ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕಷ್ಟಕ್ಕೆ ಕಾಯಕ ತತ್ವ ಪರಿಹಾರ ಮಾರ್ಗ’

ಶಾಖಾ ಮೂರುಸಾವಿರಮಠದಲ್ಲಿ ‘ಶರಣರ ಬದುಕು ಬರಹ’ ಪ್ರವಚನಕ್ಕೆ ಚಾಲನೆ
Last Updated 15 ಫೆಬ್ರುವರಿ 2017, 13:31 IST
ಅಕ್ಷರ ಗಾತ್ರ

ಬೈಲಹೊಂಗಲ: ಮನುಷ್ಯನಿಗೆ ಆಸ್ತಿ, ಅಂತಸ್ತು, ಶ್ರೀಮಂತಿಕೆ ಶಾಶ್ವತವಲ್ಲ, ಅದು ಬಂದಾಗ ದಾನ, ಧರ್ಮದ ಮೂಲಕ ಸಮಾಜ ಸೇವೆ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮುರಗೋಡ ಮಹಾಂತ ದುರ ದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ನೀಲಕಂಠ ಮಹಾಶಿವಯೋಗೀಶ್ವರ ಯಾತ್ರಾ ಮಹೋತ್ಸವ, ಗಂಗಾಧರ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಆರಂಭಗೊಂಡ ‘ಶರಣರ ಬದುಕು ಬರಹ’ ಪ್ರವಚನ ಪ್ರಾರಂಭೋತ್ಸವದ ಸಾನಿಧ್ಯವಹಿಸಿ ಅವರು ಮಾತನಾಡಿ, ‘ಕಾಯಕ ತತ್ವ, ದಾಸೋಹ, ಭಕ್ತಿ ಮಾರ್ಗ, ವೈರಾಗ್ಯ ಬದುಕಿನ ಮೂಲ ಚಿಂತನೆಯಾಗಿವೆ. ಲಿಂಗ, ಆರ್ಥಿಕ ಸಮಾನತೆ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿವೆ. ಗಂಗಾಧರ ಸ್ವಾಮೀಜಿಯವರು ಈ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಚಿರಸ್ಥಾಯಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮಠದ ಪೀಠಾಧಿಪತಿಗಳು ಮುನ್ನಡೆಯಬೇಕು’ ಎಂದರು.

ಹೊಸೂರ ಗುರು ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ‘ಪ್ರತಿಯೊಬ್ಬರು ಸಾಧು, ಶರಣರ, ಸಂತರ, ಮಹಾಂತರ ಅಮೖತವಾಣಿಗಳನ್ನು ಕೇಳುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಬೇಕು. ಕೇಳುವ ಜೊತೆಗೆ ಜೀವನದಲ್ಲಿ ಹಿರಿಯರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.

ನವದೆಹಲಿ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಪ್ರವಚನ ಆರಂಭಿಸಿ ಮಾತನಾಡಿ, ‘ಪ್ರವಚನ ಆಲಿಸುವುದರಿಂದ ಮನುಷ್ಯನಿಗೆ ಜ್ಞಾನದ ಸಂಪತ್ತು ಉಜ್ವಲವಾಗುತ್ತದೆ. ಕಲ್ಯಾಣದ ಶರಣರು ಹಾಕಿಕೊಟ್ಟ ತಳಹದಿಯ ಮೇಲೆ ಸಾಗಿ ಸನ್ಮಾರ್ಗದತ್ತ ಸಾಗಬೇಕು’ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಚಂದ್ರಶೇಖರ ಸಾಧುನವರ, ಹಿರಿಯರಾದ ಬಸವಪ್ರಭು ಬೆಳಗಾವಿ, ಚಿತ್ರನಟ ಶಿವರಂಜನ ಬೋಳಣ್ಣವರ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಪ್ರಕಾಶ ಮೂಗಬಸವ, ಶಂಕ್ರರೆಪ್ಪ ತುರಮರಿ, ಎಸ್.ಎಫ್‌. ಹರಕುಣಿ, ಬಸವರಾಜ ಮೂಗಿ, ಬಸವರಾಜ ತಟವಟಿ, ತಿಪ್ಪಣ್ಣ ಬಿಳ್ಳೂರ, ಸಹಜಾನಂದ ಬೋಗಾರ, ಮಹಾಂತೇಶ ಅಕ್ಕಿ, ಶಿವಬಸಪ್ಪ ತುರಮರಿ, ಸಿದ್ದರಾಮ ಶಾಸ್ತ್ರೀಗಳು ಇದ್ದರು. ಶೋಭಾ ಛಬ್ಬಿ ಪ್ರಾರ್ಥಿಸಿದರು. ಪ್ರೇಮಾ ಅಂಗಡಿ, ಶಿವಪ್ರಸಾದ ಹುಲೆಪ್ಪನವರಮಠ ನಿರೂಪಿಸಿದರು. ಎಸ್.ಆರ್.ಕಲಹಾಳ ಸ್ವಾಗತಿಸಿದರು. ಎಸ್.ಎಂ.ಸಿದ್ದನಾಯ್ಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT