ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟಮ್‌ ತಯಾರಿಕಾ ಘಟಕ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:   ವಿದ್ಯುನ್ಮಾನ ಸಲಕರಣೆಗಳ ತಯಾರಕ ಸಂಸ್ಥೆಯಾಗಿರುವ ಸೆಂಟಮ್‌ ಎಲೆಕ್ಟ್ರಾನಿಕ್ಸ್‌ನ ನೂತನ  ಅತ್ಯಾಧುನಿಕ  ವಿನ್ಯಾಸ ಮತ್ತು ತಯಾರಿಕಾ ಘಟಕವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್‌  ಅವರು ಬುಧವಾರ   ನಗರದಲ್ಲಿ ಉದ್ಘಾಟಿಸಿದರು.

ಸೆಂಟಮ್‌ ಎಲೆಕ್ಟ್ರಾನಿಕ   ಬೆಂಗಳೂರಿನಲ್ಲಿ ಸ್ಥಾಪಿಸಿರುವ  ನಾಲ್ಕನೇಯ ಘಟಕ ಇದಾಗಿದೆ. ದೇವನಹಳ್ಳಿ ಸಮೀಪದ ಏರೊಸ್ಪೇಸ್‌ ಪಾರ್ಕ್‌ನಲ್ಲಿ ಈ ಘಟಕವನ್ನು ಆರಂಭಿಸಲಾಗಿದೆ.

‘ಭಾರತ ಮತ್ತು ಕರ್ನಾಟಕದಲ್ಲಿಯೇ ತಯಾರಿಸಿ’ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಇಂಥ ತಯಾರಿಕಾ ಘಟಕಗಳು ಪೂರಕವಾಗಿ ಕೆಲಸ ಮಾಡಲಿ’ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರು ಆಶಯ ವ್ಯಕ್ತಪಡಿಸಿದರು.

ಸೆಂಟಮ್‌ ಅಧ್ಯಕ್ಷ   ಅಪ್ಪಾರಾವ್‌ ಮಲ್ಲವರಪು ಅವರು ಮಾತನಾಡಿ, ‘ದೇಶದ ರಕ್ಷಣೆ ಹಾಗೂ ವೈಮಾಂತರಿಕ್ಷ ಉದ್ಯಮಗಳಿಗೆ ಅಗತ್ಯವಿರುವ ಸಾಧನ–ಸಲಕರಣೆಗಳ ರಚನೆ, ವಿನ್ಯಾಸ ಮತ್ತು ತಯಾರಿಕೆಯನ್ನು ಈ ಘಟಕದಲ್ಲಿ ನಿರ್ವಹಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT