ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಲ್ ಸಾಮಾನ್ಯರ ಸಾಹಿತ್ಯ: ಲೀಲಾವತಿ ಕಾಕತ್ಕರ್

Last Updated 15 ಫೆಬ್ರುವರಿ 2017, 9:28 IST
ಅಕ್ಷರ ಗಾತ್ರ
ಕನಕಗಿರಿ:  ದೇಶದ ಅನೇಕ ಭಾಷೆಯಲ್ಲಿ ಗಜಲ್ ರಚನೆಯಾಗಿ ಗಾಯನದ ಮೂಲಕ ಜನರನ್ನು ಸೆಳೆಯುತ್ತಿದೆ ಆದರೆ ಅದು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗಜಲ್ ಬರಹ ಓದುವುದರ ಮೂಲಕ ಜನರ ಮನ್ನಣೆ ಗಳಿಸಿಕೊಂಡಿರುವುದು ವಿಶೇಷ ಸಂಗತಿ ಎಂದು ಚಿಂತಕಿ ಹಾಗೂ ಉಪನ್ಯಾಸಕಿ ಲೀಲಾವತಿ ಕಾಕತ್ಕರ್ ಹೇಳಿದರು.
 
 ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಲೀಲಾಗಿರಿ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಜಲ್ ಕವಿ ಅಲ್ಲಾಗಿರಿರಾಜ್‍ರವರ 13ನೇ ಕೃತಿ ಸುರೂರ್ ಗಜಲ್‍ನ್ನು ಬಿಡುಗಡೆಗೊಳಿಸಿ ಮಾತನಾಡಿದರು.
 
ಸಾಹಿತ್ಯ ಪ್ರಕಾರದಲ್ಲಿ ಗಜಲ್ ಕಾವ್ಯ ಪರಂಪರೆ ವಿಶಿಷ್ಠವಾದದ್ದು, ಇದರ ಮೂಲ ಪರ್ಷಿಯನ್, ಅರಬ್ಬಿ, ಉರ್ದು ಆದರೂ ಕೂಡಾ ಕನ್ನಡದ ಸಾಹಿತ್ಯದಲ್ಲಿ ಇತ್ತೀಚೆಗೆ ಗಜಲ್ ಪ್ರಕಾರವು ವಿಶೇಷವಾಗಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಅದರಲ್ಲಿಯೂ ಅಲ್ಲಾಗಿರಿರಾಜ್ ಅವರ ಗಜಲ್ ಪ್ರಕಾರವು ರಾಜ್ಯಾದಾದ್ಯಂತ ಗಮನ ಸೆಳೆದಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
 
ಲೀಲಾಗಿರಿ ಪ್ರಕಾಶನದ ಮುಖ್ಯಸ್ಥ ಪ್ರಜ್ವಲ್ ಪಾಟಕ್ ಅವರು ಮಾತನಾಡಿ ಉತ್ತರ ಕರ್ನಾಟಕ ಬರಹಗಾರರಿಗೆ ಉತ್ತಮ ಪ್ರಕಾಶನದ ಕೊರತೆ ಎದ್ದು ಕಾಣುತ್ತಿದೆ ಈ ಭಾಗದ ನೈಜ ಬರಹಗಾರರ ವಿಚಾರ ಸಾಹಿತ್ಯವನ್ನು ಜನರ ಮನಸ್ಸು ಮುಟ್ಟುವಲ್ಲಿ ವಿಫಲವಾಗಿದೆ. ಅದಕ್ಕಾಗಿ ನಮ್ಮ ಪ್ರಕಾಶನದ ಮೂಲಕ ಗಜಲ್ ಸಾಹಿತಿ ಅಲ್ಲಾಗಿರಿರಾ ಅವರ ಸುರೂರ್ ಗಜಲ್ ಪ್ರಕಟಿಸುವ ಮೂಲಕ ನಮ್ಮ ಪ್ರಕಾಶನದ ಅಳಿಲು ಸೇವೆ ಮಾಡುತ್ತಿರುವುದು   ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. 
 
ಪ್ರಾಂಶುಪಾಲ ಬಸವರಾಜ ಬಡಿಗೇರ, ಉಪನ್ಯಾಸಕ ಡಾ.ಡಿ.ಕೆ ಮಾಳೆ, ಗಜಲ್ ಕವಿ ಅಲ್ಲಾಗಿರಿರಾಜ್ ಮಾತನಾಡಿದರು. ಗಂಗಾವತಿಯ ಬಸವಕೀರ್ತಿ  ಗಜಲ್ ಗಾಯನ ನಡೆಸಿಕೊಟ್ಟರು.  
 
ಗಜಲ್ ಸಾಹಿತ್ಯದ ಕುರಿತು ಅಧ್ಯಯನ ಮಾಡುತ್ತಿರುವ ಉಪನ್ಯಾಸಕಿ ಲೀಲಾವತಿ ಕಾಕತ್ಕರ್ ಹಾಗೂ ಪ್ರಕಾಶನದ ಮುಖ್ಯಸ್ಥ ಪ್ರಜ್ವಲ್ ಪಾಟಕ್, ಗಜಲ್ ಗಾಯಕಿ ಬಸವಕೀರ್ತಿಯವರಿಗೆ ಸಮೀರ್ ಪ್ರಕಾಶನದ ವತಿಯಿಂದ ಸನ್ಮಾನಿಸಲಾಯಿತು. ಉಪನ್ಯಾಸಕರಾದ ಶಿವಪ್ಪ ಹಲಕಿ ಸ್ವಾಗತಿಸಿದರೆ, ಆರೀಫ್ ಅಹ್ಮದ್ ವಂದಿಸಿದರು. ಇಮಾಮಸಾಹೇಬ ಹಡಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT