ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟ ಕೊಡುವುದೇಕೆ?

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾನು ಕಳೆದ ಮೂರು ದಶಕಗಳಲ್ಲಿ 92 ಬಾರಿ ರಕ್ತದಾನ ಮಾಡಿದ್ದೇನೆ. 90ರ ದಶಕದಲ್ಲಿ ರಕ್ತದಾನ ಹಿಂಸೆ ಎನಿಸುತ್ತಿತ್ತು. ನಂತರ ವೈಜ್ಞಾನಿಕ ಆವಿಷ್ಕಾರಗಳ ಫಲವಾಗಿ, ಸೂಜಿಯನ್ನು ಚುಚ್ಚುವಾಗ ಅಷ್ಟಾಗಿ ನೋವುಂಟಾಗುತ್ತಿರಲಿಲ್ಲ. ಆದರೆ ಆರು ತಿಂಗಳಿನಿಂದೀಚೆಗೆ ರಕ್ತ ತೆಗೆಯುವಾಗ ಚುಚ್ಚುವ ಸೂಜಿಯಿಂದ ವಿಪರೀತ ನೋವಾಗುತ್ತಿದೆ.

ನೋವು ಸಹಿಸಲಾರದೆ ರಕ್ತನಿಧಿಯ ತಂತ್ರಜ್ಞರನ್ನು ‘ಇದೇಕೆ ಇಷ್ಟು ನೋವಾಗುತ್ತಿದೆ’ ಎಂದು ಕೇಳಿದ್ದಕ್ಕೆ ‘ಸರ್, ಇಷ್ಟು ದಿನ ನಾವು ಖಾಸಗಿಯವರಿಂದ ರಕ್ತದ ಪ್ಯಾಕೆಟ್‌ಗಳನ್ನು ಖರೀದಿಸುತ್ತಿದ್ದೆವು. ಆದರೆ ಕಳೆದ 6 ತಿಂಗಳಿನಿಂದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿಯಿಂದಲೇ ಖರೀದಿಸುವಂತೆ ಕಟ್ಟುನಿಟ್ಟಾದ ಆದೇಶವಿದೆ. 

ಅವರು ಸರಬರಾಜು ಮಾಡುವ ಪ್ಯಾಕೆಟ್‌ನ ಸೂಜಿಗಳು ಖಾಸಗಿಯವರು ಪೂರೈಸುತ್ತಿದ್ದ ಸೂಜಿಗಳಿಗಿಂತ ಬಹಳ ದಪ್ಪವಿರುವುದರಿಂದ ಹೆಚ್ಚು ನೋವಾಗುತ್ತದೆ. ಎಷ್ಟಾದರೂ ಸರ್ಕಾರದ ಪೂರೈಕೆಯಲ್ಲವೇ?’ ಎಂದು ವ್ಯಂಗ್ಯವಾಗಿ ನಕ್ಕರು!

ರಕ್ತದಾನ ಮಾಡುವುದೇ ದುಸ್ತರ ಎಂಬಂತಿರುವಾಗ, ನಯನಾಜೂಕಿನಿಂದ ರಕ್ತ ತೆಗೆದುಕೊಳ್ಳಲು ಹೊಸ ಹೊಸ ತಂತ್ರಜ್ಞಾನ ಬಳಸಬೇಕಾದ ಅವಶ್ಯಕತೆ ಇದೆ.  ಅಂಥದ್ದರಲ್ಲಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಿ, ಮಾನವೀಯತೆಯಿಂದ ರಕ್ತದಾನ ಮಾಡಬಯಸುವ ಸಹೃದಯರಿಗೆ ಇಂಥ ಕಷ್ಟ ಕೊಡುವುದೇಕೆ?
- ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT