ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಸ್ಥಾನ ಕಳೆದುಕೊಂಡ ಕಾಂಗ್ರೆಸ್

ನಗರಸಭೆ ಉಪಚುನಾವಣೆ : ಬಿಜೆಪಿ–ಕಾಂಗ್ರೆಸ್ ತಲಾ ಮೂರು ಸ್ಥಾನ
Last Updated 16 ಫೆಬ್ರುವರಿ 2017, 7:42 IST
ಅಕ್ಷರ ಗಾತ್ರ
ಪುತ್ತೂರು:  ಇಲ್ಲಿಯ ನಗರಸಭೆಯ 6 ಸ್ಥಾನಗಳಿಗೆ ಭಾನುವಾರ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿದ್ದು, ಎರಡೂ ಪಕ್ಷಗಳು ತಲಾ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಆದರೆ, ಕಾಂಗ್ರೆಸ್ ತಕ್ಕೆಯಲ್ಲಿದ್ದ 6 ಸ್ಥಾನಗಳ ಪೈಕಿ 3 ಸ್ಥಾನಗಳನ್ನು  ಕಸಿದುಕೊಳ್ಳುವ ಮೂಲಕ, ನಗರಸಭೆಯಲ್ಲಿ ಬಿಜೆಪಿ ಮತ್ತೆ ಬಹುಮತ ಸಾಧಿಸಿದೆ.
 
ಪಕ್ಷ ವಿರೋಧಿ ಚಟುವಟಿಕೆಯಿಂದಾ ಗಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಆರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ ಗೊಂಡಿದ್ದರಿಂದ ಆ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವ ಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಕಾಂಗ್ರೆಸ್ ತನ್ನ ತೆಕ್ಕೆಯಲ್ಲಿದ್ದ  6 ಸ್ಥಾನಗಳ ಪೈಕಿ 3ರಲ್ಲಿ ಮಾತ್ರ ಗೆಲುವು ಸಾಧಿಸುವ ಮೂಲಕ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಬಿಜೆಪಿ ಸದಸ್ಯರ ಬಲ 15ಕ್ಕೆ ಏರಿದ್ದು, ಕಾಂಗ್ರೆಸ್ ಬಲ 15ರಿಂದ 12 ಕ್ಕೆ ಕುಸಿದಿದೆ.
 
ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ವರ್ಣಲತಾ ಹೆಗ್ಡೆ, ಝೊಹರಾ ನಿಸಾರ್, ಉಷಾ ಆಚಾರ್ಯ, ಬಿಜೆಪಿಯ ಬಾಳಪ್ಪ ಯಾನೆ ಸುಂದರ ಪೂಜಾರಿ, ಶ್ಯಾಮಲಾ ಕರ್ಕುಂಜ ಮತ್ತು ರಮೇಶ್ ರೈ ಗೆಲುವು ಸಾಧಿಸಿದ್ದಾರೆ. 
 
ಕಚ್ಚಾಟಕ್ಕೆ ಬೆಲೆತೆತ್ತ ಕಾಂಗ್ರೆಸ್‌:  ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಪುತ್ತೂರು ಪುರಸಭೆಯ 27 ಸ್ಥಾನಗಳ ಪೈಕಿ 15ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಮೊದಲ ಅವಧಿಯ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ ವೇಳೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನೊಳಗೆ ನಡೆದಿದ್ದ ಆಂತರಿಕ ಭಿನ್ನಮತದ ಪರಿಣಾಮವಾಗಿ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದ ವಾಣಿ ಶ್ರೀಧರ್ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳ ನ್ಯಾಯಾ ಲಯ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿತ್ತು. ಆದರೆ ಈ ಪ್ರಕರಣ ಇದೀಗ ಹೈಕೋರ್ಟ್‌ ಹಂತದಲ್ಲಿದ್ದು, ಮತ ಚಲಾಯಿಸುವ ಹಕ್ಕಿಲ್ಲದ ಷರತ್ತಿನೊಂದಿಗೆ ಅವರ ಸದಸ್ಯತ್ವ ಇನ್ನೂ ಊರ್ಜಿತವಾಗಿದೆ. 
 
ಈ ನಡುವೆಯೇ ಪುತ್ತೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಗೇರಿತ್ತು. ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ವೇಳೆ ಕಾಂಗ್ರೆಸ್‌ನೊಳಗೆ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತ್ತು. ಅವಕಾಶ ಸಿಗದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರು, 5 ಮಂದಿ ಕಾಂಗ್ರೆಸ್ ಸದಸ್ಯರ ಬೆಂಬಲ ದೊಂದಿಗೆ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ನಗರಸಭೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
 
ಪಕ್ಷ ವಿರೋಧಿ ಚಟುವಟಿಕೆಯ ಆರೋಪದಡಿ ಕಾಂಗ್ರೆಸ್ ಸದಸ್ಯ ಎಚ್. ಮಹಮ್ಮದ್ ಆಲಿ ಅವರು ನಡೆಸಿದ ಕಾನೂನು ಹೋರಾಟದ ಪರಿಣಾಮವಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಅವರ 5 ಮಂದಿ ಬೆಂಬಲಿಗ ಸದಸ್ಯರಾದ ನವೀನ್ ನಾಯಕ್‌್ ಬೆದ್ರಾಳ, ಸೀಮಾ ಗಂಗಾಧರ್, ದೀಕ್ಷಾ ಪೈ, ಕಮಲಾ ಆನಂದ್ ಮತ್ತು ರೇಖಾ ಯಶೋಧರ್ ಅವರ ಸದಸ್ಯತ್ವ ರದ್ದು ಗೊಂಡಿತ್ತು. ಇದರಿಂದ ತೆರವಾಗಿದ್ದ ಸ್ಥಾನಗಳಿಗೆ ಇದೀಗ ಚುನಾವಣೆ ನಡೆ ದಿದ್ದು, ಕಾಂಗ್ರೆಸ್ ತನ್ನಲ್ಲಿದ್ದ ಎಲ್ಲ ಸ್ಥಾನಗ ಳಲ್ಲಿ ಜಯಗಳಿಸಲು ವಿಫಲವಾಗಿದೆ. 
 
ಬಹುಮತವಿಲ್ಲದ ಕಾಂಗ್ರೆಸ್‌ ಆಡಳಿತ
 
ನಗರಸಭೆಯ ಅಧ್ಯಕ್ಷ ಸ್ಥಾನ ಮೀಸಲಾತಿಯ ಪರಿಣಾಮವಾಗಿ ಕಾಂಗ್ರೆಸ್‌ನ ಜಯಂತಿ ಬಲ್ನಾಡು ಅವರಿಗೆ ಒಲಿದಿತ್ತು. ಆದರೆ ಇದೀಗ ಬಿಜೆಪಿ ಸದಸ್ಯರ ಬಲ ಏರಿಕೆಯಾಗಿರುವುದರಿಂದ ಬಹುಮತವಿಲ್ಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಮುಂದಿನ ಒಂದು ವರ್ಷದ ತನಕ ಆಡಳಿತ ನಡೆಸಬೇಕಾಗಿ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT