ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್‌ ಗೊಂಬೆಗಳ ಮ್ಯೂಸಿಯಂ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲಿಟ್ಲ್‌ ಕೃಷ್ಣ, ಚೋಟಾ ಭೀಮ್‌, ಬೆನ್‌ 10, ಬ್ಯಾಟ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌, ಸೂಪರ್‌ಮ್ಯಾನ್, ಡೋರಾಮ್ಯಾನ್‌, ಮಿಕ್ಕಿ ಮೌಸ್‌, ಟಾಮ್‌ ಅಂಡ್‌ ಜರ್ರಿ, ಬಾರ್ಬಿ... ಇವೆಲ್ಲಾ  ಮಕ್ಕಳನ್ನು ರಂಜಿಸುವ ಪ್ರಮುಖ ಕಾರ್ಟೂನ್‌ ಪಾತ್ರಗಳು.

ಇವುಗಳನ್ನು ನೋಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಈ ರೀತಿಯ ಎಲ್ಲಾ ಕಾರ್ಟೂನ್‌ ಪಾತ್ರಗಳು ಒಂದೇ ಕಡೆ ನೋಡಿದರಂತೂ ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ.

ಮಕ್ಕಳನ್ನು ಆಕರ್ಷಿಸುವ ಈ ಕಾರ್ಟೂನ್‌ ಪಾತ್ರಗಳನ್ನು ಒಂದೇ ಕಡೆ ನೋಡಬೇಕೆಂದಿದ್ದರೆ ಒಮ್ಮೆ ‘ದಿ ಟಾಯ್‌ ಅಂಡ್‌ ಆ್ಯಕ್ಷನ್‌ ಫಿಗರ್‌ ಮ್ಯೂಸಿಯಂ’ ಸಂದರ್ಶಿಸಲೇಬೇಕು.

ಎಲ್ಲಿದೆ !
* ಅಮೆರಿಕದ ಒಕ್ಲಾಹಾಮಾ ರಾಜ್ಯದ ಪೌಲ್ಸ್‌ ವ್ಯಾಲಿಯಲ್ಲಿದೆ 

ಮ್ಯೂಸಿಯಂ ಸ್ಥಾಪನೆ
* ಅಕ್ಟೋಬರ್‌ 15, 2005ನಿಂದ ಕಾರ್ಯಾರಂಭ.
*ಕೆವಿನ್‌ ಸ್ಟಾರ್ಕ್‌ ಮತ್ತು ಅವರ ಸ್ನೇಹಿತರು ಜತೆಗೂಡಿ ಈ ಮ್ಯೂಸಿಯಂ  ಸ್ಥಾಪಿಸಿದ್ದಾರೆ. ಪ್ರಸ್ತುತ ಕೆವಿನ್‌ ಸ್ಟಾರ್ಕ್‌ ಅವರೇ ಇದರ ಕ್ಯೂರೇಟರ್‌.

ವಿಶೇಷ
* ಕಾರ್ಟೂನ್‌ ಬೊಂಬೆಗಳನ್ನು ಸಂಗ್ರಹಿಸುವ ವಿಶ್ವದ ಏಕೈಕ ಮ್ಯೂಸಿಯಂ.

* ಹಲವು ಕಾರ್ಟೂನ್‌ ಪಾತ್ರಗಳ ಭಿನ್ನ–ವಿಭಿನ್ನ ಬೊಂಬೆಗಳು ಇಲ್ಲಿವೆ.
* 50ರ ದಶಕದಿಂದ ಇದುವರೆಗೆ ಬಂದಿರುವ ಎಲ್ಲ ಕಾರ್ಟೂನ್‌ ಪಾತ್ರಗಳ ಬೊಂಬೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
* ವಿಶ್ವದ ಪ್ರಸಿದ್ಧ ಕಾಮಿಕ್ಸ್‌, ವ್ಯಂಗ್ಯಚಿತ್ರ, ಕಾರ್ಟೂನ್‌ ಕಾದಂಬರಿಗಳು, ನಿಯತಕಾಲಿಕೆಗಳನ್ನು ಇಲ್ಲಿ ನೋಡಬಹುದು.
* ಒಂದು ಇಂಚಿನಿಂದ ಹಿಡಿದು 12 ಅಡಿ ಎತ್ತರದ ಕಾರ್ಟೂನ್‌ ಬೊಂಬೆಗಳು ಇಲ್ಲಿವೆ.
* ಒಕ್ಲಾಹಾಮಾ ರಾಜ್ಯದ ಪ್ರಮುಖ ಆಕರ್ಷಣೆಗಳಲ್ಲಿ ಈ ಮ್ಯೂಸಿಯಂ ಸಹ ಒಂದು.
* ಈ ಮ್ಯೂಸಿಯಂಗೆ  ‘ರೆಡ್‌ಬಡ್‌’ ಪ್ರಶಸ್ತಿ ಲಭಿಸಿದೆ.
* ಒಕ್ಲಹೊಮ ರಾಜ್ಯದ ಪ್ರಮುಖ ವ್ಯಂಗ್ಯಚಿತ್ರ ಕಲಾವಿದರ  ಕುಂಚದಲ್ಲಿ ಅರಳಿದ ಹಲವು ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
* ಕಾರ್ಟೂನ್‌ ಪಾತ್ರಗಳ ಹುಟ್ಟು, ವಿಶೇಷ... ಹೀಗೆ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.
* ಪ್ರತಿ ವರ್ಷ ಆರಂಭವಾಗುತ್ತಿದ್ದಂತೆ ಹೊಸ ಹೊಸ ಪಾತ್ರಗಳನ್ನು ಈ ಮ್ಯೂಸಿಯಂನಲ್ಲಿ ಸೇರಿಸಲಾಗುತ್ತದೆ.

* 75 ಸಾವಿರ ಮ್ಯೂಸಿಯಂಗೆ ಭೇಟಿ ನೀಡಿದ 40ಕ್ಕೂ ಹೆಚ್ಚು ದೇಶಗಳ ಸಂದರ್ಶಕರ ಸಂಖ್ಯೆ.

*13 ಸಾವಿರ ಮ್ಯೂಸಿಯಂನಲ್ಲಿರುವ ಒಟ್ಟು ಕಾರ್ಟೂನ್‌ ಗೊಂಬೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT