ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪ್ರೀತಿಯ ಕನವರಿಕೆ...

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅವತ್ತು ನನ್ನ ಹುಟ್ಟುಹಬ್ಬ ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದು ಸಂಜೆ ಟ್ಯೂಷನ್‌ಗೆ ಹೋದೆ. ನನ್ನ ಸ್ನೇಹಿತರೆಲ್ಲ ಮೊದಲೇ ಬಂದು ಕುಳಿತಿದ್ದರು. ಆದರೆ ಅಲ್ಲಿ ನಾನು ನಿರೀಕ್ಷೆ ಮಾಡದ ಒಲವಿನ ಉಡುಗೊರೆಯೊಂದು ನನಗಾಗಿ ಕಾದಿತ್ತು.

ಅಂದು ನನ್ನ ಗೆಳತಿ ಸ್ಫೂರ್ತಿ ನನಗೆ ಲವ್‌ ಲೆಟರ್ ಕೊಟ್ಟ ದಿನ. ಸ್ನೇಹಿತರಿಂದ ಬಿಡುಗಡೆ ಪಡೆದು ಹೇಗೋ ಪತ್ರ ಓದಿದೆ. ಓದಿ ಮುಗಿದ ಕ್ಷಣ ನನ್ನದೆ ಬಡಿತ  ಜೋರಾಗಿತ್ತು ಅಂತೆಯೇ ಸ್ಫೂರ್ತಿ ಮೇಲಿನ ಪ್ರೀತಿಯೂ ಜಾಸ್ತಿಯಾಗಿತ್ತು.

ನಿಜ ಹೇಳ್ಬೇಕು ಅಂದ್ರೆ ನಾನು ಟ್ಯೂಷನ್‌ಗೆ ಸೇರಿಕೊಂಡಿದ್ದೇ ಅವಳಿಗೋಸ್ಕರ. 7ನೇ ಕ್ಲಾಸ್‌ವರೆಗೂ ಜತೆಗೇ  ಓದಿದ್ದ ನಾವು ಹೈಸ್ಕೂಲಿಗೆ ಬೇರೆ ಬೇರೇ ಶಾಲೆಗಳಿಗೆ ಹೋದಾಗ ಅವಳಿಗಿಂತ ಮುಂಚಿತವಾಗಿ ಅವಳ ಮೇಲೆ ಪ್ರೀತಿ ಹುಟ್ಟಿತ್ತು.

ಪ್ರೀತಿಯ ದ್ಯೋತಕವಾಗಿ ಪ್ರತಿದಿನ ಸ್ಫೂರ್ತಿಗೆ ಗುಲಾಬಿ ಹೂ ಕೊಡುತ್ತಿದ್ದೆ. ಸ್ಫೂರ್ತಿಗೆ ನೀಲಿ ಬಣ್ಣ ಅಂದ್ರೆ ತುಂಬಾ ಇಷ್ಟ. ಯಾವತ್ತಾದ್ರೂ ಬಿಳಿ ಗುಲಾಬಿ ಸಿಕ್ಕಿದ್ರೆ ಇಂಕ್ ಹಾಕಿ ನೀಲಿ ಗುಲಾಬಿ ಮಾಡಿಕೊಳ್ಳುತ್ತಿದ್ದಳು. ಅದಕ್ಕೆ ನಾನು ಅವಳನ್ನು ನೀಲಿ ಗುಲಾಬಿ ಅಂತ ಕರೆಯುತ್ತಿದ್ದೆ.

ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌ ಅನ್ನುವ ಕಾರಣಕ್ಕಾಗಿ ಮನೆಯವರು ಟ್ಯೂಷನ್‌ ಬಿಡಿಸಿದರು. ಕೊನೇ ದಿನ ಅವಳಿಗೆ ಬಿಳಿ ಗುಲಾಬಿ ಕೊಟ್ಟಿದ್ದೆ. ಅದನ್ನ ನೀಲಿ ಮಾಡಿ ಮುಡಿದುಕೊಂಡಿದ್ದಳು. ಅದೇ ಕೊನೆ ದಿನ ಅವಳನ್ನ ನಾನು ಕೊನೇ ಬಾರಿ ಮಾತಾಡಿಸಿದ್ದು.

ಆಮೇಲೆ ನಮ್ಮ ಭೇಟಿ ಅಷ್ಟಾಗಿ ಆಗಲಿಲ್ಲ. ಆದರೆ, ಸ್ಫೂರ್ತಿ ಯಾಕೋ ನನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಅನಿಸಿತು. ಯಾಕೆ ಹೀಗೆ ಮಾಡಿದಳು ಎಂದು ಇಂದಿಗೂ ಗೊತ್ತಿಲ್ಲ. ಆದರೆ, ಪ್ರತಿವರ್ಷ ನನ್ನ ಹುಟ್ಟುಹಬ್ಬದ ದಿನ ಕೊನೆಯ ಶುಭ ಹಾರೈಕೆ ಅವಳದ್ದೇ ಆಗಿರುತ್ತೆ. ಇಂದಿಗೂ ನಾನು ಅವಳಿಗಾಗಿಯೇ ಬದುಕುತ್ತಿದ್ದೇನೆ. ಮಿಸ್‌ ಯೂ ನೀಲಿ ಗುಲಾಬಿ!
-ವಿವೇಕ್ ಮೌರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT