ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮಾರಿಕಾಂಬಾ ಜಾತ್ರೆ

ಸಾಗರ: ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ l ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ
Last Updated 14 ಫೆಬ್ರುವರಿ 2017, 7:46 IST
ಅಕ್ಷರ ಗಾತ್ರ
ಸಾಗರ:   ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗಳಲ್ಲಿ ಒಂದಾಗಿರುವ ಇಲ್ಲಿನ ಮಾರಿಕಾಂಬಾ ದೇವಿ  ಜಾತ್ರಾ ಮಹೋತ್ಸವ ಇಂದು (ಫೆ.14) ಆರಂಭ ಗೊಂಡು ಫೆ.22ರವರೆಗೂ ನಡೆಯಲಿದೆ.
 
ಒಂದು ತಿಂಗಳಿನಿಂದ ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತ ತಲುಪಿದೆ. ಜಾತ್ರೆಯ ಮೊದಲ ದಿನ ಮಾರಿಕಾಂಬಾ ದೇವಿಯ ತವರು ಮನೆ ಗುಡಿಯ ಎದುರು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಮಂಗಳವಾರ ರಾತ್ರಿ ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವವಿದ್ದು, ಬುಧವಾರ ಬೆಳಗಿನ ಜಾವ ಗಂಡನ ಮನೆಯ ಗುಡಿಯ ಎದುರು ನಿರ್ಮಿಸಿರುವ ಭವ್ಯ ಕಲಾ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಜಾತ್ರೆಯ ಕೊನೆಯ ದಿನದವರೆಗೂ ಇಲ್ಲಿಯೇ ಪೂಜಾ ಕಾರ್ಯಕ್ರಮಗಳು ನಡಯಲಿವೆ. 
 
ಮಾರಿಕಾಂಬಾ ದೇವಸ್ಥಾನದ ಎದುರು ನಿರ್ಮಿಸಿರುವ ವೇದಿಕೆಯಲ್ಲಿ ಪ್ರತಿದಿನ ಸಂಜೆ 4ರಿಂದ ರಾತ್ರಿ 12ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಗರ್‌ ಹೋಟೆಲ್‌ ವೃತ್ತದಿಂದ ಪೇಟೆ ಪೊಲೀಸ್‌ ಠಾಣೆ ವೃತ್ತದವರೆಗೂ ಮಳಿಗೆಗಳನ್ನು ನಿರ್ಮಿಸಲಾಗಿದ್ದು ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಬಂದು ಠಿಕಾಣಿ ಹೂಡಿದ್ದಾರೆ.
 
ಗಾಂಧಿ ಮೈದಾನ ಹಾಗೂ ನೆಹರೂ ಮೈದಾನದಲ್ಲಿ ಮನರಂಜನಾ ಕಾರ್ಯ ಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದ್ದು,  ಮನರಂಜನೆ  ಆಟಗಳ ಸಾಮಗ್ರಿಗಳನ್ನು ಈಗಾಗಲೇ ಜೋಡಿಸಲಾಗಿದೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಮಂದಿ ಜಾತ್ರೆಯಲ್ಲಿ ಸೇರುವ ನಿರೀಕ್ಷೆ ಇದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಾತ್ರೆಯ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆ   ನೂತನ ರಸ್ತೆ ನಿರ್ಮಿಸಲಾಗಿದೆ.  ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ  ಮಾಡಿದೆ. ಒಟ್ಟು ನಾಲ್ಕು ಸಂಚಾರಿ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದ್ದು, ನೈರ್ಮಲ್ಯ ಕಾಪಾಡಲು ನಗರಸಭೆ ಮುಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಹೆಚ್ಚುವರಿ ಗುತ್ತಿಗೆ ಕಾರ್ಮಿಕರನ್ನು ನಗರಸಭೆ ನಿಯೋಜಿಸಿದೆ. 
 
ಊರಿನ ಎಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು ಸ್ನೇಹಿತರು, ನೆಂಟರಿಷ್ಟರನ್ನು ಸ್ವಾಗತಿಸಲು ಜನರು ಕಾತರದಿಂದಿದ್ದಾರೆ. ಊರಿನ ನಾಲ್ಕೂ ದಿಕ್ಕುಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸ ಲಾಗಿದೆ. ಅನೇಕ ಬೀದಿಗಳಲ್ಲಿ ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಅಂಗವಾಗಿ ಅಗ್ರಹಾರ ಬಡಾವಣೆಯ ಗಣಪತಿ ಕೆರೆ ಬಳಿ ಸರ್ಕಸ್ ಕಂಪೆನಿ ಹಾಗೂ ಇಂದಿರಾ ಗಾಂಧಿ ಕಾಲೇಜು ಬಳಿ ನಾಟಕದ ಕಂಪೆನಿ ಈಗಾಗಲೇ ಬೀಡುಬಿಟ್ಟಿವೆ.
 
ಒಂಬತ್ತು ದಿನಗಳ ಕಾಲವೂ ಜಾತ್ರೆಯಲ್ಲಿ ವಿವಿಧ ಜಾತಿ, ಧರ್ಮಗಳ ಜನರು ಒಟ್ಟಿಗೆ ಕಲೆತು ಸಂಭ್ರಮಿ ಸುವುದು ಇಲ್ಲಿನ ವಿಶೇಷತೆ. ಜಾತ್ರೆಯ ವಿಧಿ ವಿಧಾನಗಳನ್ನು ವಿವಿಧ ಸಮು ದಾಯದವರು ನಿಷ್ಠೆಯಿಂದ    ನಿರ್ವಹಿ ಸುತ್ತಾರೆ. ಅಮ್ಯೂಸ್‌ಮೆಂಟ್‌ ಹರಾಜಿ ನಿಂದ ಮಾರಿಕಾಂಬಾ ದೇವಸ್ಥಾನದ ಸಮಿತಿಗೆ  ₹  66.66 ಲಕ್ಷ ಆದಾಯ ದೊರಕಿದ್ದು ಮಳಿಗೆಗಳ ಹರಾಜಿನಿಂದ ಕೂಡ ದೊಡ್ಡ ಮೊತ್ತದ ಆದಾಯ ಲಭ್ಯವಾಗಿದೆ.
 
ಈ ಬಾರಿ ಎಲ್ಲಾ  ಹರಾಜುಗಳನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ನಡೆಸಿರುವುದರಿಂದ ಮಧ್ಯವರ್ತಿಗಳ ಹಾವಳಿಗೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಂತಾಗಿದೆ. ಆಧುನಿಕತೆಯ  ಪಲ್ಲಟಗಳ ನಡುವೆಯೂ ಮಾರಿಕಾಂಬಾ ಜಾತ್ರೆ ತನ್ನ ಜನಪ್ರಿಯತೆಯನ್ನು  ಉಳಿಸಿಕೊಂಡಿ ರುವುದು ಗಮನಾರ್ಹ ಸಂಗತಿ ಎನ್ನುತ್ತಾರೆ ಭಕ್ತರೊಬ್ಬರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT