ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಹತ್ಯೆ ಮೂಲಕ ಸ್ತ್ರೀ ಸ್ವಾತಂತ್ರ್ಯ ಹರಣ

ವಚನಕಾರ್ತಿಯರು, ಮಹಿಳಾ ಸಮಸ್ಯೆ ಕುರಿತು ಉಪನ್ಯಾಸದಲ್ಲಿ ಆರೋಪ
Last Updated 15 ಫೆಬ್ರುವರಿ 2017, 13:06 IST
ಅಕ್ಷರ ಗಾತ್ರ

ಗದಗ: 12ನೇ ಶತಮಾನದಲ್ಲಿ ಶರಣರು ಸಮಾಜದಲ್ಲಿ ಬೇರೂರಿದ್ದ ಅಸಮಾನತೆ ಗಳನ್ನು ಪ್ರಶ್ನಿಸಿ, ಪುರುಷರು ಹಾಗೂ ಮಹಿಳೆಯರು ಸಮಾನರು ಎಂದು ಸಾರಿದ್ದರು. ಆದರೆ, ಮಹಿಳೆಯರು ಪ್ರಸ್ತುತ ಸಮಾಜದಲ್ಲಿ ತಾರತಮ್ಯ, ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಕರ್ನಾಟಕ ಲೇಖ ಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಅಸಮಾಧಾನ ವ್ಯಕ್ತಪಡಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ನಡೆದ ಶಿವಾ ನುಭವದಲ್ಲಿ ‘ವಚನಕಾರ್ತಿಯರು ಹಾಗೂ ಮಹಿಳಾ ಸಮಸ್ಯೆಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಸ್ತ್ರೀ, ಪುರುಷರಲ್ಲಿ ಸಮಾನತೆ ಇದ್ದಾಗ ಮಾತ್ರ ದಾಂಪತ್ಯದಲ್ಲಿ ಸಾಮರಸ್ಯ ಇರು ತ್ತದೆ. ಆದರೆ, ಸದ್ಯ ಮರ್ಯಾದಾ ಹತ್ಯೆ, ಭ್ರೂಣ ಹತ್ಯೆ ರೂಪದಲ್ಲಿ ಮಹಿಳೆಯ ಸ್ವಾತಂತ್ರ್ಯಹರಣ ನಡೆಯುತ್ತಿದೆ ಎಂದರು.

ಬಾಲ್ಯದಿಂದಲೇ ತಾಯಿ ಹೆಣ್ಣು ಮಗುವಿಗೆ ಸ್ವತಂತ್ರವಾಗಿ ಬದುಕುವ ಕಲೆ ಯನ್ನು ಕಲಿಸಿಕೊಡಬೇಕು. ವಚನಕಾರ್ತಿ ಯರು ಸಮಾನತೆ ಕುರಿತು ಸಾರಿದ ವಚನಸಾರವನ್ನು ಅರ್ಥೈಸಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು ಎಂದು ತಿಳಿಸಿದ ಅವರು, ಶಿಕ್ಷಣದಿಂದಲೇ ಮಹಿಳೆ ಯರು ಸಶಕ್ತರಾಗಲು ಸಾಧ್ಯವಾಗುತ್ತದೆ ಎಂದರು.

ಮಹಿಳೆ ಭೂಮಿಗಿಂತ ದೊಡ್ಡವಳು. ರೈತರು, ಮಹಿಳೆಯರು ಸಮಾಜದಲ್ಲಿ ಸದಾ ಶೋಷಣೆಗೆ ಒಳಗಾಗುತ್ತಿದ್ದಾರೆ. ಭಾರತದಂತಹ ದೇಶದಲ್ಲೇ ಹಿಂದೆ ಮಹಿಳೆಯನ್ನು ನಿಕೃಷ್ಟವಾಗಿ ಕಂಡು ಪತಿ ಯೊಂದಿಗೆ ಚಿತೆ ಏರುವ ಮತ್ತು ಕುರೂ ಪಗೊಳಿಸುವ ಅನೇಕ ಮೌಢ್ಯ ಆಚರಣೆ ಗಳು ಇದ್ದವು. ಮಹಿಳಾ ಅಸಮಾನತೆಯ ವಿರುದ್ಧ ಹೋರಾಡಿ, ಮಹಿಳೆಯರಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿದ್ದ ಸಾವಿತ್ರಿಬಾಯಿ ಫುಲೆ ಅವರು, ದೇಶದ ಪ್ರಥಮ ಶಿಕ್ಷಕಿಯಾಗಿದ್ದಾರೆ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಶರಣರ ಕಾಲದಲ್ಲಿ ಎಲ್ಲ ಸ್ತರದ ಕಾಯಕದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂದು ಮಹಿಳೆ ಯರು ವಚನಗಳನ್ನು ರಚಿಸಿ, ಸಮಾಜಕ್ಕೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ಆ ವಚನಗಳ ಬೆಳಕಿನಲ್ಲಿ ಬದುಕಿದರೆ, ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದರು. ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅವರನ್ನು ತೋಂಟದ ಶ್ರೀ ಸನ್ಮಾನಿಸಿದರು.

ಉದಯ ವಿಶ್ವಕರ್ಮ ಧರ್ಮಗ್ರಂಥ ಪಠಣ ಮಾಡಿದರು, ವೀರೇಶ ಹಳ್ಳಿಕೇರಿ ವಚನಗಳನ್ನು ಓದಿದರು. ವಿಜಯಲಕ್ಷ್ಮಿ ಮಾಳವಾಡ ಅವರು ವಚನ ಸಂಗೀತ ಕಾರ್ಯಕ್ರಮ ನೀಡಿದರು. ಕೃಷ್ಣಾ ಪರಾಪೂರ, ವಿ.ಎ.ದೇಸಾಯಿ ಗೌಡ್ರ, ಡಾ.ಎಚ್.ಚಂದ್ರಶೇಖರ, ಎಸ್.ಎಂ. ಮಾರನಬಸರಿ, ಶಿವಾನುಭವ ಸಮಿತಿಯ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗಂಗಾಧರ ಹಿರೇಮಠ, ಪ್ರಕಾಶ ಉಗಲಾಟದ, ಸಿದ್ಧಲಿಂಗಪ್ಪ ಲಕ್ಕುಂಡಿ, ಬಸವರಾಜ ಕಾಡಪ್ಪನವರ, ಉಮೇಶ ನಾಲ್ವಾಡ, ಶಿವನಗೌಡ ಗೌಡರ ಇದ್ದರು. ರತ್ನಕ್ಕ ಪಾಟೀಲ ನಿರೂಪಿಸಿದರು, ಶಕುಂತಲಾ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT