ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮತಗಿ ಉತ್ಸವ ಇಂದಿನಿಂದ: ಸಿದ್ಧತೆ

ಕೃಷಿ, ನೇಕಾರಿಕೆ ಸಂಸ್ಕೃತಿಗಳ ಅನಾವರಣ, ಸಂಗೀತ, ನೃತ್ಯ, ಹಾಸ್ಯ ಕಾರ್ಯಕ್ರಮಗಳ ವೈಭವ
Last Updated 15 ಫೆಬ್ರುವರಿ 2017, 13:48 IST
ಅಕ್ಷರ ಗಾತ್ರ

ಕಮತಗಿ(ಅಮೀನಗಡ): ಕೃಷಿ, ನೇಕಾರಿಕೆ ಸಂಸ್ಕೃತಿಗಳ ಅನಾವರಣ­ಗೊಳಿಸುವ ಕಮತಗಿ ಉತ್ಸವ ಬುಧ­ವಾರ­­ದಿಂದ (ಫೆ.15) ಮೂರುದಿನಗಳ ಕಾಲ ನಡೆಯಲಿದೆ.

ಕಮತಗಿ ಪಟ್ಟಣದ ಹಳೆಯ ಹೆಸರು ಕಮತಪುರ. ಇಲ್ಲಿನ ಹೊಳೆಹುಚ್ಚೇಶ್ವರ ಮಠವು 900 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ತಪಸ್ವಿ ಮರುಳಶಂಕರ­ದೇವರು ಈ ಮಠವನ್ನು ಸ್ಥಾಪಿಸಿ ಜಾಗೃತ ಅಧ್ಯಾತ್ಮ ಧರ್ಮಕೇಂದ್ರವನ್ನಾಗಿಸಿದರು. ಅಂತಹ ಶ್ರೇಷ್ಠ ಪರಂಪರೆಯನ್ನು ಈಗಿನ ಮಠದ ಪೀಠಾಧಿಪತಿಗಳಾದ ಹುಚ್ಚೇಶ್ವರ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

‘ಪ್ರತಿ ವರ್ಷ ನಡೆಯುವ ಹುಚ್ಚಯ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸ­ವವನ್ನು ಕಮತಪುರ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಹುಚ್ಚೇಶ್ವರ ಸ್ವಾಮೀಜಿ ಹೇಳಿದರು. ಮುತ್ತೈದೆಯರ ಮನೆಯಿಂದ ಜಲವನ್ನು ತಂದು ಮಠದ ವೇದಿಕೆ ಮುಂಭಾ­ಗದಲ್ಲಿನ ಜಲಕುಂಭದಲ್ಲಿ ಸೇರಿಸಿ ಗಂಗಾಪೂಜೆ, ತುಂಗಾಪೂಜೆ, ಕಾವೇರಿಪೂಜೆ ಮಾಡುವುದು ಮಳೆ ಸಮೃದ್ಧಿಯಾಗಲಿ ಎಂಬ ಆಶಯವನ್ನು ಹೊಂದಿದೆ.

ವಿಭಿನ್ನ ವಾದ್ಯಮೇಳಗಳು, ವಿವಿಧ ಜಾನಪದ ಕಲಾ ತಂಡಗಳು, ಗಜ ಮತ್ತು ಅಶ್ವಸಹಿತವಾಗಿ ರಥಕಳಸವನ್ನು ಪಾದಗಟ್ಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾ­ಗುತ್ತದೆ.  ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಸಾಧನೆಗೈದ ಮಹಿಳೆಯರನ್ನು ಉತ್ಸವದಲ್ಲಿ ಸತ್ಕರಿಸಲಾಗುತ್ತದೆ.

ನೇಕಾರಿಕೆಯಲ್ಲಿ ಗಣನೀಯ ಸೇವೆ ಮಾಡಿದವರಿಗೆ ಮಾನಯೋಗಿ ಪ್ರಶಸ್ತಿ, ಕೃಷಿ ಕ್ಷೇತ್ರದಲ್ಲಿ  ಸೇವೆಗೈದ ಕೃಷಿಕರಿಗೆ ನೇಗಿಲಯೋಗಿ ಪ್ರಶಸ್ತಿ ಹಾಗೂ ಮಠದ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿ­ಸಿಕೊಂಡ ಮಹನೀಯರಿಗೆ ಕೊಡ­ಮಾಡುವ ಶ್ರೀಮಠ ಸೇವಾಸಕ್ತ ಪ್ರಶಸ್ತಿ­ಗಳನ್ನು ಪ್ರತಿ ವರ್ಷ ನೀಡಲಾಗುತ್ತಿದೆ.

ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಲಾಗುವ ಹುಚ್ಚೇಶ್ವರಶ್ರೀ ಪ್ರಶಸ್ತಿ­ಯನ್ನು ನಿವೃತ್ತ ಪೋಲಿಸ್ ಮಹಾ­ನಿರ್ದೇಶಕ ಶಂಕರಿ ಬಿದರಿ ಅವರಿಗೆ ನೀಡಲಾಗುತ್ತಿದೆ ಎಂದು ಕಮತಪುರ ಉತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಅಂಗಡಿ ತಿಳಿಸಿದರು. ಪ್ರಶಸ್ತಿ 21 ಸಾವಿರ ನಗದು, ಫಲಕ ಹೊಂದಿದೆ.

ಪ್ರತಿದಿನ ಸಂಜೆ ಸಂಗೀತ ಸಂಭ್ರಮ ಹಮ್ಮಿಕೊಳ್ಳಲಾಗುತ್ತಿದ್ದು ನಾಡಿನ ಖ್ಯಾತ ಕಲಾವಿದರಿಂದ ಕಲಾ ಪ್ರದರ್ಶನ ಜರುಗುವುದು. ಕುದ್ರೋಳಿ ಗಣೇಶ ಅವರಿಂದ ಜಾದೂ ಪ್ರದರ್ಶನ, ವಿಶೇಷ 3ಡಿ ಚಲನಚಿತ್ರಗಳು ಹಾಗೂ ವೈಜ್ಞಾನಿಕ ಆಧಾರಿತ 3ಡಿ ಸಾಕ್ಷ್ಯಚಿತ್ರಗಳ ಪ್ರದರ್ಶನ, ಜೀವನಸಾಬ್ ಬಿನ್ನಾಳ ತಂಡದಿಂದ ಹಾಸ್ಯ, ಸರಿಗಮ ಚಾಂಪ್ಸ್ ವಿಜೇತ ಚನ್ನಪ್ಪ ಹುದ್ದಾರ, ಐಶ್ವರ್ಯ ರಂಗ­ರಾಜನ್, ಸುಪ್ರೀತ ಮತ್ತು ಸಹನಾ ಭಾರದ್ವಾಜ ಅವರಿಂದ ರಸಮಂಜರಿ, ಸುಗಮ ಸಂಗೀತ, ನೃತ್ಯ ವೈಭವ, ನಾನಾ ಸಾಂಸ್ಕೃತಿಕ ಕಾರ್ಯಕ್ರಮ  ನಡೆಯಲಿವೆ. 
ನಾಡಿನ ಮಠಾಧೀಶರು, ಸಾಹಿತಿಗ­ಳು, ಕಲಾವಿದರು, ರಾಜಕಾರಣಿಗಳು, ಸಮಾಜಸೇವಕರು. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಾಧಕರು ಉತ್ಸವ­ದಲ್ಲಿ ಪಾಲ್ಗೊಳ್ಳಲಿರೆ ಎಂದು ಸಂಚಾಲಕ ಸಿದ್ದು ಹೊಸಮನಿ ತಿಳಿಸಿದರು.
-ಶಿ.ಗು.ಹಿರೇಮಠ

* ಕಮತಪುರ ಜನತೆಯ ಸಂಸ್ಕೃತಿ, ಪರಂಪರೆ, ಕೃಷಿ ಮತ್ತು ನೇಕಾರಿಕೆಗಳ ಅನಾವರಣವೇ ಉತ್ಸವದ ಮುಖ್ಯ ಉದ್ದೇಶವಾಗಿದೆ

ಹುಚ್ಚೇಶ್ವರ ಸ್ವಾಮೀಜಿ, ಕಮತಗಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT