ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ಕ್ಕೆ ಬಸವರಾಜ ದೇವರ ಪಟ್ಟಾಧಿಕಾರ

ಫೆ.14ರಿಂದ ಜಾತ್ರಾ ಮಹೋತ್ಸವಕ್ಕೆ ಚಾಲನೆ
Last Updated 13 ಫೆಬ್ರುವರಿ 2017, 9:32 IST
ಅಕ್ಷರ ಗಾತ್ರ

ಯಾದಗಿರಿ: ಹೆಡಗಿಮದ್ರಾ ಗ್ರಾಮದಲ್ಲಿ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಫೆ.14ರಿಂದ ಫೆ .19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಹಾಪುರದ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ತಿಳಿಸಿದರು.

ಹೆಡಗಿಮದ್ರಾ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಫೆ. 14 ರಂದು ರಾತ್ರಿ 7ಕ್ಕೆ  ಉಜ್ಜಯನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳು ಬಸವರಾಜ ದೇವರಿಗೆ ಆಶಿರ್ವದಿಸಿ ಹಿತವಚನ ನೀಡುವರು. ಫೆ. 17ರಂದು ರಾತ್ರಿ 8ಕ್ಕೆ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನ ಮಹಾಮಂಗಲ ಮತ್ತು ಶಿವಶಾಂತ ಪಂಚಚೇತನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಡಾ. ವೀರ ಬಸವಂತರೆಡ್ಡಿ ಮುದ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಕಿಶನರಾವ ಮಾಲಿಪಾಟೀಲ್, ಡಾ. ಮಲ್ಲಣ್ಣಗೌಡ ಉಕ್ಕಿನಾಳ, ಬಸವರಾಜೇಂದ್ರ ದೇಶಮುಖ, ಬಸನಗೌಡ ಪಾಟೀಲ್ ಮರಕಲ್ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನಾಗರತ್ನ ಕುಪ್ಪಿ ಅವರಿಗೆ ರಾಜಕೀಯ ಚೇತನ, ಮಂಜುನಾಥ ಮಹಾರಾಜ ಅವರಿಗೆ ಸಂಗೀತ ಚೇತನ, ಪ್ರಶಾಂತ ರಿಪ್ಪನಪೇಟೆ ಅವರಿಗೆ ಮಾಧ್ಯಮ ಚೇತನ, ಭೀಮಣ್ಣ ಮೇಟಿ ಅವರಿಗೆ ಶಿಕ್ಷಣ ಚೇತನ ಮತ್ತು ಡಾ.ಕ್ರಿಸ್ಟೋಫರ್ ಡಿಸೋಜಾ ಅವರಿಗೆ ವೈದ್ಯಕಿಯ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಫೆ.18ರಂದು ಸಂಜೆ 4ಕ್ಕೆ ಉಜ್ಜಯನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮತ್ತು ತನಾರತಿ ಮಹೋತ್ಸವ ನಡೆಯಲಿದೆ ಎಂದರು.

ಫೆ18 ರಂದು ರಾತ್ರಿ 7ಕ್ಕೆ ಧರ್ಮಸಭೆ ನಡೆಯಲಿದೆ. ಫೆ. 19ರಂದು ಬ್ರಾಹ್ಮೀ ಮಹೂರ್ತದಲ್ಲಿ  ದ್ವಯರ ಸಾನ್ನಿಧ್ಯದಲ್ಲಿ ಮತ್ತು ನಾಡಿನ ಸಕಲ ಪೂಜ್ಯರ ನೇತೃತ್ವದಲ್ಲಿ ನೂತರ ಉತ್ತರಾಧಿಕಾರಿಯಾದ ಬಸವರಾಜ ದೇವರ ಅವರಿಗೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಅವರಿಂದ ಷಟಸ್ಥಲ ಬ್ರಹ್ಮೋಪದೇಶ ನಂತರ ಶಂಖ, ಭಸ್ಮಘಟಿಕ, ಪಟ್ಟಬಂಧನ, ದಂಡಕಮಂಡಲ ಪಂಚಮುದ್ರಾ, ನೂತರಾಬಂದರಾದಿ ಪ್ರಧಾನ ಮತ್ತು ಸಿಂಹಾನಾರೋಹಣವನ್ನು ವೀರಶೈವ ವೈದಿಕ ವಿಧಿ ವಿಧಾನಗಳಿಂದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಂಬ ನೂತನ ನಾಮ ಅಭಿದಾನ ಅನುಗ್ರಹಿಸುವರು ಎಂದರು.

ಫೆ. 19 ರಂದು ಬೆಳಿಗ್ಗೆ 10ಕ್ಕೆ ಧರ್ಮಸಭೆ ನಡೆಯುವುದು ಮತ್ತು ಬಸವರಾಜ ದೇವರ ಅವರ ಪಾಲಕರು ತಮ್ಮ ಮಗನನ್ನು ಸಮಾಜಕ್ಕೆ ದಾನ ಮಾಡುವ ಪ್ರಕ್ರಿಯೆ ನಡೆಯಲಿದೆ. ಸಾಯಂಕಾಲ 7ಕ್ಕೆ ಭವ್ಯ ರಥೋತ್ಸವ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸುಮಾರು 20 ರಿಂದ 30 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ದೇವರು, ಶಿವಮೂರ್ತಿ ದೇವರು, ರುದ್ರಮುನಿ ದೇವರು, ಬಿಜೆಪಿ ಮುಖಂಡ ವೆಂಕಟರೆಡ್ಡಿ ಮುದ್ನಾಳ, ಕಾಂಗ್ರೆಸ್ ಮುಖಂಡ ಶ್ರೀನಿವಾಸರೆಡ್ಡಿ ಕಂದಕೂರ, ಗ್ರಾಮದ ಮುಖಂಡ ಕಿಶನರಾವ ಮಾಲಿಪಾಟೀಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT