ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಣ್‌ ಚಿತ್ರದಲ್ಲಿ ಸಾರಾ ಅಲಿ ಖಾನ್

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸೈಫ್‌ ಅಲಿ ಖಾನ್, ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ ಅಲಿ ಖಾನ್ ಅವರ ಬಾಲಿವುಡ್‌ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ.

ಸದಾ ಹೊಸತನಕ್ಕಾಗಿ ಅರಸುವ ಕರಣ್‌ ಜೋಹರ್‌, ಸಾರಾ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಕರಣ್‌ ಅವರ ನಿರ್ಮಾಣದ ‘ಸ್ಟೂಡೆಂಟ್ ಆಫ್‌ ದಿ ಇಯರ್ 2’ ಚಿತ್ರದ ನಾಯಕಿಯಾಗಿ ಸಾರಾ ಆಯ್ಕೆಯಾಗಿದ್ದಾರಂತೆ. ಇದೇ ಸರಣಿಯ ಮೊದಲ ಚಿತ್ರದಲ್ಲಿ ಅಲಿಯಾ ಭಟ್ ವರುಣ್ ಧವನ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.

‘ಸ್ಟೂಡೆಂಟ್ ಆಫ್‌ ದಿ ಇಯರ್ 2’ ಜೊತೆಗೆ ಹೃತಿಕ್‌ ರೋಷನ್ ಅವರ ಹೊಸ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೂ ಸಾರಾ ಅವರನ್ನು ಕೇಳಲಾಗಿದೆ. ಆದರೆ ಚಿತ್ರ ಇನ್ನೂ ಅಂತಿಮವಾಗಿಲ್ಲ ಇನ್ನೂ ಮಾತುಕತೆ ಹಂತದಲ್ಲಿದೆ ಎಂದಿದ್ದಾರೆ ಹೃತಿಕ್‌. ಆ ಚಿತ್ರವನ್ನೂ ಕರಣ್‌ ಜೋಹರ್ ಅವರೇ ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT