ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿ: ಸಭೆ

ಖಾಸಗಿ , ಸರ್ಕಾರಿ ರಂಗಗಳಲ್ಲಿ ಆಚರಣೆಗೆ ನಿರ್ಣಯ
Last Updated 15 ಫೆಬ್ರುವರಿ 2017, 9:08 IST
ಅಕ್ಷರ ಗಾತ್ರ
ಕುಷ್ಟಗಿ: ಛತ್ರಪತಿ ಶಿವಾಜಿ ಮಹಾರಾಜ ಮತ್ತು ಕವಿ ಸರ್ವಜ್ಞ ಅವರ ಜಯಂತಿಯನ್ನು ಸರ್ಕಾರದಿಂದ ಮತ್ತು ಸಂಘಟನೆಯವರು ಆಚರಿಸಲು ನಿರ್ಧರಿಸಲಾಯಿತು.
 
ಎರಡೂ ಜಯಂತಿಗಳ ಆಚರಣೆಗೆ ಸಂಬಂಧಿಸಿದಂತೆ ಮಂಗಳವಾರ ತಹಶೀಲ್ದಾರ್‌ ಎಂ.ಗಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿವಾಜಿ ಮತ್ತು ಸರ್ವಜ್ಞ ಅವರನ್ನು ಪ್ರತಿನಿಧಿಸುವ ಸಮಾಜದ ಪ್ರಮುಖರ ಸಲಹೆಯಂತೆ ಸಭೆ ನಿರ್ಣಯಿಸಿತು.
 
ಫೆ 19ರಂದು ಛತ್ರಪತಿ ಶಿವಾಜಿ ಜಯಂತಿ, 20ರಂದು ಸರ್ವಜ್ಞ ಜಯಂತಿಯನ್ನು ತಹಶೀಲ್ದಾರ್‌ ಕಚೇರಿಯಲ್ಲಿ ಸರಳವಾಗಿ ಆಚರಿಸುವುದು.
ಫೆ 22ರಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮಾರ್ಚ್‌ ಮೊದಲ ವಾರದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಖಾಸಗಿಯಾಗಿ ಅದ್ದೂರಿಯಾಗಿ ಆಚರಿಸುವುದಾಗಿ ಆಯಾ ಸಮಾಜದ ಮುಖಂಡರು ಸಭೆಗೆ ತಿಳಿಸಿದರು.

ಸರ್ವಜ್ಞ ಜಯಂತಿ  ತಾಲ್ಲೂಕು ಆಡಳಿತದ ಸರಳ ಆಚರಣೆಯಲ್ಲಿ ಉಳಿಯುವ ಹಣವನ್ನು ಖಾಸಗಿ ಆಚರಣೆಗೆ ನೀಡುವುದಾಗಿ ತಹಶೀಲ್ದಾರ್‌ ಸಭೆಗೆ ತಿಳಿಸಿದರು. ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಕಾರ್ಯಕ್ರಮದಲ್ಲಿ ಸರ್ವಜ್ಞನ ವಚನಗಳ ಕಿರುಪುಸ್ತಕಗಳನ್ನು ವಿತರಿಸಲು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುವರ್ಣಮ್ಮ ಕುಂಬಾರ ಹೇಳಿದ್ದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
 
ಕಾರ್ಯನಿರ್ವಹಣಾಧಿಕಾರಿ ಡಾ.ಮೋಹನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೋರಟಗಿ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸವ ಡಾಣಿ, ಪುರಸಭೆ ವ್ಯವಸ್ಥಾಪಕ ಖತೀಬ್‌ಸಾಬ್‌, ಶಿರಸ್ತೇದಾರ ರಜನಿಕಾಂತ್, ವಿವಿಧ ಸಮಾಜಗಳ ಪ್ರಮುಖರಾದ ರಾಮಣ್ಣ ಕುಂಬಾರ, ರಮೇಶ ಕಾಪ್ಸೆ, ಸಂಗಪ್ಪ ಕುಂಬಾರ, ರವೀಂದ್ರ ಬಾಕಳೆ, ಚನ್ನಪ್ಪ ಕುಂಬಾರ, ಪರಶುರಾಮ ನಿರಂಜನ, ಈರಪ್ಪ ಕುಂಬಾರ, ಎ.ವೈ.ಲೋಕರೆ, ಅಮೃತರಾಜ ಜ್ಞಾನಮೋಠೆ, ಶರಣಪ್ಪ ಕುಂಬಾರ, ಅಬ್ದುಲ್‌ ರೆಹಮಾನ್‌ಸಾಬ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT