ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಮಾರುಕಟ್ಟೆ ಕಾಮಗಾರಿಗೆ ಪುನರ್ಜೀವ

ಹೊಸದುರ್ಗ ಪಟ್ಟಣದಲ್ಲಿ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ₹ 60 ಲಕ್ಷ ವೆಚ್ಚದ ಯೋಜನೆ
Last Updated 13 ಫೆಬ್ರುವರಿ 2017, 7:31 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದಲ್ಲಿ ಸುಮಾರು ಆರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೂಪರ್‌ ಮಾರುಕಟ್ಟೆ ಕಾಮಗಾರಿ ಪುನರ್ಜೀವ ಪಡೆದಿದೆ.

ಪುರಸಭೆಯು 2008–09ನೇ ಸಾಲಿನ ಎಸ್‌ಎಫ್‌ಸಿ ನಿಧಿಯಲ್ಲಿ ₹ 60 ಲಕ್ಷ ವೆಚ್ಚದಲ್ಲಿ 22.35 X 32.48 ಮೀ. ವಿಸ್ತೀರ್ಣದ ಮೂರು ಅಂತಸ್ತಿನ ಕಾಮಗಾರಿ ಆರಂಭಿಸಿತು. ಆದರೆ, ಗುತ್ತಿಗೆದಾರರು ಹಾಗೂ ಸ್ಥಳೀಯ ಆಡಳಿತದ ಹೊಂದಾಣಿಕೆ ಸಮಸ್ಯೆಯಿಂದ 2010ರಲ್ಲೇ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು.

ಶೇ 30ರಷ್ಟು ಮುಗಿದಿರುವ ಕೆಲಸವೂ ಕಳಪೆಯಾಗಿದೆ. ಇಂತಹ ಕಟ್ಟಡವನ್ನು ನೆಲಸಮ ಮಾಡಿ, ಹೊಸದಾಗಿ ನಿರ್ಮಿಸಲಾಗುತ್ತದೆ ಎಂಬ ಮಾತುಗಳು ೇಳಿ ಬಂದಿದ್ದವು.ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡ ಅನೈತಿಕ ಚಟುವಟಿಕೆ  ಸ್ಥಳವಾಗಿತ್ತು. ಕಟ್ಟಡದ ನೆಲಮಹಡಿ ಕಸ, ಪ್ಲಾಸ್ಟಿಕ್‌ ಚೀಲ ತುಂಬಿದ ಕೊಳಚೆಯಿಂದಾಗಿ ದುರ್ವಾಸನೆ ಬರುತ್ತಿತ್ತು.

‘ಕಟ್ಟಡದ ಕಾಮಗಾರಿಗೆ ಪುರಸಭೆ ಪುನಃ ಚಾಲನೆ ನೀಡಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಎರಡು ತಿಂಗಳ ಒಳಗೆ ಕೆಳ ಅಂತಸ್ತಿನಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೂಪರ್‌ ಮಾರುಕಟ್ಟೆ ಆವರಣದ ಒಳಗೆ ಹೈಟೆಕ್‌ ಶೌಚಾಲಯ ನಿರ್ಮಿಸಲಾಗುವುದು’ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಎಚ್‌.ಪಿ.ಉಮೇಶ್‌.

‘ಗುಣಮಟ್ಟದ ಸಿಮೆಂಟ್‌, ಮರಳು ಹಾಗೂ ಕಬ್ಬಿಣ ಬಳಸಿ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ.ಕಾಮಗಾರಿ ಮುಗಿದ ತಕ್ಷಣ ಪಟ್ಟಣದ ಬೀದಿ ಬದಿಯಲ್ಲಿ ಹಣ್ಣು, ಹೂ, ತರಕಾರಿ ಸೇರಿದಂತೆ ಇನ್ನಿತರ ಸಾಮಗ್ರಿ ಮಾರಾಟಗಾರರನ್ನು ಇಲ್ಲಿಗೆ ಸ್ಥಳಾಂತರಿ
ಸಲಾಗುವುದು’ ಎನ್ನುತ್ತಾರೆ ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ್‌.
– ಎಸ್‌.ಸುರೇಶ್‌

* ಕಾಮಗಾರಿಯ ತಾಂತ್ರಿಕ ಸಮಸ್ಯೆ ನಿವಾರಣೆಗೆ ಶಾಸಕ ಬಿ.ಜಿ.ಗೋವಿಂದಪ್ಪ ವಿಶೇಷ ಕಾಳಜಿ ವಹಿಸಿದರು. ಇದರಿಂದ ಕಾಮಗಾರಿಗೆ ಪುನರ್ಜೀವ ಬಂದಿದೆ. 
ಎಚ್‌.ಪಿ.ಉಮೇಶ್‌, ಪುರಸಭೆ ಅಧ್ಯಕ್ಷ

* ರಸ್ತೆ ಬದಿ ಬಿಸಿಲಿನ ತಾಪದಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ಸೂಪರ್‌ ಮಾರುಕಟ್ಟೆ ನೆರಳಿನ ಆಸರೆ ನೀಡಲಿದೆ.
ಮಹಾಂತೇಶ್‌, ಪುರಸಭಾ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT