ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಗರ್ ಕಿಂಗ್

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪುರಾತನ ನಾಣ್ಯ, ಅಂಚೆಚೀಟಿ ಹೀಗೆ ಹಲವರಿಗೆ ಹಲವು ವಸ್ತುಗಳನ್ನು ಸಂಗ್ರಹಿಸುವುದು ಹವ್ಯಾಸ. ಜರ್ಮನಿಯ ಹ್ಯಾರಿ ಸ್ಪೆರ್ಲ್ ಅವರಿಗೆ ಬರ್ಗರ್ ಎಂದರೆ ಪ್ರಾಣ. ಹಾಗಾಗಿ ಅವರು ಬರ್ಗರ್ ಥೀಮ್‌ನಲ್ಲಿ ಒಟ್ಟು 3,724 ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಬರ್ಗರ್ ಥೀಮ್‌ನಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದ ಖ್ಯಾತಿ ಇವರದು. ಈ ವಿಚಾರವಾಗಿ 2017ರ ಸಾಲಿನ ಗಿನ್ನಿಸ್‌ ದಾಖಲೆಗೂ ಹ್ಯಾರಿ ಅವರ ಹೆಸರು ಸೇರ್ಪಡೆಗೊಂಡಿದೆ. ಬರ್ಗರ್ ಆಕಾರದ ಮೊಬೈಲ್, ಹಾಸಿಗೆ, ಸಿಡಿ, ಪುಸ್ತಕ, ಬ್ಯಾಗ್, ಬಟ್ಟೆ, ಆಟದ ಸಾಮಾನು ಹೀಗೆ ಅನೇಕ ವಸ್ತುಗಳು ಇವರ ಬಳಿ ಇವೆ.

ಅಮೆರಿಕ ಫ್ಲೊರಿಡಾದ ತಮ್ಮ ನಿವಾಸದಲ್ಲಿ ಈ ಸಂಗ್ರಹವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮುಂದೆ ಈ ವಸ್ತುಗಳನ್ನು ಪ್ರದರ್ಶಿಸಲೆಂದು ದೊಡ್ಡದೊಂದು ಚೀಸ್ ಡಬಲ್ ಬರ್ಗರ್ ಆಕಾರದ ಮನೆ ಕಟ್ಟಿಸಿ ‘ಬರ್ಗರ್ ಮ್ಯೂಸಿಯಂ’ ಮಾಡುವ ಕನಸು ಹ್ಯಾರಿ ಅವರಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT