ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್‌ ಪ್ರತಿಭೆ ಕೊಂಡಾಡಿದ ಇಶಾ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಟಿ, ರೂಪದರ್ಶಿಯೂ ಆಗಿರುವ ಇಶಾ ಗುಪ್ತಾ ಅವರು ಮೊದಲ ಬಾರಿ ಅಜಯ್ ದೇವಗನ್‌ ಅವರೊಂದಿಗೆ ‘ಬಾದ್‌ಶಾಹೊ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ಮಿಲನ್‌ ಲುಥಾರಿಯಾ ನಿರ್ದೇಶಿಸುತ್ತಿದ್ದು, ಇಶಾ ಅಜಯ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಅಜಯ್ ಒಬ್ಬ ಉತ್ತಮ ನಟ, ಅವರ ನಟನಾ ಜ್ಞಾನ ನನ್ನ ಮೇಲೆ ಪ್ರಭಾವ ಬೀರಿದೆ’ ಎಂದು ಇಶಾ ಕೊಂಡಾಡಿದ್ದಾರೆ.

‘ಅಜಯ್‌ ಅವರಿಗೆ ಕ್ಯಾಮೆರಾ, ಬೆಳಕು ಸೇರಿದಂತೆ ಸಿನಿಮಾ ವ್ಯಾಕರಣ ಚೆನ್ನಾಗಿ ತಿಳಿದಿದೆ. ಅವರನ್ನು ಗಮನಿಸುತ್ತಲೇ ನಾನು ಬಹಳಷ್ಟು ಕಲಿತೆ. ಕೆಲವು ಬಾರಿ ಅವರೂ ನಟನೆಯ ಬಗ್ಗೆ ಸಲಹೆ ನೀಡಿದ್ದಾರೆ. ಇತರರಿಗೆ ಹಸ್ತಕ್ಷೇಪ ಮಾಡುವ ವ್ಯಕ್ತಿತ್ವ ಅವರದ್ದಲ್ಲ’ ಎಂದು  ಹೇಳುತ್ತಾರೆ ಇಶಾ.

‘ಬಹಳಷ್ಟು ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅವರೆಲ್ಲರ ಜೊತೆ ನಟಿಸಲು ನಾನು ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ. ನಿರ್ದೇಶಕ ಲುಥಾರಿಯಾ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ. ಅಜಯ್‌, ಲುಥಾರಿಯಾ ಮತ್ತು ಹಶ್ಮಿ ಸಿನಿಮಾ ಸೆಟ್‌ನಲ್ಲಿ ಸಂತೋಷದಿಂದ ಇರುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ ಇಶಾ. ಬಾದ್‌ಶಾಹೊ ಚಿತ್ರದಲ್ಲಿ ಇಮ್ರಾನ್‌ ಹಶ್ಮಿ ಇಲಿಯಾನಾ ಡಿಕ್ರೂಜ್‌ ಸಹ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT