ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆಯಿಂದ ಅಭಿವೃದ್ಧಿ ಸಾಧ್ಯ:ಕೂಡಲೂರ

Last Updated 14 ಫೆಬ್ರುವರಿ 2017, 9:47 IST
ಅಕ್ಷರ ಗಾತ್ರ
ಯಾದಗಿರಿ: ‘ಸಾಕ್ಷರತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ನಾವು ಅತಿ ಹೆಚ್ಚಿನ ಕಾಳಜಿಯೊಂದಿಗೆ ಶಿಕ್ಷಣಕ್ಕಾಗಿ ಪ್ರಯತ್ನ ಮಾಡಬೇಕಾಗಿದೆ’ ಎಂದು ಬಳಿಚಕ್ರ ಜಿಲ್ಲಾ ಪಂಚಾಯಿತಿ ಸದಸ್ಯ ಭೀಮರಡ್ಡಿ ಪಾಟೀಲ ಕೂಡಲೂರ ಅಭಿಪ್ರಾಯಪಟ್ಟರು.
 
ಸಮೀಪದ ಬಳಿಚಕ್ರ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾಕ್ಷರ ಭಾರತ ಕಾರ್ಯಕ್ರಮದ ಎರಡನೇ ಹಂತದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 
 
‘ಉತ್ತಮ ಗುಣಮಟ್ಟದ ಜೀವನಕ್ಕೆ ಸಾಕ್ಷರತೆ ಅತಿ ಮುಖ್ಯವಾಗಿದೆ. ಇದರಿಂದ ಉತ್ತಮ ಜ್ಞಾನ ಪಡೆಯಬಹುದು.  ಜತೆಗೆ ಉದ್ಯೋಗ ಪಡೆಯುವುದು ಸೇರಿದಂತೆ ವ್ಯಕ್ತಿತ್ವ ರೂಪಿ ಸಿಕೊಳ್ಳಬಹುದು ಮತ್ತು ಉನ್ನತ ಸ್ಥಾನಕ್ಕೇರಬಹುದು. ಇದು  ಭಾರತ ದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅತಿ ಪ್ರಾಮುಖ್ಯತೆ ಹೊಂದಿದೆ.
 
ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ರೂ ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಿ ಆ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಾಗುವಂತೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು. ಸೂರ್ಯಪ್ರಕಾಶ ಘನಾತೆ ಪ್ರಾಸ್ತಾವಿಕ ಮಾತನಾಡಿದರು. 
 
ಮುಖ್ಯಗುರು ವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ, ಶಿಕ್ಷಕರಾದ ಶಂಕ್ರಪ್ಪ, ಮಲ್ಲಯ್ಯ, ಇಮಾಮಸಾಬ, ಕೃಷ್ಣಪ್ಪ ಸೇರಿದಂತೆ ಇತರರು ಕಾರ್ಯಕ್ರದಲ್ಲಿ ಇದ್ದರು.  ಬನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT