ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ತಂಡಕ್ಕೆ ಮುನ್ನಡೆ

ಕ್ರಿಕೆಟ್: ಅಚ್ಚರಿ ಮೂಡಿಸಿದ ಭಾರತ ತಂಡದ ಡಿಕ್ಲೇರ್
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): 19 ವರ್ಷದ ಒಳಗಿನವರ ನಾಲ್ಕು ದಿನಗಳ ‘ಯೂತ್‌’ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡದ ಎದುರು ಇಂಗ್ಲೆಂಡ್‌ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಜಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ತಂಡ ಮ್ಯಾಕ್ಸ್‌ ಹೋಲ್ಡನ್‌ ಮತ್ತು ಜಾರ್ಜ್‌ ಬ್ರಾಟ್ಲೆಟ್‌ ಅವರ ಶತಕಗಳ ನೆರವಿನಿಂದ 501 ರನ್ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.

ಆತಿಥೇಯ ತಂಡದವರು 122 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 431 ರನ್ ಗಳಿಸಿ ಡಿಕ್ಲೇರ್ ಮಾಡಿ ಕೊಂಡರು.  ಇನಿಂಗ್ಸ್‌ ಮುನ್ನಡೆಗೆ 70 ರನ್‌ಗಳಷ್ಟೇ ಅಗತ್ಯವಿದ್ದರೂ ಭಾರತ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದ್ದು ಅಚ್ಚರಿಗೆ ಕಾರಣವಾಯಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ ಮೂರನೇ ದಿನವಾದ ಬುಧವಾರದ ಅಂತ್ಯಕ್ಕೆ ಒಂಬತ್ತು ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 23 ರನ್ ಗಳಿಸಿ ಒಟ್ಟು ಮುನ್ನಡೆಯನ್ನು 93 ರನ್‌ಗೆ ಹೆಚ್ಚಿಸಿಕೊಂಡಿದೆ.

ಫೆರಾರಿಯೊ ಶತಕ: ಮಂಗಳವಾರದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 156 ರನ್ ಕಲೆ ಹಾಕಿದ್ದ ಭಾರತ ತಂಡಕ್ಕೆ ಡ್ಯಾರ್ಲಿ ಫೆರಾರಿಯೊ (117, 228 ನಿಮಿಷ, 173 ಎಸೆತ, 14 ಬೌಂಡರಿ) ಶತಕ ಗಳಿಸಿ ನೆರವಾದರು.

ಬಲ ತುಂಬಿದ ಜತೆಯಾಟ: ಎರಡು, ಮೂರು, ಐದು, ಆರು ಮತ್ತು ಎಂಟನೇ ವಿಕೆಟ್‌ಗಳಿಗೆ ಬಂದ  ಐದು ಅರ್ಧ ಶತಕಗಳ ಜೊತೆಯಾಟದಿಂದ ಭಾರತ ತಂಡಕ್ಕೆ ಎದುರಾಳಿ ತಂಡ ನೀಡಿದ್ದ ಮೊತ್ತದ ಸನಿಹ ಬರಲು ಸಾಧ್ಯ ವಾಯಿತು. ಫೆರಾರಿಯೊ ಮತ್ತು ಆರ್‌.ಐ ಠಾಕೂರ್ ಐದನೇ ವಿಕೆಟ್‌ಗೆ 56 ರನ್ ಸೇರಿಸಿದರೆ, ಆರನೇ ವಿಕೆಟ್‌ಗೆ 60 ರನ್ ಬಂದವು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 131.1 ಓವರ್‌ಗಳಲ್ಲಿ 501ಡಿಕ್ಲೇರ್ಡ್‌ ಮತ್ತು ಎರಡನೇ ಇನಿಂಗ್ಸ್‌ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 23  (ಹೆರ್ರಿ ಬ್ರೂಕ್ಸ್‌ ಬ್ಯಾಟಿಂಗ್‌ 15; ಕನಿಷ್ಕ ಸೇಥ್‌ 8ಕ್ಕೆ1). ಭಾರತ ಮೊದಲ ಇನಿಂಗ್ಸ್‌ 122 ಓವರ್‌ಗಳಲ್ಲಿ 8  ವಿಕೆಟ್‌ಗೆ 431 ಡಿಕ್ಲೇರ್ಡ್‌. (ಅಭಿಷೇಕ್ ಗೋಸ್ವಾಮಿ 66, ಸೌರಭ್‌ ಸಿಂಗ್‌ 62, ಜೊಂಟಿ ಸಿಧು 33, ಆರ್‌.ಐ. ಠಾಕೂರ್ 31, ಡ್ಯಾರ್ಲಿ ಫೆರಾರಿಯೊ 117, ಸುರೇಶ್ ಲೋಕೇಶ್ವರಿ 22, ಸಿಜೊಮನ್‌ ಜೋಸೆಫ್‌ ಔಟಾಗದೆ 62; ಹೆನ್ರಿ ಬ್ರೂಕಿಸ್‌ 75ಕ್ಕೆ2, ಲಿಯಾಮ್ ಪ್ಯಾಟರ್‌
ಸನ್‌ ವೈಟ್‌ 104ಕ್ಕೆ2, ಇವುನ್‌ ವುಡ್ಸ್‌ 55ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT