ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹವೇ ಪರಿಹಾರ

ಗಜೇಂದ್ರಗಡದಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ; ನೀರಿಗಾಗಿ ನಾಗರಿಕರ ಪರದಾಟ
Last Updated 15 ಫೆಬ್ರುವರಿ 2017, 13:10 IST
ಅಕ್ಷರ ಗಾತ್ರ

ಗಜೇಂದ್ರಗಡ: ಬೇಸಿಗೆ ಇನ್ನೂ ಆರಂಭ ವಾಗಿಲ್ಲ. ಆದರೆ ಈಗ ಪಟ್ಟಣದಲ್ಲಿ 15 ದಿನಕೊಮ್ಮೆ ಟ್ಯಾಂಕರ್‌ ನೀರು ದೊರೆ ಯುತ್ತಿದೆ. ಈ ಬಾರಿಯ ಬೇಸಿಗೆ ಎದುರಿ ಸುವುದು ಹೇಗೆ? ಎಂದು ಜನ ಚಿಂತಾ ಕ್ರಾಂತರಾಗಿದ್ದಾರೆ. ನೀರಿನ ಸಮಸ್ಯೆಗೆ ಮಳೆ ನೀರು ಸಂಗ್ರಹವೊಂದೇ ಉತ್ತಮ ಪರಿಹಾರ ಎನ್ನಲಾಗುತ್ತಿದೆ.

ಇಲ್ಲಿಯ ವಾಣಿ ಪೇಟೆಯಲ್ಲಿ ಗವಿ ಮಠದ ಸಮೀಪದಲ್ಲಿರುವ ಮಲ್ಲಿಕಾ ರ್ಜುನ ಗಾಳಿ ಮತ್ತು ಈರಣ್ಣ ಗಾಳಿ ಸಹೋದರರು ನೀರಿನ ಸಮಸ್ಯೆ ನೀಗಿ ಸಲು ಸುಮಾರು 10 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಒಂದಿಬ್ಬರು ಈಗಾಗಲೇ ಈ ವ್ಯವಸ್ಥೆ ಅಳವಡಿಸಿಕೊಂಡು,  ಅದರಲ್ಲಿ ಯಶ ಕಂಡಿದ್ದಾರೆ.

ಗಾಳಿ ಸಹೋದರರು ಹೊಸ ಮನೆ ಕಟ್ಟುವುದರೊಂದಿಗೆ ಸುಮಾರು 10 ಸಾವಿರ ಲೀ. ನೀರನ್ನು ಸಂಗ್ರಹಿಸುವ ನೆಲ ಮಟ್ಟದ ಟ್ಯಾಂಕ್ ನಿರ್ಮಿಸಿದ್ದಾರೆ. ಒಂದು ತಾಸು ಜೋರಾಗಿ ಮಳೆ ಆದರೆ ಸಾಕು, ಅರ್ಧ ಟ್ಯಾಂಕ್‌ ಭರ್ತಿಯಾಗುತ್ತದೆ. ಮನೆ ಮೇಲಿನ ತಾರಸಿಯಿಂದ ಹರಿದು ಬರುವ ನೀರು ಸೋಸಿ ಬರುವಂತೆ ಜಾಳಿಗೆ ಅಳವಡಿಸಿದ್ದು, ಅದು ಸಣ್ಣ ಟ್ಯಾಂಕಿನಲ್ಲಿ ಸಂಗ್ರಹವಾಗುತ್ತದೆ ಅಲ್ಲಿಂದ ಕೆಳಗಿರುವ ದೊಡ್ಡ ಟ್ಯಾಂಕಿಗೆ ನೀರು ಹೋಗುವಲ್ಲಿ ಕೂಡಾ ಜಾಳಿಗೆ ಹಾಕಿದ್ದಾರೆ.

ನೀರಿನ ಪ್ರಮಾಣ ಹೆಚ್ಚಾದರೆ ಹೊರಗೆ ಹರಿದು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಮಳೆ ನೀರು ಸ್ವಚ್ಛ ವಾಗಿರಲಿ ಎಂಬ ಕಾರಣದಿಂದ ಮಳೆ ಬರುವ ಮೊದಲು ತಾರಸಿಯನ್ನು ಸ್ವಚ್ಛಗೊಳಿಸುತ್ತಾರೆ. ಹೀಗೆ ಸಂಗ್ರಹವಾದ ನೀರನ್ನು ಮನೆ ಬಳಕೆಗೆ ಉಪಯೋಗಿ ಸುತ್ತಾರೆ. ಇವರ ಮನೆ ಪಕ್ಕದಲ್ಲಿರುವ ಸುಹಾಸ್ ಪಟ್ಟೇದ ಅವರ ಮನೆಯಲ್ಲಿ ನೀರು ಪೋಲಾಗದಂತೆ, ಅದನ್ನು ಹರಿಸಿ ತಮ್ಮ ಕೊಳವೆ ಬಾವಿಗೆ ಜಲಪೂರಣ ಮಾಡಿಕೊಂಡಿದ್ದಾರೆ.

‘ನಾವು ನಮ್ಮ ಮನೆಗೆ ಮಾಡಿ ಕೊಂಡ ಮಳೆ ನೀರು ಸಂಗ್ರಹ ವ್ಯವಸ್ಥೆ ಯಿಂದ ನೀರಿನ ಸಮಸ್ಯೆ ಬಗೆಹರಿಸಿ ಕೊಂಡಿದ್ದೇವೆ. ಕುಡಿಯಲು ಹೊರತು ಪಡಿಸಿ ಈ ನೀರನ್ನು ಮನೆ ಬಳಕೆಗೆ ಉಪಯೋಗಿಸುತ್ತೇವೆ. ಇದಲ್ಲದೇ ಮನೆ ಆವರಣದಲ್ಲಿ ಇಂಗುಗುಂಡಿ ನಿರ್ಮಿ ಸಿದರೆ, ಮನೆ ತಂಪಾಗಿರುತ್ತದೆ’ ಎಂದು ಮಲ್ಲಿಕಾರ್ಜುನ ಗಾಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ನೀರು ಸಂಗ್ರಹದ ಬಗ್ಗೆ ಪುರ ಸಭೆಯವರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು. ಇದರಿಂದ ಅಂತರ್ಜಲ ಹೆಚ್ಚಳವಾಗಿ ಇಲ್ಲಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಲಿದೆ. ಪಟ್ಟ ಣದಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮಾತ್ರ ಮನೆ ಕಟ್ಟಲು ಪುರಸಭೆ ಅನುಮತಿ ನೀಡಬೇಕು. ಅದನ್ನು ಅಳವಡಿಸಿಕೊಳ್ಳ ದವರಿಗೆ ದಂಡ ವಿಧಿಸಿಬೇಕು. ಜನರಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಪುರ ಸಭೆಯವರಿಗೆ ಹೇಳಿದರೆ, ಸರಿಯಾಗಿ ಸ್ಪಂದಿಸದೇ ಉಡಾಫೆ ಉತ್ತರ ನೀಡು ತ್ತಾರೆ’ ಎಂದು ವಿದ್ಯುತ್‌ ಕಾಮಗಾರಿಗಳ ಗುತ್ತಿಗೆದಾರ ಶಿವು ಅರಳಿ ಹೇಳಿದರು.

‘ಪಟ್ಟಣದಲ್ಲಿರುವ ಕೊಳವೆ ಬಾವಿ ಗಳು ಮಳೆ ನೀರು ಸಂಗ್ರಹದಿಂದ ಜಲ ಮರುಪೂರಣವಾಗಿ, ಅಂತರ್ಜಲ ಮಟ್ಟ ಹೆಚ್ಚಲಿದೆ. ಈ ಬಗ್ಗೆ ಪುರಸಭೆಯವರು ಅಲ್ಲಲ್ಲಿ ನಾಮಫಲಕ ಅಳವಡಿಸಿ, ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಪಟ್ಟಣದಲ್ಲಿ ನೀರಿಗಾಗಿ ತತ್ವಾರ ಉಂ ಟಾ ಗುವ ಮುನ್ನ ಇಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎನ್ನುತ್ತಾರೆ ಊರಿನ ಗಣ್ಯರಾದ ಕೆ.ಎಸ್. ಸಾಲಿಮಠ.
ಡಾ.ಮಲ್ಲಿಕಾರ್ಜುನ ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT