ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾದಲ್ಲಿ ಕಿಮ್ ಮಲಸಹೋದರ ಹತ್ಯೆ

Last Updated 14 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸೋಲ್: ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಮಲಸಹೋದರ ಕಿಮ್ ಜಾಂಗ್‌ ನಮ್‌ (45) ಅವರನ್ನು ಮಲೇಷ್ಯಾದಲ್ಲಿ ಹತ್ಯೆ ಮಾಡಲಾಗಿದೆ.
 
ಕ್ವಾಲಾಲಂಪುರದ ವಿಮಾನನಿಲ್ದಾಣದಲ್ಲಿ ಸೋಮವಾರ ಅವರನ್ನು ಇಬ್ಬರು ಅಪರಿಚಿತ ಮಹಿಳೆಯರು ವಿಷಪೂರಿತ ಸೂಜಿಗಳನ್ನು ಬಳಸಿ ಕೊಂದಿದ್ದಾರೆ ಎಂದು ದಕ್ಷಿಣ ಕೊರಿಯಾದ ಚೋಸನ್‌ ಟಿವಿ ವರದಿ ಮಾಡಿದೆ. 
 
ಉತ್ತರ ಕೊರಿಯಾ ನಾಯಕರಾಗಿದ್ದ ಕಿಮ್‌ ಜಾಂಗ್‌ 2 ಅವರ ಪುತ್ರರಾಗಿದ್ದ ನಮ್‌ ಅವರನ್ನು ಜಾಂಗ್‌ ಅವರ ಉತ್ತರಾಧಿಕಾರಿ ಎಂದೇ ಪರಿಗಣಿಸಲಾಗಿತ್ತು. 
 
ಆದರೆ ನಕಲಿ ಪಾಸ್‌ಪೋರ್ಟ್‌ ಮೂಲಕ ಜಪಾನ್ ಮತ್ತು ಡಿಸ್ನಿಲ್ಯಾಂಡ್‌ ಪ್ರವೇಶಿಸಲು 2001ರಲ್ಲಿ ವಿಫಲ ಯತ್ನ ನಡೆಸಿದ ಬಳಿಕ ಕಿಮ್ ಜಾಂಗ್‌ 2 ಅವರ ವಿಶ್ವಾಸ ಕಳೆದುಕೊಂಡಿದ್ದರು. 
 
ನಂತರ ಅವರು ಮಕಾವುದಲ್ಲಿ ನೆಲೆಸಿದ್ದರು. 2011ರಲ್ಲಿ ತಂದೆಯ ನಿಧನದ ನಂತರ ನಮ್ ಅವರ ಮಲಸಹೋದರ ಕಿಮ್ ಜಾಂಗ್ ಉನ್‌ ಅವರು ಅಧಿಕಾರ ವಹಿಸಿ
ಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT