ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ವಿರುದ್ಧ ಬೃಹತ್ ಪ್ರತಿಭಟನೆ

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮೆಕ್ಸಿಕೊ: ಗಡಿಯಲ್ಲಿ ಗೋಡೆ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ವಿರುದ್ಧ ಮೆಕ್ಸಿಕೊದಲ್ಲಿ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಜನರು ಬೃಹತ್‌ ಪ್ರತಿಭಟನೆ ನಡೆಸಿದರು.
 
ಮೆಕ್ಸಿಕೊ ನಗರದಲ್ಲಿ ದೊಡ್ಡ ಬ್ಯಾನರ್‌ಗಳು, ಬಾವುಟಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಟ್ರಂಪ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.  
 
ಮೆಕ್ಸಿಕೊ ಸಿಟಿಯಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಬೀದಿಗಿಳಿದರು. ಸುಮಾರು 20 ನಗರಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಉದ್ಯಮ ಮತ್ತು ನಾಗರಿಕ ಸಂಘಟನೆಗಳು ಕೈ ಜೋಡಿಸಿದ್ದವು. 
 
‘ಮೆಕ್ಸಿಕೊವನ್ನು ಗೌರವಿಸಿ ಮಿಸ್ಟರ್‌ ಟ್ರಂಪ್‌’ ಎಂಬ ಬೃಹತ್‌ ಬ್ಯಾನರ್‌ ಪ್ರದರ್ಶಿಸಿದ ಪ್ರತಿಭಟನಾಕಾರರು, ಟ್ರಂಪ್‌ ಅವರು ಅಡಾಲ್ಫ್‌ ಹಿಟ್ಲರ್ ಅವರಂತೆ ಮೀಸೆ ಹೊಂದಿರುವ ಚಿತ್ರವಿರುವ ಟಿ ಶರ್ಟ್‌ಗಳನ್ನು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
 
‘ತಮ್ಮಲ್ಲಿನ ದ್ವೇಷ ಭಾವನೆ, ತಾರತಮ್ಯ ಮತ್ತು ಪ್ರತಿಗಾಮಿ ಮೂರ್ಖತನದ ವಿರುದ್ಧ ಇಡೀ ದೇಶ ಒಂದುಗೂಡಿ ಸಿಡಿದೆದ್ದಿದೆ ಎಂಬುದನ್ನು ಟ್ರಂಪ್‌ ಅವರು ನೋಡಲಿ ಎಂಬ ಕಾರಣಕ್ಕೆ ನಾವಿಲ್ಲಿ ಸೇರಿದ್ದೇವೆ’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿ ರೊಸಾಸ್‌ ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT