ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತವೀರಸ್ವಾಮಿ ಜಾತ್ರೆಗೆ ತೆರೆ

Last Updated 13 ಫೆಬ್ರುವರಿ 2017, 13:06 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪ್ರಮುಖ ಅವಧೂತ ಪರಂಪರೆಯ ಪ್ರಮುಖ ದೈವವಾದ ಕಂದಿಕೆರೆ ಗವಿ ಶಾಂತವೀರ ಸ್ವಾಮೀಜಿ 27ನೇ ಜಾತ್ರಾಮಹೋತ್ಸವಕ್ಕೆ ಕವದಿ ಪೂಜೆಯೊಂದಿಗೆ ಭಾನುವಾರ ತೆರೆಬಿತ್ತು.

ಎಂಟು ದಿನ ನಡೆಯುವ ಜಾತ್ರೆಯ ಪ್ರಮುಖ ಘಟ್ಟವಾದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಬಜಗೂರು ಗ್ರಾಮಸ್ಥರಿಂದ ರಥಗಾಲಿ ಅಭಿಷೇಕ ನಡೆಯಿತು. ಗಂಗಾಸ್ನಾನ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ನೂರೊಂದೆಡೆ ಸೇವೆ ಸೇರಿದಂತೆ ವಿವಧ ಪೂಜಾ ವಿಧಿ ವಿಧಾನಗಳು ಜರುಗಿದವು.

ರಥೋತ್ಸವಕ್ಕೆ ಮುನ್ನಾದಿನ ಸಂಜೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಧ್ವಜಕುಣಿತ, ಡೊಳ್ಳು ಉತ್ಸವಕ್ಕೆ ಮೆರುಗು ನೀಡಿದವು.

ಆಂಧ್ರ, ದಾವಣಗೆರೆ, ಚಿತ್ರದುರ್ಗ, ಜಗಳೂರು, ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಜಾತ್ರೆಯ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಕಣಕುಪ್ಪೆಯ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಹಾಗೂ ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT