ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರುಪತ್ಯ ಮೆರೆದ ಆಳ್ವಾಸ್ ವಿದ್ಯಾರ್ಥಿಗಳು

ಕ್ಯಾನ್ಸರ್ಥಾನ್–17: ಮಂಗಳೂರು ಹಾಫ್ ಮ್ಯಾರಥಾನ್
Last Updated 13 ಫೆಬ್ರುವರಿ 2017, 10:45 IST
ಅಕ್ಷರ ಗಾತ್ರ

ಮಂಗಳೂರು: ಯೇನೆಪೋಯ ದಂತ ವೈದ್ಯಕೀಯ ವಿದ್ಯಾಲಯ ತನ್ನ 25ನೇ ವರ್ಷಾಚರಣೆಯ ಪ್ರಯುಕ್ತ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಕ್ಯಾನ್ಸರ್ಥಾನ್ 17, ಮಂಗಳೂರು ಹಾಫ್ ಮ್ಯಾರಥಾನ್’ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನ ಪಡೆದು ಗಮನ ಸೆಳೆದರೆ, ಹಾಫ್ ಮ್ಯಾರಥಾನ್‌ನಲ್ಲಿ ಕೀನ್ಯಾದ ಚಾರ್ಲ್ಸ್, ಫಿಲಿಪ್ ಮತ್ತು ಎಡ್ವಿನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಾಗಿ ಗೆಲುವಿನ ನಗೆ ಬೀರಿದರು.

ನಗರದ ಪಾಂಡೇಶ್ವರದಲ್ಲಿರುವ ಫಾರಂ ಪಿಜ್ಜಾ ಮಾಲ್ ಮುಂಭಾಗದಿಂದ ಆರಂಭವಾದ 5 ಕಿ.ಮೀ., 10 ಕಿ.ಮೀ. ಹಾಗೂ 21 ಕಿ.ಮೀ ಓಟದಲ್ಲಿ ಸುಮಾರು 7 ಸಾವಿರ ಜನ ಭಾಗವಹಿಸಿದ್ದರು. 21 ಕಿ.ಮೀ. ಮತ್ತು 10 ಕಿ.ಮೀ ಓಟವನ್ನು ಪೂರ್ಣಗೊಳಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪದಕವನ್ನು ಹಾಗೂ ಓಟ ಪೂರ್ಣಗೊಳಿಸಲು ವಿಫಲರಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. 5 ಕಿ.ಮೀ ಓಟದಲ್ಲಿ ಮೊದಲು ಗುರಿ ತಲುಪಿದ 1300 ಸ್ಪರ್ಧಾಳುಗಳಿಗೆ ಪದಕ ಹಾಗೂ ಉಳಿದವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು. ವಿಜೇತರಿಗೆ ಒಟ್ಟು ₹4.22 ಲಕ್ಷ ಮೊತ್ತದ ನಗದು ಬಹುಮಾನವನ್ನು ಘೋಷಿಸಲಾಗಿದೆ.

5.ಕಿ.ಮೀ ಅನ್ನು ಅರ್ಧಗಂಟೆ ಒಳಗಡೆ ಪೂರ್ಣಗೊಳಿಸಿದ 8 ವರ್ಷ ವಯಸ್ಸಿನ ಪ್ರಣವ್ ರಾಯ್‌ನನ್ನು ಗೌರವಿಸಲಾಯಿತು. ಹಾಫ್ ಮ್ಯಾರಥಾನ್‌ ವಿಜೇತರು ಪ್ರಥಮ– ₹20 ಸಾವಿರ, ದ್ವಿತೀಯ– ₹15 ಸಾವಿರ, ತೃತೀಯ– ₹12 ಸಾವಿರ ಹಾಗೂ ಚತುರ್ಥ– ₹8 ಸಾವಿರ ನಗದು ಬಹುಮಾನ ಪಡೆಯಲಿದ್ದಾರೆ.

ಕ್ಯಾನ್ಸರ್ಥಾನ್ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಯೇನೆಪೋಯೆ ವಿವಿ ಕುಲಾಧಿಪತಿ ಯೇನೆಪೋಯ ಅಬ್ದುಲ್ಲ ಕುಂಞಿ, ಶೀಘ್ರದಲ್ಲೇ ಸುಸಜ್ಜಿತವಾದ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಇದೆ ಎಂದರು.

ಆಳ್ವಾಸ್  ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಅಂತರರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ, ಅರ್ಜುನ ಪ್ರಶಸ್ತಿ ವಿಜೇತೆ ವಂದನಾ ಶಾನುಭೋಗ್, ಬಿ.ಎಂ. ಫಾರೂಕ್, ಫರ್ಹಾದ್, ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿಜಯಕುಮಾರ್, ಪ್ರಾಂಶುಪಾಲ ಬಿ. ಆರ್. ಶ್ರೀಪತಿರಾವ್, ಉಪಪ್ರಾಂಶುಪಾಲ ಡಾ. ಶಾಮ್ ಎಸ್. ಭಟ್, ಗಣೇಶ್ ಶೆಣೈ ಪಂಚಮಹಲ್, ಡಾ. ಕಮಲಾ ಕಾಂಚನಾ, ಡಾ. ಇಫ್ತಿಕರ್ ಅಲಿ ಮತ್ತಿತರರು ಉಪಸ್ಥಿತರಿದ್ದರು. ಹಸನ್‌ ಸರ್ಫರಾಜ್ ಸ್ವಾಗತಿಸಿದರು. ಡಾ. ಸಂದೀಪ್ ಶೆಟ್ಟಿ ವಂದಿಸಿದರು.

ಫಲಿತಾಂಶ:

21ಕಿ.ಮೀ, (16–28) ಪುರುಷರ ವಿಭಾಗ: ಕಾಂತಿಲಾಲ್ ಕುಂದರ್(ಪ್ರ), ಶಿವಾನಂದ(ದ್ವಿ), ವಿನೋದ್ ಜಿ.ಎನ್(ತೃ), ಅನಿಲ್ ಕುಮಾರ್(ಚ).
ಮಹಿಳಾ ವಿಭಾಗ: ಜ್ಯೋತಿ, ಆಳ್ವಾಸ್(ಪ್ರ), ಸುಪ್ರಿಯಾ, ಮುಂಬೈ(ದ್ವಿ), ಸೌಮ್ಯ, ಆಳ್ವಾಸ್(ತೃ), ಅರ್ಚನಾ, ಆಳ್ವಾಸ್(ಚ). 29–45: ಚಾರ್ಲ್ಸ್, ಕೀನ್ಯಾ(ಪ್ರ), ಫಿಲಿಪ್, ಕೀನ್ಯಾ(ದ್ವಿ), ಎಡ್ವಿನ್, ಕೀನ್ಯಾ(ತೃ) ಫಿಲಿಪ್ ಕೈಜೆನ್(ಚ).

46ಕ್ಕಿಂತ ಮೇಲ್ಪಟ್ಟು: ಎಂ. ಇದ್ರಿಸ್(ಪ್ರ), ರಾಜ್‌ಬೀರ್ ಸಿಂಗ್(ದ್ವಿ), ಕೇಶವ(ತೃ), ಮಾಧವ(ಚ).
10 ಕಿ.ಮೀ(14–28)ಪುರುಷರ ವಿಭಾಗ: ಅನಂತ ಟಿ.ಎನ್, ಆಳ್ವಾಸ್(ಪ್ರ), ರಾಬಿನ್, ಆಳ್ವಾಸ್(ದ್ವಿ), ತಿರುಪತಿರಾವ್(ತೃ), ಅಭಿಷೇಕ್, ಎಸ್‌ಡಿಎಂ(ಚ).

ಮಹಿಳಾ ವಿಭಾಗ: ರಿಶು ಸಿಂಗ್, ಆಳ್ವಾಸ್(ಪ್ರ), ಸುಪ್ರಿತಾ, ಆಳ್ವಾಸ್(ದ್ವಿ), ಪವಿತ್ರಾ, ಆಳ್ವಾಸ್(ತೃ), ತೇಜಸ್ವಿನಿ(ಚ).
ಪುರುಷರ ವಿಭಾಗ: ಸಾಜಿ ರಾಜು(ಪ್ರ), ನಿಖಿಲ್ ರಾಣೆ(ದ್ವಿ),  ಮಹಿಳಾ ವಿಭಾಗ: ಡಾ. ಜ್ಯೋತಿ ಹರೀಶ್ ರಾವ್(ಪ್ರ), ರಾಜೇಶ್ವರಿ ನಾಯರ್(ದ್ವಿ) 46ಕ್ಕಿಂತ ಮೇಲ್ಪಟ್ಟು: ಪುರುಷರ ವಿಭಾಗ: ವಿಠಲ್ ಶೆಟ್ಟಿಗಾರ್(ಪ್ರ), ರಾಮಯ್ಯ ಎಚ್.ಕೆ.(ದ್ವಿ)ಮಹಿಳಾ ವಿಭಾಗ: ಜ್ಯೋತಿ ಯು. ಶೆಟ್ಟಿ(ಪ್ರ), ದೆವಿನಾ ಇ. ರೋಡ್ರಿಗಸ್(ದ್ವಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT