ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ: ನಾಯಕ

ಸಂತ ಸೇವಾಲಾಲ ಅವರ 278 ನೇ ಜಯಂತ್ಯುತ್ಸವ ಹಾಗೂ ಬಂಜಾರ ಸಮಾವೇಶ
Last Updated 16 ಫೆಬ್ರುವರಿ 2017, 7:06 IST
ಅಕ್ಷರ ಗಾತ್ರ
ಹುಣಸಗಿ: ಬಂಜಾರ ಸಮಾಜದವರು ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಾಜವು ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸ ಬೇಕು ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ನಿವೃತ್ತ ಉಪಕುಲಸಚಿವ ಎಲ್.ಆರ್.ನಾಯಕ ನುಡಿದರು.
 
ಹುಣಸಗಿ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಅವರ 278 ನೇ ಜಯಂತ್ಯುತ್ಸವ ಹಾಗೂ ತಾಲ್ಲೂಕು ಮಟ್ಟದ ಬಂಜಾರ ಸಮಾ ವೇಶದಲ್ಲಿ ಅವರು ಮಾತ ನಾಡಿದರು.
 
ಬಂಜಾರ ಸಂಸ್ಕೃತಿ ದೇಶದಲ್ಲಿಯೇ ವಿಶಿಷ್ಟ ಸಂಸ್ಕೃತಿಯಾಗಿದೆ. ಪ್ರಾಮಾ ಣಿಕತೆಗೆ ಹೆಸರಾಗಿರುವ ಈ ಸಮುದಾಯ ಸನಾತನ ಸಂಸ್ಕೃತಿಯನ್ನು ಕಾಪಾ ಡಿಕೊಂಡು ಬಂದಿದೆ ಎಂದರು. ಇಂದಿನ ಯುವಕರು ಸಮಾಜ ಸಂಘಟನೆಯೊಂದಿಗೆ ಸರ್ಕಾರಿ ಸೌಲಭ್ಯ ಗಳನ್ನು ಸಮರ್ಪಕವಾಗಿ ಬಳಸಿ ಕೊಂಡು ಮುಂದೆ ಬರಬೇಕೆಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭೀಮು ಮಹಾರಾಜರು ಮಾತನಾಡಿ, ಸಮಾಜದ ಹಿರಿಯ ಮುಖಂಡರು ಶೈಕ್ಷಣಿಕ ಬೆಳವಣಿಗೆಗೆ ಪ್ರಯತ್ನಿಸಬೇಕು. ಈ ಸಮುದಾಯದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು. ಈ ಮೂಲಕ ಸಮಾಜದ ಋಣ ತಿರಿಸಬೇಕು ಎಂದರು.
 
ಬಂಜಾರ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಾನಾಯಕ ಮಾತನಾಡಿ, ಹಿರಿಯರ ಸಹಕಾರದಿಂದ ಹುಣಸಗಿಯಲ್ಲಿ ಬಂಜಾರಾ ಸಮಾವೇಶ ಯಶಸ್ವಿಯಾಗಿ ಮಾಡಿದ್ದು, ಇದು ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಈ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ತಾಂಡಾಗಳಲ್ಲಿಯೂ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಮುಖಂಡ ಶೇಖರನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪರಶುರಾಮ ಮಹಾರಾಜ ಹಾಗೂ ಕೃಷ್ಣಾ ಪೂಜಾರಿ ಸಾನಿಧ್ಯ ವಹಿಸಿದ್ದರು.
 
ಹುಣಸಗಿ ಸಿಪಿಐ ಟಿ.ಆರ್.ಪವಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ ಸದಸ್ಯ ನಾರಾ ಯಣ.ಡಿ.ನಾಯಕ, ಮುಖಂಡರಾದ ಶಾಂತಿಲಾಲ, ತಿರುಪತಿನಾಯಕ, ವೆಂಕ ಟೇಶ ಸಾಹುಕಾರ, ಗ್ರಾ.ಪಂ ಅಧ್ಯಕ್ಷ ಧೀರು ನಾಯಕ, ಉಪಾಧ್ಯಕ್ಷ ತಾರಾ ಸಿಂಗ್ ವಜ್ಜಲ ತಾಂಡಾ, ವಿಠ್ಠಲ ಪವಾರ್, ಶೇಖರ ನಾಯಕ, ಸೊಮ್ಲಾ ನಾಯಕ ಇದ್ದರು.
 
ಗುರು ರಾಠೋಡ ಸ್ವಾಗತಿಸಿದರು. ತಾರಾನಾಥ ಚವ್ವಾಣ ನಿರೂಪಿಸಿದರು. ಬಾಸುನಾಯಕ ವಂದಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ವೃತ್ತದ ಮುಖಾಂತರ ಸೇವಾಲಾಲ ವೃತ್ತದವರೆಗೂ ಸೇವಾಲಾಲರ ಭಾವಚಿತ್ರ ಮೆರವಣಿಗೆ ನಡೆಯಿತು. ಲಂಬಾಣಿ ನೃತ್ಯ, ಪುರುಷರ ಭಜನೆ , ಕುಂಭ ಕಳಸ ಮೆರವಣಿಗೆ ಗಮನ ಸೆಳೆಯಿತು.  ಯುವಕರು ಧ್ವಜ ಹಿಡಿದು ಬಂಜಾರಾ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT