ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಮೂಲಕ ತೆರಿಗೆ ಪಾವತಿ, ನಿಮಿಷದೊಳಗೆ ಪಾನ್‌ ಕಾರ್ಡ್

Last Updated 15 ಫೆಬ್ರುವರಿ 2017, 15:51 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ಮೂಲಕ ತೆರಿಗೆ ಪಾವತಿಸಲು ಹಾಗೂ ನಿಮಿಷದೊಳಗೆ ಪಾನ್‌ (ಪರ್ಮನೆಂಟ್‌ ಅಕೌಂಟ್‌ ನಂಬರ್‌) ಕಾರ್ಡ್‌ ದೊರಕಿಸುವ ನೂತನ ಯೋಜನೆ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಆದಾಯ ತೆರಿಗೆ ಇಲಾಖೆ ಅಭಿವೃದ್ಧಿಪಡಿಸುತ್ತಿರುವ ನೂತನ ಆ್ಯಪ್‌ನಲ್ಲಿ ಈ ಎಲ್ಲ ಸೌಲಭ್ಯಗಳನ್ನು ಆಧಾರ್‌ ಕಾರ್ಡ್‌ ಲಿಂಕ್‌ನೊಂದಿಗೆ ಸ್ಮಾರ್ಟ್‌ಫೋನ್‌ ಮೂಲಕ ಪಡೆಯಬಹುದಾಗಿದೆ.

ಈ ಹೊಸ ಸೌಲಭ್ಯಗಳ ಜತೆಗೆ ಆನ್‌ಲೈನ್‌ ತೆರಿಗೆ ಪಾವತಿ ಮಾಡಲು ಮತ್ತು ಆ್ಯಪ್‌ ಮೂಲಕ ಲೆಕ್ಕಪತ್ರ ವಿವರ ಸಲ್ಲಿಕೆ (ಟ್ಯಾಕ್ಸ್‌ ರಿಟರ್ನ್ಸ್‌) ಮಾಹಿತಿ ಕೂಡ ಪಡೆಯಬಹುದಾಗಿದೆ.

ಪ್ರಾಯೋಗಿಕ ಹಂತದಲ್ಲಿರುವ ಯೋಜನೆಗೆ ಕೇಂದ್ರ ಆರ್ಥಿಕ ಸಚಿವಾಲಯ ಅನುಮೋದನೆ ನೀಡಿದ ನಂತರ ಸಾರ್ವಜನಿಕ ಬಳಕೆಗೆ ಬಿಡುಗಡೆಯಾಗಲಿದೆ. ತೆರಿಗೆ ವಂಚನೆ ತಡೆಗಟ್ಟಲು ಮತ್ತು ನಾಗರಿಕರಿಗೆ ತ್ವರಿತ ಸೇವೆ ಒದಗಿಸಲು ಹೊಸ ಯೋಜನೆ ರೂಪಿಸಿರುವುದಾಗಿ ತೆರಿಗೆ ಇಲಾಖೆ ತಿಳಿಸಿದೆ.

ದೇಶದಲ್ಲಿ ಈಗಾಗಲೇ 25 ಕೋಟಿ ಜನ ಪಾನ್‌ಕಾರ್ಡ್‌ ಹೊಂದಿದ್ದಾರೆ. ಪ್ರತಿವರ್ಷ 2.5 ಕೋಟಿ ಜನ ಪಾನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ₹ 50 ಸಾವಿರಕ್ಕೂ ಮೇಲ್ಪಟ್ಟ ವಹಿವಾಟು ನಡೆಸಲು ಬ್ಯಾಂಕುಗಳಲ್ಲಿ ಪಾನ್‌ಕಾರ್ಡ್‌ ಸಂಖ್ಯೆ ನಮೂದಿಸುವುದು ಕಡ್ಡಾಯವಿದೆ.

ತೆರಿಗೆ ಇಲಾಖೆಯು ಜನವರಿ 1 ರ ನಂತರ ಹೊಸ ಪಾನ್‌ಕಾರ್ಡ್‌ಗಳನ್ನು ವಿತರಿಸುತ್ತಿದೆ. ಇದರ ಮೇಲೆ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ವಿವರಗಳನ್ನು ನಮೂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT