ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಸುರಕ್ಷತೆಗೆ ಎರಡು ಹಂತದ ಲಾಗ್‌ಇನ್‌

Last Updated 2 ಅಕ್ಟೋಬರ್ 2017, 3:07 IST
ಅಕ್ಷರ ಗಾತ್ರ

ಹೆಚ್ಚೆಚ್ಚು ಜನ ಹೆಚ್ಚು ಸಮಯವನ್ನು ಆನ್‌ಲೈನ್‌ನಲ್ಲಿ ಕಳೆಯುವ ಈ ಕಾಲದಲ್ಲಿ ಕುತಂತ್ರಿಗಳ ಕೆಲಸವೂ ಹೆಚ್ಚಾಗಿದೆ. ಈ ಕುತಂತ್ರಿಗಳು ಯಾವ ಯಾವ ಮಾರ್ಗಗಳ ಮೂಲಕ ಯಾರುಯಾರನ್ನು ಹ್ಯಾಕ್‌ ಮಾಡಿ ಎಂಥೆಂಥಾ ಮಾಲ್‌ವೇರ್‌, ವೈರಸ್‌ ಹರಿಬಿಡಬಹುದು ಎಂಬ ಆಲೋಚನೆಯಲ್ಲಿಯೇ ಇರುತ್ತಾರೆ.

ವೃತ್ತಿಪರ ಹ್ಯಾಕರ್‌ಗಳ ಕೆಲಸವೇ ಮತ್ತೊಬ್ಬರ ಖಾತೆಗಳಿಗೆ ಕನ್ನ ಹಾಕಿ ಅಲ್ಲಿನ ಮಾಹಿತಿ ಕದಿಯುವುದು. ಹೀಗಾಗಿ ಆನ್‌ಲೈನ್‌ ಖಾತೆಗಳ ಬಗ್ಗೆ ಎಷ್ಟು ಎಚ್ಚರದಿಂದಿದ್ದರೂ ಅದು ಕಡಿಮೆಯೇ.

ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳಿಗೆ ಕನ್ನ ಹಾಕುವ ಈ ಕುತಂತ್ರಿಗಳು ಮಾಡುವ ಅತಂತ್ರ ಒಂದೆರಡಲ್ಲ. ಫೇಸ್‌ಬುಕ್‌, ಟ್ವಿಟರ್‌ ಖಾತೆಗಳನ್ನು ಹ್ಯಾಕ್‌ ಮಾಡಿ, ಆ ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜ್‌, ಮಾಲ್‌ವೇರ್‌ ಹರಿಯಬಿಡುವುದು ಹ್ಯಾಕರ್‌ಗಳ ನಿತ್ಯ ಕಾರ್ಯ.

ಫೇಸ್‌ಬುಕ್‌ನ ಒಂದು ಅಕೌಂಟ್‌ನಿಂದ ಹರಿಬಿಟ್ಟ ಮಾಲ್‌ವೇರ್‌ ಆ ಅಕೌಂಟ್‌ ಜತೆಗೆ ನಂಟು ಹೊಂದಿರುವ ಎಲ್ಲಾ ಅಕೌಂಟ್‌ಗಳಿಗೂ ಕ್ಷಣಾರ್ಧದಲ್ಲಿ ಹೋಗಿಬಿಡುತ್ತದೆ. ಹೀಗಾದಾಗ ಅಕೌಂಟ್‌ ಹ್ಯಾಕ್‌ ಆದ ಖಾತೆದಾರ ಇನ್ನಿಲ್ಲದ ಮುಜುಗರ ಅನುಭವಿಸಬೇಕಾಗುತ್ತದೆ.

ಹೀಗೆ ಅಕೌಂಟ್‌ನಿಂದ ಅಕೌಂಟ್‌ಗೆ ಮಾಲ್‌ವೇರ್‌ ಹರಿಬಿಡುವ ಕುತಂತ್ರಿಗಳಿಂದ ಪಾರಾಗಲು ಹಲವು ವಿಧಾನಗಳಿವೆ. ಅವುಗಳಲ್ಲಿ ಮೊದಲನೆಯದು ಸುರಕ್ಷಿತ ಪಾಸ್‌ವರ್ಡ್‌. ಆದರೆ, ಸುರಕ್ಷಿತ ಪಾಸ್‌ವರ್ಡ್‌ ಅನ್ನೂ ರಂಗೋಲಿ ಕೆಳಗೆ ತೂರಿ ಕದಿಯುವ ಕುತಂತ್ರಿಗಳಿದ್ದಾರೆ. ಹೀಗಾಗಿ ಫೇಸ್‌ಬುಕ್‌ನಲ್ಲಿ ಎರಡು ಹಂತದ ಲಾಗ್‌ಇನ್‌ (Two-factor authentication) ಪರಿಪಾಠ ಬೆಳೆಸಿಕೊಳ್ಳುವುದು ಒಳ್ಳೆಯದು.

ಎರಡು ಹಂತದ ಲಾಗ್‌ಇನ್‌ ಅಭ್ಯಾಸ ಯಾವಾಗಲೂ ಒಳ್ಳೆಯದು. ಅದು ಜಿಮೇಲ್‌ ಖಾತೆಗಿರಲಿ, ಫೇಸ್‌ಬುಕ್‌ ಖಾತೆಗೇ ಇರಲಿ. ಎರಡು ಹಂತದ ಲಾಗ್‌ಇನ್‌ ಅಭ್ಯಾಸದಿಂದ ಕುತಂತ್ರಿಗಳನ್ನು ದೂರ ಇಡಬಹುದು. ಇದಕ್ಕಾಗಿ ಹೆಚ್ಚೇನೂ ಕಸರತ್ತು ಮಾಡಬೇಕಿಲ್ಲ. ಬೇಕಿರುವುದು ಲಾಗ್‌ಇನ್‌ ಆಗುವ ವೇಳೆ ಒಂದಷ್ಟು ತಾಳ್ಮೆ ಮಾತ್ರ.

ಫೇಸ್‌ಬುಕ್‌ನಲ್ಲಿ ಎರಡು ಹಂತದ ಸುರಕ್ಷಿತ ಲಾಗ್‌ಇನ್‌ ಎನೆಬಲ್‌ ಮಾಡಲು ಮೊದಲು Settings ಮೇಲೆ ಕ್ಲಿಕ್‌ ಮಾಡಿ. ಬಳಿಕ Security ಕ್ಲಿಕ್ಕಿಸಿ. ಈಗ ಕಾಣುವ ಪುಟದಲ್ಲಿ Login Approvals ಮೇಲೆ ಕ್ಲಿಕ್‌ ಮಾಡಿ. ಇಲ್ಲಿ Two-factor authentication ಅನ್ನು ಎನೆಬಲ್‌ ಮಾಡಿ.

ನಿಮ್ಮ ಮೊಬೈಲ್‌ಗೆ ಸೆಕ್ಯುರಿಟಿ ಕೋಡ್‌ ಪಡೆಯಲು ನಿಮ್ಮ ಮೊಬೈಲ್‌ ನಂಬರ್‌ ಅನ್ನು ಸೇರಿಸಿ. ಮೊಬೈಲ್‌ ನಂಬರ್‌ ಖಾತರಿಗಾಗಿ ಬರುವ ಕೋಡ್‌ ಅನ್ನು ನಮೂದಿಸಿ. ಪ್ರತಿ ಲಾಗ್‌ಇನ್‌ಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಾಗ್‌ಇನ್‌ ಅಪ್ರೂವ್‌ ಕೇಳುತ್ತದೆ. ಲಾಗ್‌ಇನ್‌ ಅಪ್ರೂವ್ ತಡವಾದರೆ ಜನರೇಟ್‌ ಟೆಕ್ಸ್ಟ್‌ ಮೆಸೇಜ್‌ ಮೇಲೆ ಕ್ಲಿಕ್ಕಿಸಿ.

ಈಗ ನಿಮ್ಮ ಫೇಸ್‌ಬುಕ್‌ ಖಾತೆ ಎರಡು ಹಂತದ ಸುರಕ್ಷತಾ ಲಾಗ್‌ಇನ್‌ಗೆ ಒಳಗಾಗಿರುತ್ತದೆ. ನಂತರ ಪ್ರತಿ ಬಾರಿ ಲಾಗ್‌ಇನ್‌ ಆಗುವಾಗಲೂ ಲಾಗ್‌ಇನ್‌ ಅಪ್ರೂವ್‌ ಕೇಳುತ್ತದೆ ಅಥವಾ ನಿಮ್ಮ ಇಮೇಲ್‌ ಇಲ್ಲವೇ ಮೊಬೈಲ್‌ಗೆ ಸುರಕ್ಷತಾ ಕೋಡ್‌ ಜನರೇಟ್‌ ಆಗುತ್ತದೆ. ಸುರಕ್ಷತಾ ಕೋಡ್‌ ನಮೂದಿಸದ ಹೊರತು ನಿಮ್ಮ ಖಾತೆಗೆ ಲಾಗ್‌ಇನ್‌ ಆಗಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT