ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದಿಂದ ಖಂಡಾಂತರ ಕ್ಷಿಪಣಿ ಪರೀಕ್ಷೆ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸೋಲ್‌: ಅಣ್ವಸ್ತ್ರ ಒಯ್ಯಬಲ್ಲ ನೂತನ ಖಂಡಾಂತರ ಕ್ಷಿಪಣಿ ‘ಪುಕುಂಗ್‌ಸಾಂಗ್ – 2’ರ ಪರೀಕ್ಷಾರ್ಥ ಉಡಾವಣೆ ಮಾಡಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿದೆ.
 
‘ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಶಕ್ತಿಶಾಲಿ ಅಣ್ವಸ್ತ್ರ ಸಾಧನದ ಸೇರ್ಪಡೆಯಿಂದ ದೇಶಕ್ಕೆ ಹೆಚ್ಚಿನ ಬಲ ಬಂದಿರುವುದಾಗಿ ಅವರು ತಿಳಿಸಿದ್ದಾರೆ’ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
 
ಕುಸಾಂಗ್‌ನ ಪಶ್ಚಿಮ ಭಾಗದ ನಗರದಿಂದ ಕ್ಷಿಪಣಿ ಉಡಾವಣೆ ಮಾಡಲಾಗಿದೆ. ಸುಮಾರು 500 ಕಿ.ಮೀ. ದೂರದ ಗುರಿ ತಲುಪಿದ ಕ್ಷಿಪಣಿಯು ಜಪಾನ್ ಸಮುದ್ರದಲ್ಲಿ ಪತನಗೊಂಡಿತು.
 
ಕ್ಷಿಪಣಿ ನಭಕ್ಕೆ ಚಿಮ್ಮುತ್ತಿರುವ, ಅಧ್ಯಕ್ಷ ಕಿಮ್ ಜಾಂಗ್ ಉನ್ ಅದನ್ನು ವೀಕ್ಷಿಸುತ್ತಿರುವ, ವಿಜ್ಞಾನಿಗಳು ಮತ್ತು ಸೈನಿಕರು ಸಂಭ್ರಮ ಆಚರಿಸುತ್ತಿರುವ ಚಿತ್ರಗಳನ್ನು ಕೆಸಿಎನ್‌ಎ ಬಿಡುಗಡೆ ಮಾಡಿದೆ. 
 
ಘನ ಇಂಧನ ಎಂಜಿನ್: ‘ಪುಕುಂಗ್‌ಸಾಂಗ್ – 2’ ಘನ ಇಂಧನ ಎಂಜಿನ್ ಹೊಂದಿದೆ. ಇದಕ್ಕೆ ಇಂಧನ ತುಂಬಿಸಲು ಕಡಿಮೆ ಸಮಯ ಸಾಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಥ ಕ್ಷಿಪಣಿಗಳನ್ನು ಉಡಾವಣೆಗೂ ಮುನ್ನ ಉಪಗ್ರಹಗಳ ನೆರವಿನಿಂದ ಪತ್ತೆ ಮಾಡುವುದು ಶತ್ರುಗಳಿಗೆ ಸಾಧ್ಯವಾಗದು ಎಂದು ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT