಯಾಗಿದೆ. ಸೀಮಾ ಸುಂಕ ಸಂಗ್ರಹ ₹1.86 ಲಕ್ಷ ಕೋಟಿ ಅಂದರೆ ಶೇ 4.7 ರಷ್ಟು ವೃದ್ಧಿಯಾಗಿದೆ. ಸೇವಾ ತೆರಿಗೆಯಿಂದ ₹2.03 ಲಕ್ಷ ಕೋಟಿ ವರಮಾನ ಬಂದಿದೆ. ಶೇಕಡಾವಾರು ಲೆಕ್ಕದಲ್ಲಿ ಶೇ 22 ರಷ್ಟು ಏರಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT