ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಿ: ಬ್ರಿಟಿಷ್‌ ಗಾಯಕಿ ಅಡಲ್‌ಗೆ ಮೂರು ಪ್ರಶಸ್ತಿ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಲಾಸ್‌ ಏಂಜಲೀಸ್‌: ಪ್ರತಿಷ್ಠಿತ 59ನೇ ಗ್ರಾಮಿ ಪ್ರಶಸ್ತಿಯಲ್ಲಿ ಬ್ರಿಟಿಷ್‌ ಗಾಯಕಿ ಅಡಲ್‌ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಭಾರತದ ತಬಲಾ ವಾದಕ ಸಂದೀಪ್‌ ದಾಸ್‌ ಕಾರ್ಯನಿರ್ವಹಿಸಿರುವ ಚೀನಾದ ‘ಸಿಂಗ್‌ ಮಿ ಹೋಮ್‌’ ಆಲ್ಬಂಗೆ ವಿಶ್ವ ಸಂಗೀತ ವಿಭಾಗದಲ್ಲಿ  ಪ್ರಶಸ್ತಿ ದೊರೆತಿದೆ.
 
ಅಡಲ್ ಅವರ ಹೆಸರು ಐದು  ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಒಂಬತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ ಅಮೆರಿಕದ ಗಾಯಕಿ, ನಟಿ ಬಿಯೊನ್ಸೆ ಅವರ ಹೆಸರು ಮುಂಚೂಣಿಯಲ್ಲಿತ್ತು. ಎರಡು ವಿಭಾಗಗಳಲ್ಲಷ್ಟೇ ಅವರಿಗೆ ಪ್ರಶಸ್ತಿ ದೊರೆಯಿತು.
 
ಅನುಷ್ಕಾ ಶಂಕರ್‌ಗೆ ನಿರಾಸೆ: ‘ಲ್ಯಾಂಡ್‌ ಆಫ್‌ ಗೋಲ್ಡ್‌’ ಆಲ್ಬಂಗಾಗಿ ಜಾಗತಿಕ ಸಂಗೀತ ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಸಿತಾರ್ ವಾದಕಿ ಅನೂಷ್ಕಾ ಶಂಕರ್‌ ನಿರಾಸೆ ಅನುಭವಿಸಿದ್ದಾರೆ. ಅವರು ನಾಮನಿರ್ದೇಶನಗೊಂಡು ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗುತ್ತಿರುವುದು ಇದು ಆರನೇ ಬಾರಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT