ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆದ ಚಿತ್ರಕಲಾ ಪ್ರದರ್ಶನ ‘ಜರ್ನಿ’

Last Updated 13 ಫೆಬ್ರುವರಿ 2017, 10:53 IST
ಅಕ್ಷರ ಗಾತ್ರ

ದುಬೈನಂತಹ ಆಡಂಬರದ ನಗರ ದಲ್ಲಿ ಪ್ರಯಾಣ ಮಾಡುವಾಗ ಯಾರೇ ಆದರೂ ಅಲ್ಲಿನ ದೃಶ್ಯ ವೈಭವವನ್ನು ಕಣ್ತುಂಬಿಕೊಂಡು ಪುಳಕಿತರಾಗುತ್ತಾರೆ. ಆದರೆ, ಅಲ್ಲಿನ ಮೆಟ್ರೊ ಟ್ರೈನ್‌ನಲ್ಲಿ ಪ್ರಯಾಣಿಸು ವಾಗ ಕಲಾವಿದ ರೊನಾಲ್ಡ್ ಪಿಂಟೊ ಅವರು ಅಲ್ಲಿನ ದೃಶ್ಯವೈ ಭೋಗವನ್ನು ಕೇವಲ ನೋಡಿ ಖುಷಿಪ ಡಲಿಲ್ಲ. ಕಣ್ತುಂಬಿಕೊಂಡ ಅಷ್ಟೂ ಕ್ಷಣಗಳನ್ನು ಹೃದಯಕ್ಕಿಳಿಸಿಕೊಂಡರು. ಆಗ ಮೂಡಿದ  ಮನದ ಭಾವಗಳು ಬಣ್ಣ ಗಳ ಮೂಲಕ ಕ್ಯಾನ್ವಾಸಿನಲ್ಲಿ ಪಡಿ ಯಚ್ಚು ಪಡೆದಾಗ ನೋಡುಗರಿಗೆ ದುಬೈಯ ಸಿಟಿಯೇ ಕಣ್ಣಮುಂದೆ ಇರುವ ಅನುಭವ.

ಪಿಂಟೊ ಅವರು ಬಹರೇನ್‌ನ ಲ್ಲಿದ್ದಾಗ ಅಲ್ಲಿ ಬೆಳಿಗ್ಗೆ, ಸಂಜೆ, ರಾತ್ರಿ ವೇಳೆಗಳಲ್ಲಿ ಕಂಡ ಸಮುದ್ರದ ದೃಶ್ಯಗ ಳನ್ನು, ಸಮುದ್ರದಲ್ಲಿ ಹುದು ಗಿದ ಮುತ್ತಿನ ಪರಿಕಲ್ಪನೆಯನ್ನು, ಅಲೆಗಳ ಅಬ್ಬರವನ್ನೂ, ಕಡಲಾಳದ ಅನಂತತೆ ಯನ್ನೂ  ಇವರು ಬಣ್ಣಗ ಳಲ್ಲಿ ಹಿಡಿದಿ ಟ್ಟಿದ್ದಾರೆ. ಮರುಭೂಮಿ ಯಲ್ಲಿ ಕಂಡು ಬರುವ ಅಪರೂಪದ ಸುಂದರ ದೃಶ್ಯ ಗಳು, ಅಲ್ಲಿನ ಗ್ರಾಮ ಹಾಗೂ ಪಟ್ಟಣ ಗಳು, ಮರುಭೂ ಮಿಯ ಹಡಗು ಒಂಟೆ ಇವೆಲ್ಲವೂ ಅವರ ಕುಂಚಗಳಲ್ಲಿ ಅದ್ಭುತ ವಾಗಿ ಮೂಡಿ ಬಂದಿವೆ.

ಈ ಮೂರು ವಿಭಿನ್ನ ವಿಷಯಗಳ ಸುಂದರವಾದ ದೃಶ್ಯಕಾವ್ಯ ಮೂಡಿದ್ದು ಪುತ್ತೂರಿನ ಡಾನ್ ಬಾಸ್ಕೊ ಕ್ಲಬ್ ವತಿಯಿಂದ ಮಾಯಿ ದೆ ದೆವುಸ್ ಚರ್ಚ್‌ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರೊನಾಲ್ಡ್ ಪಿಂಟೊ ಅವರ ಚಿತ್ರಕಲಾ ಪ್ರದರ್ಶನದಲ್ಲಿ. ಈ ಪ್ರದರ್ಶ ನಕ್ಕೆ ಅವರಿಟ್ಟ ಹೆಸರು ‘ಜರ್ನಿ’.

ಶಿಲುಬೆಗೆ ಜಡಿದ ಮೊಳೆಗಳ ಗುರುತಿರುವ, ಯೇಸುವಿನ ಕೈ ಬೊಗಸೆಯಲ್ಲಿ ‘ಲಾಸ್ಟ್ ಸಪ್ಪರ್’ನ ಚಿತ್ರ ಬಿಡಿಸಿದ್ದು ಅದ್ಭುತವಾದ ಕಲಾಕೃತಿ ಯಾಗಿದೆ. ಫೆ.10 ಮತ್ತು 11ರಂದು ನಡೆದ ಪ್ರದರ್ಶ ನದಲ್ಲಿ ಜೊಹರಾ ನಿಸಾರ್ ಅಹಮ್ಮದ್, ಕೃಷ್ಣಪ್ರಸಾದ್ ಆಳ್ವ, ಪ್ರಸನ್ನ ಕುಮಾರ್, ಸುದೇಶ್ ಶೆಟ್ಟಿ ಸಾಮೆತ್ತಡ್ಕ ಮುಂತಾದ ಗಣ್ಯರು, ವಿದ್ಯಾರ್ಥಿಗಳು ಮತ್ತು ಕ್ಲಬ್ಬಿನ ಸದಸ್ಯರು ಹಾಗೂ ಸಾರ್ವಜನಿಕರು ಈ ಕಲಾಪ್ರದರ್ಶನವನ್ನು ಆಸ್ವಾದಿಸಿದರು.

ಮೂಲತಃ ಪುತ್ತೂರಿನವರಾದ ರೊನಾಲ್ಡ್ ಪಿಂಟೊ ಅವರು ಬಹರೇ ನ್‌ನ ಜಾಹೀರಾತು ಕಂಪೆನಿಯೊಂದ ರಲ್ಲಿ ಕಲಾಕಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿಂದ ಹಿಂತಿರುಗಿದ ನಂತರ ಖಾಸಗಿ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾಕಲ್ಯಾಣ’ ಧಾರಾವಾಹಿಯ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದರು. ಪ್ರಸ್ತುತ ಅವರು ಈಗ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಆ್ಯಕ್ರಿಲಿಕ್, ತೈಲವರ್ಣ, ಪೇಪರ್ ಹಾಗೂ ಕ್ಯಾನ್ವಾ ಸ್‌ಗಳನ್ನು ಚಿತ್ರರಚನೆಗೆ ಬಳಸಿರುವ ಇವರು ಮೈಸೂರಿನ ಚಾಮರಾ ಜೇಂದ್ರ ಅಕಾಡೆಮಿ ಆಫ್ ವಿಷುವಲ್ ಆರ್ಟ್ಸ್‌ನಿಂದ ಪದವಿ ಪಡೆದಿದ್ದಾರೆ. ಆರನೇ ತರಗತಿಯ ವಿದ್ಯಾರ್ಥಿಯಾಗಿ ದ್ದಾಗಲೇ ಇವರಿಗೆ ಚಿತ್ರಕಲೆಯ ಗೀಳು ಹತ್ತಿತ್ತು.

ಪ್ರಕೃತಿಯನ್ನು ಇಷ್ಟಪಡುವ ಅವರ ಬಹುತೇಕ ಎಲ್ಲ ಚಿತ್ರಗಳಲ್ಲಿ ಪ್ರಕೃತಿಯ ವಿವಿಧ ಭಾವ ಹಾಗೂ ಬಣ್ಣಗಳನ್ನು ಕಾಣಬಹುದು. ಪತ್ನಿ ಬಬಿತಾ ಪಿಂಟೊ ಹಾಗೂ ಮಗಳು ರಿಯೋನಾ ಪಿಂಟೊ ಅವರನ್ನು ಹೊಂದಿರುವ ಸುಖೀ ಕುಟುಂಬ ಇವರದ್ದು. ಪುತ್ತೂರು, ಮೈಸೂರು ಹಾಗೂ ಕಾರ್ಕಳಗಳಲ್ಲಿ ನಡೆದ ವಿವಿಧ ಕಲಾ ವಿದರ ಸಾಮೂಹಿಕ ಚಿತ್ರಕಲಾ ಪ್ರದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಅಲ್ಲದೇ ಮಂಗ ಳೂರಿನ ಬಲ್ಮಠದಲ್ಲಿರುವ ಆರ್ಕಿಡ್ ಆರ್ಟ್ ಗ್ಯಾಲರಿಯಲ್ಲಿ ‘ಮಿ, ಸನ್ ರೈಸ್ ಅಂಡ್ ಡೆಸರ್ಟ್’ ಹಾಗೂ ‘ಪರ್ಲ್ ಅಂಡ್ ದಿ ಸೀ’ ಹೆಸರಿನ ಎರಡು ಚಿತ್ರಕಲಾ ಪ್ರದರ್ಶನಗಳನ್ನು ವೈಯಕ್ತಿಕವಾಗಿ ಏರ್ಪಡಿಸಿದ್ದರು.

ಈ ಚಿತ್ರಕಲಾ ಪ್ರದರ್ಶನವನ್ನು ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಶಾಂತಾಕುಮಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಯಿ ದೆ ದೆವುಸ್ ಪುತ್ತೂರಿನ ಧರ್ಮ ಗುರುಗಳಾದ ವಂ. ಆಲ್ಫ್ರೆಡ್ .ಜೆ.ಪಿಂಟೊ, ಶಾಸಕಿ ಶಕುಂ ತಳಾ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
-ಜೆಸ್ಸಿ.ಪಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT