ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರಿ ಜತೆಗೆ ಹೆಬ್ಬುಲಿ ನೃತ್ಯ!

ಕಿಚ್ಚ ಸುದೀಪ್‌ ಮತ್ತು ಅಮಲಾಪೌಲ್‌ ಜೋಡಿ
Last Updated 15 ಫೆಬ್ರುವರಿ 2017, 10:46 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ‘ಸುಂದರಿ...ಸುಂದರಿ ಸ್ವಲ್ಪ ಮಾತು ಕೇಳೇ ನೀ...’ ಎಂದು ಹಾಡುವ ನಾಯಕ ಮುತ್ತಿಡು, ಅಪ್ಪಿಕೊ ಎಂದು ಪ್ರೇಯಸಿಯೇ ಕೇಳಿದರೂ ಆಗಲ್ಲ...ಆಗಲ್ಲವೆಂದೇ ನುಣಿಚಿಕೊಳ್ಳುತ್ತಾನೆ.

ವಿಜಯ್‌ಪ್ರಕಾಶ್‌ ಮತ್ತು ಅನುರಾಧಾ ಭಟ್‌ ಹಾಡಿರುವ ‘ಸುಂದರಿ’ ಹಾಡು ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ.

ಹೆಬ್ಬುಲಿ ಚಿತ್ರದ ಹಾಡಿಗೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದು, ಹಾಡಿನ ತುಣುಕು ಬಿಡುಗಡೆಯಾಗಿ ಒಂದೇ ದಿನದಲ್ಲಿ 1.13 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಕಮಾಂಡೋ ಪಾತ್ರದಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದು, ಅಮಲಾಪೌಲ್‌ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸುದೀಪ್‌ ಭಿನ್ನ ಹೇರ್‌ಸೈಲ್‌ನಿಂದ ಅಭಿಮಾನಿಗಳಲ್ಲಿ ‘ಹೆಬ್ಬುಲಿ’ ನಿರೀಕ್ಷೆ ಹೆಚ್ಚಿಸಿದೆ. ಕೃಷ್ಣ ನಿರ್ದೇಶಿಸಿರು ಚಿತ್ರದಲ್ಲಿ ವಿ.ರವಿಚಂದ್ರನ್‌, ರವಿಶಂಕರ್‌, ರವಿಕಿಷನ್ ಸೇರಿದಂತೆ ಮುಂತಾದವರ ಅಭಿನಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT