ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ವಂಚಿತ ನಂದಿಹಳ್ಳಿ ಬಾಲಕಿಯರು

ಶಹಾಪುರ ತಾಲ್ಲೂಕಿನ ನಂದಿಹಳ್ಳಿ(ಜೆ) ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ
Last Updated 15 ಫೆಬ್ರುವರಿ 2017, 10:00 IST
ಅಕ್ಷರ ಗಾತ್ರ

ಶಹಾಪುರ: ನಮ್ಮೂರಿಗೆ ಸರಿಯಾದ ಬಸ್  ವ್ಯವಸ್ಥೆ ಬಸ್‌ ಇಲ್ಲ. ಹೆಚ್ಚಿನ ಅಭ್ಯಾಸ ಮಾಡಿಸಲು ಶಾಲೆ ಇಲ್ಲದ ಕಾರ ಣ ಹೆಣ್ಣುಮಕ್ಕಳನ್ನು  5ನೇ ತರಗ ತಿಯವರೆಗೆ ಓದಿಸಿ ಶಾಲೆ ಬಿಡಿಸುತ್ತೇವೆ ಎಂದು ನಂದಿಹಳ್ಳಿ (ಜೆ) ಗ್ರಾಮದ ಪಾಲಕರು ಹೇಳುತ್ತಾರೆ.

ಶಹಾಪುರ ತಾಲ್ಲೂಕಿನ ಬಿರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ(ಜೆ) ಗ್ರಾಮಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮದಲ್ಲಿ ಒಂದರಿಂದ 5ನೇ ತರಗತಿವರೆಗೆ ಶಾಲೆ ಇದೆ. 6ನೇ ತರಗತಿ ಅಭ್ಯಾಸ ಮಾಡ ಬೇಕು ಎಂದರೆ ಗ್ರಾಮದಿಂದ 7ಕಿ.ಮೀ ದೂರವಿರುವ ಹತ್ತಿಗೂಡೂರ ಗ್ರಾಮಕ್ಕೆ ಹೋಗಬೇಕು.

ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ ಸಬೇಕು ಎಂಬ ಆಸೆ  ನಮಗೂ ಇದೆ. ಆದರೆ, ಹೆಣ್ಣುಮಕ್ಕಳನ್ನು ಅಷ್ಟು ದೂರು ಕಳಿಸುವುದು ಹೇಗೆ ಎಂಬು ವುದು ಪಾಲಕರ ಪ್ರಶ್ನೆಯಾಗಿದೆ.

ಸರ್ಕಾರದ ನಿಯಮದ ಪ್ರಕಾರ 3.ಕಿ.ಮೀ ವ್ಯಾಪ್ತಿಯ ಒಳಗೆ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿ 8ನೇ ತರಗತಿ ಆರಂಭಿಸಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಎಂದು ಹೇಳುವ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಿ ಹೆಣ್ಣು ಮಕ್ಕಳಿಗೆ ಅಕ್ಷರ ಬೆಳಕು ನೀಡಬೇಕು ಎಂಬುವುದು ಮಕ್ಕಳ ಪಾಲಕರ ಒತ್ತಾಯವಾಗಿದೆ.

ಸದ್ಯ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ 118 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸ್ವತಃ ಶಿಕ್ಷಕರು ಪಾಲಕರ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.  ಈ ಕಾರಣಕ್ಕೆ  ಬಿರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ(ಜೆ) ಗ್ರಾಮದ ಶಾಲೆ ಗಮನ ಸೆಳೆದಿದೆ.

ಹಲವು ಸಮಸ್ಯೆಗಳ ನಡುವೆಯೂ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡು ತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸಿ ಕಲಿಕೆಗೆ ಪ್ರೋತ್ಸಾಹಿ ಸುತ್ತಿದ್ದಾರೆ.ವೈಯಕ್ತಿಕವಾಗಿ ಗಮನಹರಿಸಿ ಶೈಕ್ಷಣಿಕ ಪ್ರವಾಸ, ಪ್ರತಿಭಾ ಕಾರಂಜಿ, ಕಲಿಕೋತ್ಸವ, ಕ್ರೀಡೆಯನ್ನು ಸ್ಥಳೀಯ ಮಟ್ಟದಲ್ಲಿ ಹಮ್ಮಿಕೊಂಡು ಮಕ್ಕಳು ಶಾಲೆಗೆ ಆಸಕ್ತಿಯಿಂದ ಬರುವಂತೆ ಮಾಡ ಲು  ಶ್ರಮವಹಿಸಲಾಗಿದೆ.

ಗ್ರಾಮ ದಲ್ಲಿ ಪಾಲಕರ ಸಹಕಾರವಿದೆ ಎನ್ನು ತ್ತಾರೆ ಶಾಲೆಯ ಮುಖ್ಯಗುರು ಜ್ಯೋತಿ ನಾಯ್ಕ. ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳು ಇವೆ.  ಆಟದ ಮೈದಾನವಿಲ್ಲ. ಶಾಲೆಯಲ್ಲಿ ಅಳವಡಿಸಿರುವ ವಿದ್ಯುತ್ ಮೋಟಾರ್‌ ಹಾಳಾಗಿದೆ. ದುರಸ್ತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾರು ಸ್ಪಂದಿಸುತ್ತಿಲ್ಲ.  ಇದರಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಅಡುಗೆ  ತಯಾರಿಸಲು ಹಳ್ಳದಲ್ಲಿ ಒರತೆ ತೆಗೆದು ನೀರು ತೆಗೆದುಕೊಂಡು ಬರಬೇಕಾದ ದುಸ್ಥಿತಿ ಬಂದಿದೆ ಎನ್ನುತ್ತಾರೆ ಗ್ರಾಮದ ಪಾಲಕ ಬಂಡೇಗುರು ಸ್ವಾಮಿ.
- ಟಿ.ನಾಗೇಂದ್ರ.

ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.  ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರದಿಂದ ಸೂಚನೆ ಬಂದಿಲ್ಲ
- ವೆಂಕಯ್ಯ ಇನಾಮದಾರ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT